ಲಂಡನ್: ಪಿಎನ್ ಬ್ಯಾಂಕ್ನಿಂದ ₹ 13 ಸಾವಿರ ಕೋಟಿ ಸಾಲ ಪಡೆದು ಮರುಪಾವತಿಸಿದೆ ಲಂಡನ್‌ನಲ್ಲಿ ತಲೆ ಮರೆಸಿಕೊಂಡಿದ್ದ ದೇಶ ಭ್ರಷ್ಟ ಆರ್ಥಿಕ ಅಪರಾಧಿ ವಜ್ರದ ಉದ್ಯಮಿ ನೀರವ್ ಮೋದಿ ಸಲ್ಲಿಸಿದ್ದ ಜಾಮೀನು ಅರ್ಜಿ ಮತ್ತೆ ತಿರಸ್ಕೃತಗೊಂಡಿದೆ.
ಭಾರತಕ್ಕೆ ಹಸ್ತಾಂತರಗೊಳ್ಳಲು ದಿನಗಣನೆ ಎದುರಿಸುತ್ತಿರುವ ನೀರವ್ ಮೋದಿಯ ಜಾಮೀನು ಅರ್ಜಿ ವಿಚಾರಣೆ ಬ್ರಿಟನ್ ಹೈಕೋರ್ಟ್‌ನಲ್ಲಿ ಇಂದು ಅಂತ್ಯಗೊಂಡಿದೆ.
-
This was #NiravModi's fourth bail application at the UK court which was refused. https://t.co/Jxv8rSK8Q0
— ANI (@ANI) June 12, 2019 " class="align-text-top noRightClick twitterSection" data="
">This was #NiravModi's fourth bail application at the UK court which was refused. https://t.co/Jxv8rSK8Q0
— ANI (@ANI) June 12, 2019This was #NiravModi's fourth bail application at the UK court which was refused. https://t.co/Jxv8rSK8Q0
— ANI (@ANI) June 12, 2019
ಕಳೆದ ಮಾರ್ಚ್ 19ರಂದು ಲಂಡನ್‌ನಲ್ಲಿ ನೀರವ್ ಮೋದಿಯನ್ನು ಬಂಧಿಸಲಾಗಿತ್ತು. ರಾಯಲ್ ಕೋರ್ಟ್ಸ್ ಆಫ್ ಜಸ್ಟಿಸ್‌ನ ನ್ಯಾಯಮೂರ್ತಿ ಇಂಗ್ರಿಡ್ ಸಿಮ್ಲರ್ ತೀರ್ಪು ನೀಡಿದ್ದಾರೆ.
ಇತ್ತ ಮುಂಬೈ ಅರ್ಥರ್ ರಸ್ತೆಯ ಕಾರಾಗೃಹದಲ್ಲಿ ನೀರವ್ ಮೋದಿಯನ್ನು ಇರಿಸಲು ಸೆಲ್ ನಂ.12ರಲ್ಲಿ ಕೊಠಡಿಗಳನ್ನು ಸಜ್ಜು ಮಾಡಲಾಗುತ್ತಿದೆ. ಜೈಲಿನ ಕೊಠಡಿಯಲ್ಲಿನ ಸ್ಥಿತಿಗತಿ, ಅನುಕೂಲಗಳ ವಿವರಗಳನ್ನು ಬ್ರಿಟನ್ ಕೋರ್ಟ್‌ಗೆ ಈಗಾಗಲೇ ವರದಿ ಸಲ್ಲಿಸಲಾಗಿದೆ.