ETV Bharat / business

ನೊವಾವಾಕ್ಸ್​ ಕೋವಿಡ್​ ಲಸಿಕೆ​: 100 ಮಿಲಿಯನ್ ಲಸಿಕೆ ತಯಾರಿಕೆಗೆ ಭಾರತದ ಕಂಪನಿ ಜತೆ ಒಪ್ಪಂದ - Covid 19

ಭಾರತ ಹಾಗೂ ಇತರ ಕೊರೊನಾ ವೈರಸ್ ಪಿಡೀತ ದೇಶಗಳಿಗಾಗಿ ಸುಮಾರು 100 ಮಿಲಿಯನ್ ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆ ತಯಾರಿಸುವ ಉದ್ದೇಶದಿಂದ ಈ ಎರಡೂ ಸಂಸ್ಥೆಗಳು ಒಗ್ಗೂಡಿರುವುದಾಗಿ ಘೋಷಿಸಿವೆ. ಸೀರಮ್ ಇನ್ಸಿಟ್ಯೂಟ್ ಆಫ್ ಇಂಡಿಯಾ, ಬಿಲ್ ಹಾಗೂ ಮೆಲಿಂಡಾ ಗೇಟ್ಸ್ ಹಾಗೂ ಗಾವಿ ಲಸಿಕಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸುಮಾರು 100 ಮಿಲಿಯನ್ ಲಸಿಕೆಗಳನ್ನು ಉತ್ಪಾದಿಸಲು ನಿರ್ಧರಿಸಲಾಗಿದೆ.

Novavax
ನೊವಾವಾಕ್ಸ್
author img

By

Published : Aug 13, 2020, 8:45 PM IST

ಹೈದರಾಬಾದ್: ಜೈವಿಕ ತಂತ್ರಜ್ಞಾನ ಕಂಪನಿ ನೋವಾವಾಕ್ಸ್ ಮುಂದಿನ ಪೀಳಿಗೆಯ ಗಂಭೀರ ಸಾಂಕ್ರಾಮಿಕ ಕಾಯಿಲೆಗಳಿಗೆ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಸ್ಟೇಜ್​-2 ಯಶಸ್ವಿಯಾದ ಡೇಟಾ ಕಂಡುಬಂದಿವೆ. ನಿಯಂತ್ರಿತ ಪ್ರಯೋಗ ಮ್ಯಾಟ್ರಿಕ್ಸ್‌ನೊಂದಿಗೆ ನಡೆದಿದ್ದು, ಔಷಧವನ್ನು ಆರೋಗ್ಯವಂತ 18-59 ವರ್ಷ ವಯಸ್ಸಿನ ವಯಸ್ಕರ ಮೇಲೆ ಪ್ರಯೋಗಿಸಲಾಗಿದೆ.

ಕಂಪನಿಯ ಕೋವಿಡ್​-19 ಲಸಿಕೆಯ ಎನ್​​ವಿಎಕ್ಸ್​ ಸಿಒವಿCoV2373, ಮ್ಯಾಟ್ರಿಕ್ಸ್-ಎಮ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಇದರ ದೃಢವಾದ ಪ್ರತಿಕಾಯಗಳು ಉತ್ತಮವಾಗಿ ಕಂಡುಬಂದಿವೆ. ವೈಜ್ಞಾನಿಕ ಜರ್ನಲ್ ಮತ್ತು ಮೆಡ್​​ಆರ್​ಎಕ್ಸ್​ಐವಿ ಆನ್‌ಲೈನ್ ಪ್ರಿಪ್ರಿಂಟ್ ಸರ್ವರ್‌ಗೆ ಕಳುಹಿಸಲಾಗಿದೆ.

