ನವದೆಹಲಿ: ತನ್ನ ಮೊಬೈಲ್ ಕರೆ ಹಾಗೂ ಡೇಟಾ ದರ ಕೆಲವೇ ವಾರಗಳಲ್ಲಿ ಹೆಚ್ಚಳವಾಗಲಿದೆ ಎಂದು ಬಿಲೇನಿಯನರ್ ಮುಖೇಶ್ ಅಂಬಾನಿ ಮುಖ್ಯಸ್ಥರಾಗಿರುವ ರಿಲಯನ್ಸ್ ಜಿಯೋ ಮಾಹಿತಿ ನೀಡಿದೆ.
ಇತ್ತೀಚೆಗೆ ಭಾರ್ತಿ ಏರ್ಟೆಲ್ ಹಾಗೂ ವೋಡಾಪೋನ್ - ಐಡಿಯಾ ಮುಂದಿನ ತಿಂಗಳಿಂದ ಡೇಟಾ ಮತ್ತು ಕರೆ ದರ ಏರಿಕೆ ಮಾಡುವುದಾಗಿ ಹೇಳಿದ ಬಳಿಕ ಜಿಯೋ ತನ್ನ ವಾಯ್ದೆ ಹೊರಡಿಸಿದೆ.
ಟೆಲಿಕಾಂ ಸುಂಕ ದರ ಪರಿಷ್ಕರಣೆಯ ಕುರಿತು ಟೆಲಿಕಾಂ ನಿಯಂತ್ರಕ 'ಟ್ರಾಯ್'ನೊಂದಿಗೆ ಸಮಾಲೋಚನೆ ಆರಂಭಿಸುವ ಸಾಧ್ಯತೆಯಿದೆ ಎಂದು ಜಿಯೋ ಹೇಳಿದೆ. ಇತರ ನಿರ್ವಾಹಕರಂತೆ ನಾವು ಸರ್ಕಾರದೊಂದಿಗೆ ಕೆಲಸ ಮಾಡುತ್ತೇವೆ. ಭಾರತೀಯ ಗ್ರಾಹಕರಿಗೆ ಅನುಕೂಲವಾಗುವಂತೆ ಉದ್ಯಮ ಬಲಪಡಿಸಲು ನಿಯಂತ್ರಕ ಆಡಳಿತ ನಿಯಮಗಳಿಗೆ ಬದ್ಧವಾಗಿ ನಡೆಯುತ್ತೇವೆ ಎಂದಿದೆ.