ETV Bharat / business

4,000 ರೈಲ್ವೆ ಬೋಗಿ ನವೀಕರಿಸಿ ಐಸೋಲೇಷನ್​.. ರೋಗಿಗಳ ಕ್ವಾರಂಟೈನ್​ಗೆ 64,000 ಬೆಡ್​ಗಳು ರೆಡಿ

ರಾಜ್ಯಗಳ ಬೇಡಿಕೆಯಂತೆ ರೈಲ್ವೆ ಇಲಾಖೆಯು ಇಂದೋರ್, ನಾಗ್ಪುರ, ಭೋಪಾಲ್ ನಿಲ್ದಾಣಗಳ ಬಳಿ ಕೋವಿಡ್ ಆರೈಕೆ ಕೋಚ್​ಗಳನ್ನು ಸಜ್ಜುಗೊಳಿಸಿದೆ. ನಾಗ್ಪುರದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮತ್ತು ನಾಗ್ಪುರ ಮಹಾನಗರ ಪಾಲಿಕೆಯ ಆಯುಕ್ತರ ನಡುವೆ 11 ಕೋವಿಡ್​ ಆರೈಕೆ ಕೋಚ್​ಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಸಚಿವಾಲಯ ಹೇಳಿದೆ.

author img

By

Published : Apr 27, 2021, 6:27 PM IST

Railways
Railways

ನವದೆಹಲಿ: ರೈಲ್ವೆ ಸಚಿವಾಲಯವು ಸುಮಾರು 4,000 ರೈಲ್ವೆ ಬೋಗಿಗಳನ್ನು ನವೀಕರಿಸಿ ಸುಮಾರು 64,000 ಬೆಡ್​ಗಳನ್ನು ಐಸೋಲೇಷನ್​ ಹಾಗೂ ಕ್ವಾರಂಟೈನ್​ಗೆ ಬಳಸಿಕೊಳ್ಳಲು ರಾಜ್ಯಗಳಿಗೆ ಹಸ್ತಾಂತರಿಸಲು ಸಿದ್ಧವಾಗಿವೆ. ಪ್ರಸ್ತುತ 169 ಬೋಗಿಗಳನ್ನು ಕೋವಿಡ್ ಆರೈಕೆಗಾಗಿ ವಿವಿಧ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದೆ.

ರಾಜ್ಯಗಳ ಬೇಡಿಕೆಯಂತೆ ರೈಲ್ವೆ ಇಲಾಖೆಯು ಇಂದೋರ್, ನಾಗ್ಪುರ, ಭೋಪಾಲ್, ತಿಹಿ ನಿಲ್ದಾಣಗಳ ಬಳ ಕೋವಿಡ್ ಆರೈಕೆ ಕೋಚ್​ಗಳನ್ನು ಸಜ್ಜುಗೊಳಿಸಿದೆ. ನಾಗ್ಪುರದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮತ್ತು ನಾಗ್ಪುರ ಮಹಾನಗರ ಪಾಲಿಕೆಯ ಆಯುಕ್ತರ ನಡುವೆ 11 ಕೋವಿಡ್​ ಆರೈಕೆ ಕೋಚ್​ಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಸಚಿವಾಲಯ ಹೇಳಿದೆ.

ರಾಜ್ಯ ಬೇಡಿಕೆಯಂತೆ ರೈಲ್ವೆ ಮಹಾರಾಷ್ಟ್ರದ ಅಜ್ನಿ ಐಸಿಡಿ ಪ್ರದೇಶದಲ್ಲಿ ಪ್ರತ್ಯೇಕ ಕೋಚ್​ ಸಜ್ಜುಗೊಳಿಸುತ್ತಿದೆ. ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಇತರ 9 ಪ್ರಮುಖ ನಿಲ್ದಾಣಗಳಲ್ಲಿ ಕೋಚ್​ಗಳನ್ನು ಇರಿಸಲಾಗಿದೆ. ಮಹಾರಾಷ್ಟ್ರದ ನಂದ್ರುಬಾರ್​ನಲ್ಲಿ ಪ್ರಸ್ತುತ 57 ರೋಗಿಗಳು ಈ ಸೌಲಭ್ಯವನ್ನು ಬಳಸುತ್ತಿದ್ದಾರೆ. ಅದರಲ್ಲಿ ಓರ್ವ ರೋಗಿಯನ್ನು ಸ್ಥಳಾಂತರಿಸಲಾಗಿದೆ. 322 ಹಾಸಿಗೆಗಳು ಇನ್ನೂ ಲಭ್ಯ ಇವೆ.

ದೆಹಲಿಯಲ್ಲಿ 1200 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ 75 ಕೋವಿಡ್ ಕೇರ್ ಬೋಗಿಗಳಿಗೆ ರಾಜ್ಯದ ಸಂಪೂರ್ಣ ಬೇಡಿಕೆ ರೈಲ್ವೆ ಪೂರೈಸಿದೆ. 50 ಬೋಗಿಗಳನ್ನು ಶಕುರ್ಬಸ್ತಿ ಮತ್ತು 25 ಕೋಚ್​ಗಳನ್ನು ಆನಂದ್ ವಿಹಾರ್ ನಿಲ್ದಾಣಗಳಲ್ಲಿ ಇರಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಮಧ್ಯಪ್ರದೇಶದಲ್ಲಿ ಪಶ್ಚಿಮ ರೈಲ್ವೆಯ ರತ್ನಂ ವಿಭಾಗವು ಇಂದೋರ್ ಬಳಿಯ ತಿಹಿ ನಿಲ್ದಾಣದಲ್ಲಿ 320 ಹಾಸಿಗೆಗಳ ಸಾಮರ್ಥ್ಯದೊಂದಿಗೆ 20 ಬೋಗಿಗಳನ್ನು ನಿಯೋಜಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.