ಮುಂಬೈ: ಬಿಲಿಯನೇರ್ ಮುಖೇಶ್ ಅಂಬಾನಿ ತನ್ನ ಸಂಸ್ಕರಣಾಗಾರಗಳಲ್ಲಿ ಉತ್ಪತ್ತಿಯಾಗುವ ಆಮ್ಲಜನಕಗಳನ್ನು ಬೇರೆಡೆಗೆ ಪೂರೈಸಲು ಸಿದ್ಧವಾಗಿದ್ದು, ಇದು ಭಾರತದ ಘೋರ ಕೊರೊನಾ ವೈರಸ್ ವಿರುದ್ಧ ಹೋರಾಡಲು ನೆರವಾಗಲಿದೆ.
ನಿತ್ಯ ಹೊಸ ಸೋಂಕುಗಳು ದಾಖಲೆ ಪ್ರಮಾಣದಲ್ಲಿ ಹೆಚ್ಚಾದಂತೆ ವಾಣಿಜ್ಯ ಬಂಡವಾಳವನ್ನು ಅಪಾಯಕ್ಕೆ ತಳ್ಳುವ ಸಾಧ್ಯತೆಯಿದೆ. ಪಶ್ಚಿಮ ಭಾರತದಲ್ಲಿನ ವಿಶ್ವದ ಅತಿದೊಡ್ಡ ಸಂಸ್ಕರಣಾ ಸಂಕೀರ್ಣ ನಿರ್ವಹಿಸುತ್ತಿರುವ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಯಾವುದೇ ವೆಚ್ಚವಿಲ್ಲದೇ ಜಾಮ್ನಗರದಿಂದ ಮಹಾರಾಷ್ಟ್ರಕ್ಕೆ ಆಮ್ಲಜನಕ ಪೂರೈಸಲು ಪ್ರಾರಂಭಿಸಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯಕ್ಕೆ ರಿಲಯನ್ಸ್‌ನಿಂದ 100 ಟನ್ ಸಿಲಿಂಡರ್ ಸಿಗಲಿದೆ ಎಂದು ನಗರಾಭಿವೃದ್ಧಿ ಸಚಿವ ಏಕನಾಥ ಶಿಂಧೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ದೇಶದ ಹಲವು ರಾಜ್ಯಗಳು ಕೋವಿಡ್ -19 ಸೋಂಕಿನ ಎರಡನೇ ಅಲೆಯ ಹಿಡಿತದಲ್ಲಿ ಸಿಲುಕಿವೆ. ಸ್ಥಳೀಯ ಮಾಧ್ಯಮಗಳು ಆಮ್ಲಜನಕ ಮತ್ತು ಆಸ್ಪತ್ರೆಯ ಹಾಸಿಗೆಗಳ ಕೊರತೆಯಿಂದಾಗಿ ರೋಗಿಗಳು ಸಾಯುತ್ತಿದ್ದಾರೆ ಎಂದು ವರದಿ ಮಾಡಿವೆ. ಮಹಾರಾಷ್ಟ್ರ ರಾಜ್ಯವು ಮುಂಬೈನ ಆರ್ಥಿಕ ಕೇಂದ್ರವಾಗಿದ್ದು, ಇಲ್ಲಿ ಸೋಂಕಿನ ಅಲೆ ತೀವ್ರವಾಗಿದೆ. ಅಂಬಾನಿಯ ಅಧಿಕೃತವಾಗಿ ಇಲ್ಲಿ ವಾಸಿಸುತ್ತಿದ್ದು, ರಿಲಯನ್ಸ್ನ ಪ್ರಧಾನ ಕಚೇರಿಯನ್ನು ಸಹ ಹೊಂದಿದೆ.
