ಮುಂಬೈ: ಟಾಟಾ ಗ್ರೂಪ್ 2019ರಲ್ಲಿ 13,000 ಕೋಟಿ ರೂ. ನಿವ್ವಳ ನಷ್ಟ ಅನುಭವಿಸಿದೆ ಎಂದು ಸುಪ್ರೀಂಕೋರ್ಟ್‌ಗೆ ಕಂಪನಿ ಸಲ್ಲಿಸಿದ್ದ ಅಫಿಡವಿಟ್ಗೆ ಉಚ್ಛಾಟಿತ ಅಧ್ಯಕ್ಷ ಸೈರಸ್ ಮಿಸ್ತ್ರಿ ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಿದ್ದಾರೆ.
2012ರಲ್ಲಿ ಟಾಟಾ ಕುಟುಂಬಸ್ಥರು ಹೊರತುಪಡಿಸಿ ಮೊದಲ ಬಾರಿಗೆ ಸೈರಸ್ ಮಿಸ್ತ್ರಿ ಅವರನ್ನ ಟಾಟಾ ಸಮೂಹದ ಅತ್ಯುನ್ನತ ಹುದ್ದೆಗೆ ನೇಮಕ ಮಾಡಲಾಯಿತು. 2016ರ ಅಕ್ಟೋಬರ್ ತಿಂಗಳಲ್ಲಿ ಅವರನ್ನು ಆ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ರಾಷ್ಟ್ರೀಯ ಕಂಪನಿ ಕಾನೂನುಗಳ ಮೇಲ್ಮನವಿ ನ್ಯಾಯಾಧಿಕರಣದ (ಎನ್‌ಸಿಎಲ್‌ಎಟಿ) ಮೊರೆ ಹೋಗಿದ್ದರು.
ಎನ್‌ಸಿಎಲ್‌ಎಟಿ 2019ರ ಡಿಸೆಂಬರ್ 18ರಂದು ಮಿಸ್ತ್ರಿ ಅವರನ್ನು ಗುಂಪಿನ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ನೇಮಕ ಮಾಡಿಕೊಳ್ಳುವಂತೆ ಟಾಟಾ ಸನ್ಸ್ಗೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಟಾಟಾ ಗ್ರೂಪ್ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಎನ್‌ಸಿಎಲ್‌ಎಟಿ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು.
ಮೇ 29ರಂದು ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿ ನಾಲ್ಕು ವಾರಗಳಲ್ಲಿ ತಮ್ಮ ಉತ್ತರಗಳನ್ನು ಸಲ್ಲಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿತ್ತು. ಟಾಟಾ ಗ್ರೂಪ್ ಅಫಿಡವಿಟ್ಗಳಿಗೆ ಪ್ರತಿಕ್ರಿಯೆಯಾಗಿ ಮಿಸ್ತ್ರಿ ಸಹ ಉತ್ತರಗಳನ್ನು ನೀಡಿದೆ ಎಂದು ವರದಿಯಾಗಿದೆ.
ಯಾವುದೇ ಕಾರಣ ನೀಡದ ಟಾಟಾ ಬೋರ್ಡ್, ಮಿಸ್ತ್ರಿ ಅವರನ್ನು 2016ರ ಅಕ್ಟೋಬರ್ 24ರಂದು ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿತು. ಈ ಬಳಿಕ ಮಿಸ್ತ್ರಿ ಅವರ ಕಾರ್ಯಕ್ಷಮತೆಯ ಸಂಬಂಧ ಹುದ್ದೆಯಿಂದ ತೆಗೆದು ಹಾಕಲಾಗಿದೆ ಎಂಬುದು ಟಾಟಾ ಸನ್ಸ್ ಸ್ಪಷ್ಟನೆ ಆಗಿತ್ತು ಎಂದು ಮಿಸ್ತ್ರಿ ತಿಳಿಸಿದ್ದಾರೆ.
ನನ್ನ ಕಾರ್ಯಕ್ಷಮತೆಯನ್ನು ಅಪಖ್ಯಾತಿಗೊಳಿಸುವ ಉದ್ದೇಶದಿಂದ ಟಾಟಾ ಟಿಸಿಎಸ್‌ನಿಂದ ಲಾಭಾಂಶವನ್ನು ಹೊರಗಿಡಲು ಪ್ರಯತ್ನಿಸಿದೆ. ತೆರಿಗೆ ನಂತರದ ಹೊಂದಾಣಿಕೆಯ ಲಾಭ (ಟಿಸಿಎಸ್‌ನಿಂದ ಲಾಭವನ್ನು ಹೊರತುಪಡಿಸಿ) 2019ರಲ್ಲಿ 13,000 ಕೋಟಿ ರೂ. ಇದೆ. ಇದು ಮೂರು ದಶಕಗಳಲ್ಲಿ ಅತ್ಯಂತ ಕೆಟ್ಟ ನಷ್ಟವಾಗಿದೆ ಎಂದು ಮಿಸ್ತ್ರಿ ಸುಪ್ರೀಂಕೋರ್ಟ್‌ಗೆ ನೀಡಿದ ಉತ್ತರಗಳಲ್ಲಿ ಉಲ್ಲೇಖಿಸಿದ್ದಾರೆ.
ಟಾಟಾ ಸನ್ಸ್ 2019ರಲ್ಲಿ ಕಾರ್ಯಾಚರಣಾ ನಷ್ಟ ಶೇ. 282ರಷ್ಟು ಏರಿಕೆ ಮಾಡಿ 2,100 ಕೋಟಿ ರೂ. ತಲುಪಿಸಿತ್ತು. ಇದು 2016ರಲ್ಲಿ ಸುಮಾರು 550 ಕೋಟಿ ರೂ. ಆಯಿತು. ಇತ್ತೀಚಿನ ವರ್ಷಗಳಲ್ಲಿ ಪರಂಪರಾಗತ ಸಮಸ್ಯೆಗಳಿಂದ ತೀರಾ ಕಳಪೆ ಸಾಧನೆ ಮಾಡಿದೆ ಎಂದು ಆರೋಪಿಸಿದ್ದಾರೆ.