NVX-CoV2373 ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ. ರಿಯಾಕ್ಟೋಜೆನಿಸಿಟಿ ಯೂನಿಟ್​​ಗಳು ಸೌಮ್ಯವಾಗಿವೆ. ಔಷಧಿಯಿಂದ ತಲೆನೋವು, ಆಯಾಸ ಮತ್ತು ಬೆನ್ನು ನೋವು ಸಾಮಾನ್ಯವಾಗಿ ಕಡಿಮೆ ವರದಿ ಮಾಡಿವೆ. ಡೋಸ್ 2ರ ನಂತರ 28 ದಿನಗಳ ಬಳಿಕ ಅಪೇಕ್ಷಿತ ಪ್ರತಿಕೂಲ ಯೂನಿಟ್​ಗಳನ್ನು ಸಂಗ್ರಹಿಸಲಾಗಿದೆ.

ಯಾವುದೇ ತೀವ್ರವಾದ (ಗ್ರೇಡ್ 3) ಅಪೇಕ್ಷಿಸದ ಪ್ರತಿಕೂಲ ಘಟನೆಗಳು ನಡೆದಿಲ್ಲ. ಯಾವುದೇ ಗಂಭೀರ ಪ್ರತಿಕೂಲ ಘಟನೆಗಳು (ಎಸ್‌ಎಇ) ವರದಿಯಾಗಿಲ್ಲ ಮತ್ತು ಸುರಕ್ಷತೆ ಪಾಲನೆ ಮುಂದುವರಿಯುತ್ತದೆ ಎಂದು ಕಂಪನಿಯು ತನ್ನ ವೆಬ್‌ಸೈಟ್​ನಲ್ಲಿ ಹೇಳಿದೆ.

ಸೀರಮ್ ಇನ್ಸಿಟ್ಯೂಟ್ ಜೊತೆ ಕೈಜೋಡಿಸಿದ ಗೇಟ್ಸ್ ಫೌಂಡೇಶನ್

ಮಹತ್ವದ ಬೆಳವಣಿಗೆಯೊಂದರಲ್ಲಿ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಯ ಪಾಲುದಾರ ಸಂಸ್ಥೆ ಸೀರಮ್ ಇನ್ಸಿಟ್ಯೂಟ್ ಆಫ್ ಇಂಡಿಯಾ ಹಾಗೂ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್ ಒಪ್ಪಂದ ಮಾಡಿಕೊಂಡಿವೆ.

ಭಾರತ ಹಾಗೂ ಇತರ ಕೊರೊನಾ ವೈರಸ್ ಪೀಡಿತ ದೇಶಗಳಿಗಾಗಿ ಸುಮಾರು 100 ಮಿಲಿಯನ್ ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆ ತಯಾರಿಸುವ ಉದ್ದೇಶದಿಂದ ಈ ಎರಡೂ ಸಂಸ್ಥೆಗಳು ಒಗ್ಗೂಡಿರುವುದಾಗಿ ಘೋಷಿಸಿವೆ. ಸೀರಮ್ ಇನ್ಸಿಟ್ಯೂಟ್ ಆಫ್ ಇಂಡಿಯಾ, ಬಿಲ್ ಹಾಗೂ ಮೆಲಿಂಡಾ ಗೇಟ್ಸ್ ಹಾಗೂ ಗಾವಿ ಲಸಿಕಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸುಮಾರು 100 ಮಿಲಿಯನ್ ಲಸಿಕೆಗಳನ್ನು ಉತ್ಪಾದಿಸಲು ನಿರ್ಧರಿಸಲಾಗಿದೆ.

ಅಸ್ಟ್ರಾಜೆನೆಕಾ ಮತ್ತು ನೊವಾವಾಕ್ಸ್ ಲಸಿಕೆಗಳಿಗೆ 3 ಡಾಲರ್ ಬೆಲೆ ನಿಗದಿಪಡಿಸಿ ಜಗತ್ತಿನ ಸುಮಾರು 92 ದೇಶಗಳಲ್ಲಿ ಗಾವಿಯ ಕೋವಾಕ್ಸ್ ಅಡ್ವಾನ್ಸ್ ಮಾರ್ಕೆಟ್ ಕಮಿಟ್‌ಮೆಂಟ್ ಕೇಂದ್ರಗಳಲ್ಲಿ ಲಭ್ಯವಾಗುವಂತೆ ಮಾಡುವ ಗುರಿ ಹೊಂದಲಾಗಿದೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.