ETV Bharat / business

ಆಕ್ಸಿಸ್ ಬ್ಯಾಂಕ್ ಅಕೌಂಟ್​ ಬಂದ್​ ಮಾಡಿದ ಮಹಾರಾಷ್ಟ್ರ ಸರ್ಕಾರ... - ಎಸ್​ಬಿಐ

ಆಕ್ಸಿಸ್ ಬ್ಯಾಂಕ್‌ನ ನಾರಿಮನ್ ಪಾಯಿಂಟ್ ಶಾಖೆಯಲ್ಲಿರುವ ರಾಷ್ಟ್ರೀಯ ಚಂಡಮಾರುತ ಅಪಾಯ ಶಮನ ಯೋಜನೆ(ಎನ್‌ಸಿಆರ್‌ಎಂಪಿ) ಅಡಿಯ ಖಾತೆಗಳನ್ನು ತಕ್ಷಣದಿಂದ ಸ್ಥಗಿತಗೊಳಿಸಲಾಗಿದೆ. ಈ ಠೇವಣಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಚರ್ಚ್‌ಗೇಟ್ ಶಾಖೆಯೊಂದರಲ್ಲಿ ಹೊಸ ಖಾತೆ ತೆರೆದು ವರ್ಗಾಯಿಸಲಾಗುತ್ತದೆ.

Axis Bank
ಆಕ್ಸಿಸ್​ ಬ್ಯಾಂಕ್
author img

By

Published : Mar 11, 2020, 5:47 PM IST

Updated : Mar 11, 2020, 6:36 PM IST

ಮುಂಬೈ: ಖಾಸಗಿ ವಲಯದ ಆಕ್ಸಿಸ್ ಬ್ಯಾಂಕ್​ನಲ್ಲಿದ್ದ ತನ್ನ ಖಾತೆಯನ್ನು ಮಹಾರಾಷ್ಟ್ರ ಸರ್ಕಾರ ಏಕಾಏಕಿ ನಿಷ್ಕ್ರಿಯಗೊಳಿಸಲು ನಿರ್ಧರಿಸಿದೆ ಎಂದು ಅಧಿಕೃತ ನೋಟಿಸ್​ ಮೂಲಕ ತಿಳಿದುಬಂದಿದೆ.

ಆಕ್ಸಿಸ್ ಬ್ಯಾಂಕ್‌ನ ನಾರಿಮನ್ ಪಾಯಿಂಟ್ ಶಾಖೆಯಲ್ಲಿರುವ ರಾಷ್ಟ್ರೀಯ ಚಂಡಮಾರುತ ಅಪಾಯ ಶಮನ ಯೋಜನೆ(ಎನ್‌ಸಿಆರ್‌ಎಂಪಿ) ಅಡಿಯ ಖಾತೆಗಳನ್ನು ತಕ್ಷಣದಿಂದ ಸ್ಥಗಿತಗೊಳಿಸಿ, ಈ ಠೇವಣಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಚರ್ಚ್‌ಗೇಟ್ ಶಾಖೆಯೊಂದರಲ್ಲಿ ಹೊಸ ಖಾತೆಗೆ ವರ್ಗಾಯಿಸಲು ಸರ್ಕಾರ ನಿರ್ಧರಿಸಿದೆ.

ಇನ್ನುಮುಂದೆ ರಾಜ್ಯ ಸರ್ಕಾರವು ತನ್ನ ಎಲ್ಲ ನಿಧಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಾರ್ವಜನಿಕ ವಲಯದ ಬ್ಯಾಂಕ್​ಗಳಲ್ಲಿ ಇರಿಸಲಿದೆ. ಅದಕ್ಕೆ ಅನುಗುಣವಾಗಿ ಕ್ರಮತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಸಂಬಂಧಪಟ್ಟ ಅಧಿಕಾರಿಗಳು/ ಇಲಾಖೆಗಳಿಗೆ ಕಳೆದ ವಾರವೇ ಸೂಚನೆಗಳನ್ನು ನೀಡಿದ್ದರು.

Last Updated : Mar 11, 2020, 6:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.