ಮುಂಬೈ: ಆರ್‌ಐಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಫೋರ್ಬ್ಸ್ ಬಿಲಿಯನೇರ್ಸ್ ಪಟ್ಟಿಯಲ್ಲಿ ಒಂಭತ್ತನೇ ಸ್ಥಾನಕ್ಕೆ ಕುಸಿದಿದ್ದಾರೆ. ಶುಕ್ರವಾರದಂದು ಅಂಬಾನಿ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ.
ಫೋರ್ಬ್ಸ್‌ನ ನೈಜ ಸಮಯದ ನಿವ್ವಳ ಮೌಲ್ಯದ ಮಾಹಿತಿಯ ಪ್ರಕಾರ, ಆರ್‌ಐಎಲ್ ಷೇರು ಮೌಲ್ಯ ಶೇ. 8.62ರಷ್ಟು ಅಥವಾ 177 ರೂ. ಇಳಿಕೆ ಕಂಡು ಬಿಎಸ್‌ಇಯಲ್ಲಿ 1,877 ರೂ.ಗೆ ತಲುಪಿತು.
ರಿಲಯನ್ಸ್ ಇಂಡಸ್ಟ್ರೀಸ್ ಪಾಲು ಇಂದಿನ ವಹಿವಾಟಿನಲ್ಲಿ ಶೇ. 9ರಷ್ಟು ಕ್ಷೀಣಿಸಿದ ನಂತರ ಮುಖೇಶ್ ಅವರ ಸಂಪತ್ತಿನಲ್ಲಿ ಅಂದಾಜು 1.2 ಲಕ್ಷ ಕೋಟಿ ರೂ. ಕರಗಿದೆ. ಸಂಸ್ಥೆಯ ಮಾರುಕಟ್ಟೆ ಕ್ಯಾಪ್ 12.69 ಲಕ್ಷ ಕೋಟಿ ರೂ.ಗೆ ಕೊನೆಗೊಂಡಿದ್ದು, ಶುಕ್ರವಾರ 13.89 ಲಕ್ಷ ಕೋಟಿ ರೂ.ಗಳಿಂದ 1.2 ಲಕ್ಷ ಕೋಟಿ ರೂ. ಕರಗಿದೆ. ಕಳೆದ ವಾರವೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಭಾರತೀಯ ಕಂಪನಿಗಳ ಪಟ್ಟಿ ಮಾಡಲಾದ ಮಾರುಕಟ್ಟೆ ಕ್ಯಾಪ್ನಲ್ಲಿ ಅಗ್ರಸ್ಥಾನದಲ್ಲಿದೆ.
ಭಾರತದ ಅತ್ಯಮೂಲ್ಯ ಸಂಸ್ಥೆಯಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್) ಮೌಲ್ಯವು ಶುಕ್ರವಾರದ ವಹಿವಾಟಿನ ಅಂತ್ಯದ ವೇಳೆಗೆ 39,355 ಕೋಟಿ ರೂ.ಗಳಿಂದ 13.89 ಲಕ್ಷ ಕೋಟಿ ರೂ.ಗೆ ತಲುಪಿದೆ. ಬಿಎಸ್‌ಇಯಲ್ಲಿ ಕಳೆದ ವಾರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಅಕ್ಟೋಬರ್ 23ರಿಂದ 235 ರೂ. ಕ್ಷೀಣಿಸಿ ಶುಕ್ರವಾರದ ವೇಳೆಗೆ 2,112 ರೂ.ಗೆ ತಲುಪಿತು.
ಇಂದು ಈ ಷೇರು ಹಿಂದಿನ ದಿನದ 2,054ಕ್ಕೆ ಹೋಲಿಸಿದರೆ ಶೇ 9.46ರಷ್ಟು ಕುಸಿದು 1,860 ರೂ.ಗೆ ತಲುಪಿದೆ. ಷೇರು ಬಿಎಸ್ಇನಲ್ಲಿ ಶೇ 8.62ರಷ್ಟು ಅಥವಾ 177 ರೂ. ಕಡಿಮೆಯಾಗಿ 1877 ರೂ.ಗೆ ಬಂದು ನಿಂತಿದೆ. ಇದು 2020ರ ಮಾರ್ಚ್ 23ರ ನಂತರದ ಅತಿದೊಡ್ಡ ಏಕದಿನ ಕುಸಿತವಾಗಿದೆ.
ಶುಕ್ರವಾರದ ಮಾರುಕಟ್ಟೆ ಅವಧಿ ಮುಗಿದ ಬಳಿಕ ಸಂಸ್ಥೆಯು ತನ್ನ ಎರಡನೇ ಗಳಿಕೆ ವರದಿ ಮಾಡಿದ ನಂತರ ಷೇರು ಮೌಲ್ಯದಲ್ಲಿ ಕುಸಿತ ಕಂಡು ಬಂದಿದೆ. 2020ರ ಸೆಪ್ಟೆಂಬರ್ 16ರಂದು ಈ ಷೇರು ಮೌಲ್ಯ ತನ್ನ ಸಾರ್ವಕಾಲಿಕ ಗರಿಷ್ಠ 2,368 ರೂ.ಗಳಿಂದ ಶೇ. 21ರಷ್ಟು ಕುಸಿದಿದೆ. ಆದರೂ ಈ ಷೇರು 2020ರ ಮಾರ್ಚ್ 23ರಂದು ತನ್ನ 52 ವಾರಗಳ ಕನಿಷ್ಠ 867.82 ರೂ.ಗಿಂತ ಶೇ. 116.5ರಷ್ಟು ಏರಿಕೆಯಾಗಿದೆ.