-
एमएमआर क्षेत्रातील अनेक भागात कोरोना रुग्णांची संख्या झपाट्याने वाढत आहे. त्यासोबतच पेशंट्सना ऑक्सिजन पुरवण्यासाठी ऑक्सिजनची मागणी देखील प्रचंड वाढली आहे. मागणी व पुरवठा यातील तफावत दूर करण्यासाठी नक्की काय करता येईल, याचा आढावा घेण्यासाठी लिंडे कंपनीच्या ऑक्सिजन कंपनीला भेट देत pic.twitter.com/zzSHdyuqCf
— Eknath Shinde - एकनाथ शिंदे (@mieknathshinde) April 13, 2021 " class="align-text-top noRightClick twitterSection" data="
">एमएमआर क्षेत्रातील अनेक भागात कोरोना रुग्णांची संख्या झपाट्याने वाढत आहे. त्यासोबतच पेशंट्सना ऑक्सिजन पुरवण्यासाठी ऑक्सिजनची मागणी देखील प्रचंड वाढली आहे. मागणी व पुरवठा यातील तफावत दूर करण्यासाठी नक्की काय करता येईल, याचा आढावा घेण्यासाठी लिंडे कंपनीच्या ऑक्सिजन कंपनीला भेट देत pic.twitter.com/zzSHdyuqCf
— Eknath Shinde - एकनाथ शिंदे (@mieknathshinde) April 13, 2021एमएमआर क्षेत्रातील अनेक भागात कोरोना रुग्णांची संख्या झपाट्याने वाढत आहे. त्यासोबतच पेशंट्सना ऑक्सिजन पुरवण्यासाठी ऑक्सिजनची मागणी देखील प्रचंड वाढली आहे. मागणी व पुरवठा यातील तफावत दूर करण्यासाठी नक्की काय करता येईल, याचा आढावा घेण्यासाठी लिंडे कंपनीच्या ऑक्सिजन कंपनीला भेट देत pic.twitter.com/zzSHdyuqCf
— Eknath Shinde - एकनाथ शिंदे (@mieknathshinde) April 13, 2021
ರಿಲಯನ್ಸ್ ತನ್ನ ಪೆಟ್ರೋಲಿಯಂ ಕೋಕ್ ಅನಿಲೀಕರಣ ಘಟಕಗಳಿಗೆ ಸಂಬಂಧಿಸಿದ ಕೆಲವು ಆಮ್ಲಜನಕ ಸ್ಟ್ರೀಮ್ಗಳನ್ನು ವೈದ್ಯಕೀಯ ಬಳಕೆಗೆ ಸೂಕ್ತವಾಗಿಸಿದ ನಂತರ ಬೇರೆಡೆಗೆ ತಿರುಗಿಸಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕಂಪನಿಯ ವಕ್ತಾರರು ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಲಿಲ್ಲ ಎಂದು ವರದಿಯಾಗಿದೆ.
ಭಾರತ್ ಪೆಟ್ರೋಲಿಯಂ ಕಾರ್ಪ್ ದಕ್ಷಿಣ ಭಾರತದ ಕೊಚ್ಚಿ ಸಂಸ್ಕರಣಾಗಾರದಲ್ಲಿ 20 ಟನ್ ಆಮ್ಲಜನಕದ ದಾಸ್ತಾನು ನಿರ್ಮಿಸಿದೆ. ಇದು ವೈದ್ಯಕೀಯ ಬಳಕೆಗಾಗಿ ಬಾಟಲಿಗಳಿಗೆ ಸರಬರಾಜು ಮಾಡುತ್ತಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಪಿಸಿಎಲ್‌ನ ಪತ್ರಿಕಾ ಕಚೇರಿಗೆ ಕಳುಹಿಸಿದ ಇಮೇಲ್‌ಗೆ ಯಾರೂ ಪ್ರತಿಕ್ರಿಯಿಸಲಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಸಂಸ್ಕರಣಾಗಾರಗಳು ಸಾರಜನಕ ಉತ್ಪಾದನೆಗೆ ಉದ್ದೇಶಿಸಿ ಗಾಳಿ-ಬೇರ್ಪಡಿಸುವ ಪ್ಲಾಂಟ್ಳಲ್ಲಿ ಕೈಗಾರಿಕಾ ಆಮ್ಲಜನಕದ ಸೀಮಿತ ಪ್ರಮಾಣದಲ್ಲಿ ಉತ್ಪಾದಿಸಬಹುದು. ವೈದ್ಯಕೀಯ ಬಳಕೆಯ ಆಮ್ಲಜನಕವನ್ನು ಶೇ 99.9ರಷ್ಟು ಶುದ್ಧವಾಗಿಸಲು ಇಂಗಾಲದ ಡೈಆಕ್ಸೈಡ್‌ನಂತಹ ಇತರ ಅನಿಲಗಳನ್ನು ಸ್ಕ್ರಬ್ ಮಾಡುವ ಮೂಲಕ ಹೊರತೆಗೆಯಬಹುದು.