ನವದೆಹಲಿ: ಬ್ರೌಸಿಂಗ್ ಹಿಸ್ಟರಿ ಮತ್ತು ಬಳಕೆದಾರರ ಹುಡುಕಾಟ ಚಟುವಟಿಕೆಗಳನ್ನು ಇತರರಿಂದ ವೀಕ್ಷಣೆ ತಡೆಯುವ ಪ್ರಯತ್ನವಾಗಿ, ಗೂಗಲ್ ಈಗ ಹಿಸ್ಟರಿ ಸರ್ಚ್ ಪುಟವನ್ನು ಪಾಸ್‌ವರ್ಡ್ ಮುಖಾಂತರ ರಕ್ಷಿಸಲು ಅನುಮತಿಸುತ್ತಿದೆ.
ಬಳಕೆದಾರರು ಗೂಗಲ್ ಟೂಲ್ ಅಥವಾ ಉತ್ಪನ್ನವನ್ನು (ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅಥವಾ ಕ್ರೋಮ್ ಬ್ರೌಸರ್) ಬಳಸಿದಾಗಲೆಲ್ಲ, ಅವರ ಚಟುವಟಿಕೆಯ ಇತಿಹಾಸವನ್ನು ಸಂಗ್ರಹಿಸಲಾಗುತ್ತದೆ. ಅವರಿಗೆ ‘ನನ್ನ ಚಟುವಟಿಕೆ’ (ಮೈ ರಿವ್ಯೂವ್) ಮೂಲಕ ವಿಮರ್ಶಿಸಿಸು ಫೀಚರ್ ಲಭ್ಯವಾಗಲಿದೆ.
ಈಗ, ಬಳಕೆದಾರರು ಹೆಚ್ಚುವರಿ ಪರಿಶೀಲನೆಯನ್ನು ಆನ್ ಮಾಡಿದರೆ, ಅವರ ಚಟುವಟಿಕೆಯಲ್ಲಿ ಪೂರ್ಣ ಹಿಸ್ಟರಿ ನೋಡುವ ಅಥವಾ ಅಳಿಸುವ ಮೊದಲು ಅದು ನಿಜವಾಗಿಯೂ ನೀವೇ ಎಂದು ಗೂಗಲ್ ಖಚಿತಪಡಿಸುತ್ತದೆ ಎಂದು ಕಂಪನಿ ತಿಳಿಸಿದೆ.
ಟೂಲ್ಗಳಲ್ಲಿ ಬಳಕೆದಾರರ ಇತಿಹಾಸವನ್ನು ಸುರಕ್ಷಿತವಾಗಿಡಲು ಇದು ಸಹಾಯ ಮಾಡುತ್ತದೆ. ಈ ಸೆಟ್ಟಿಂಗ್ ಬಳಕೆದಾರರ ಚಟುವಟಿಕೆಗೆ ಮಾತ್ರ ಅನ್ವಯಿಸುತ್ತದೆ. ಬಳಕೆದಾರರ ಇತಿಹಾಸವು ಇತರ ಗೂಗಲ್ ಉತ್ಪನ್ನಗಳಲ್ಲಿ ಇನ್ನೂ ಕಾಣಿಸಿಕೊಳ್ಳಬಹುದು ಎಂದಿದೆ.