ನ್ಯೂಯಾರ್ಕ್: ಜಗತ್ತಿನ ಸಾಫ್ಟ್ವೇರ್ ದೈತ್ಯ ಸಂಸ್ಥೆಯಾದ ಮೈಕ್ರೊಸಾಫ್ಟ್ ಸಿಇಒ ಸತ್ಯ ನಾದೆಲ್ಲ ಅವರನ್ನು 2019ನೇ ಸಾಲಿನ ವಿಶ್ವದ ಶ್ರೇಷ್ಠ ಉದ್ಯಮಿ ಎಂದು ಫಾರ್ಚ್ಯೂನ್ ಹೆಸರಿಸಿದೆ.
ಮೈಕ್ರೋಸಾಫ್ಟ್ವೇರ್ನ ಭಾರತ ಮೂಲದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯ ನಾದೆಲ್ಲಾ ಅವರು ಫಾರ್ಚ್ಯೂನ್ನ ಉದ್ಯಮಿ 2019ರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದೊಂದು ವಾರ್ಷಿಕ ಗೌರವವಾಗಿದ್ದು, ಇದರಲ್ಲಿ ಮಾಸ್ಟರ್‌ಕಾರ್ಡ್ ಸಿಇಒ ಅಜಯ್ ಬಂಗಾ ಮತ್ತು ಅರಿಸ್ಟಾ ಮುಖ್ಯಸ್ಥ ಜಯಶ್ರೀ ಉಲ್ಲಾಲ್ ಕೂಡ ಇದ್ದಾರೆ.
ಫಾರ್ಚೂನ್‌ನ ವಾರ್ಷಿಕ ಉದ್ಯಮಿ ವರ್ಷದ ಪಟ್ಟಿಯಲ್ಲಿ 20 ಅಗ್ರ ಉದ್ಯಮಿಗಳು ಇದ್ದರು. ಉದ್ಯಮಿ ವ್ಯವಹಾರದಲ್ಲಿ ನಾಯಕರಾಗಿ ತಮ್ಮ ವ್ಯವಹಾರಿಕ ಗುರಿಗಳನ್ನು ನಿಭಾಯಿಸಿ, ಅಸಾಧ್ಯವಾದ ವಿಲಕ್ಷಣಗಳನ್ನು ನಿವಾರಿಸಿ ಸೃಜನಶೀಲ ಪರಿಹಾರಗಳನ್ನು ಕಂಡುಕೊಂಡುವರೇ ಇದರಲ್ಲಿ ಸೇರಿದ್ದರು. 2014ರಿಂದ ತಂತ್ರಜ್ಞಾನ ದೈತ್ಯ ಮೈಕ್ರೋಸಾಫ್ಟ್ನ ಚುಕ್ಕಾಣಿ ಹಿಡಿದಿರುವ ನಾದೆಲ್ಲಾ ಅವರು ಎಲ್ಲರನ್ನೂ ಹಿಂದಿಕ್ಕಿ ಅಗ್ರಸ್ಥಾನ ಪಡೆದಿದ್ದಾರೆ.
ಈ ಒಂದು ವರ್ಷದಲ್ಲಿ ರಾಜಕೀಯ ಅವ್ಯವಸ್ಥೆ ಮತ್ತು ಹೊಳಪಿನಿಂದ ಕೂಡಿದ್ದ ಪ್ರಾಬಲ್ಯ ನಾಯಕತ್ವ ಹೊಂದಿದ್ದರು. ಇದು ವ್ಯಾಪಾರ ಜಗತ್ತಿನಲ್ಲಿ ಸ್ಥಿರವಾದ ಮತ್ತು ಶಾಂತವಾದ ನಾಯಕತ್ವದ ಅಪರೂಪದ ಬ್ರಾಂಡ್ ಆಗಿದೆ. ಸ್ಥಿರ ಫಲಿತಾಂಶ ಆಧಾರಿತ ನಾಯಕತ್ವದ ಬ್ರಾಂಡ್ನ ನಂಬರ್ 1 ಉದ್ಯಮಿ ಎಂದು ಫಾರ್ಚ್ಯೂನ್ ಹೇಳಿದೆ.