ನವದೆಹಲಿ: ಸಾಲದಿಂದ ಬಳಲುತ್ತಿರುವ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಗ್ರೂಪ್‌ನ ಅಡಮಾನ ಸಂಸ್ಥೆ ರಿಲಯನ್ಸ್ ಹೋಮ್ ಫೈನಾನ್ಸ್ಗೆ (ಆರ್‌ಎಚ್‌ಎಫ್) ಸಾಲ ನೀಡುವವರು ಅಂತರ ಸಾಲಗಾರರ ಒಪ್ಪಂದ ( ಇಂಟರ್-ಕ್ರೆಡಿಟ್ ಅಗ್ರಿಮೆಂಟ್: ಐಸಿಎ) ಅವಧಿಯನ್ನು ಮೂರು ತಿಂಗಳು ವಿಸ್ತರಿಸಲಾಗಿದೆ.
ಅನಿಲ್ ಅಂಬಾನಿಯ ರಿಲಯನ್ಸ್ ಗ್ರೂಪ್‌ನ ಭಾಗವಾಗಿರುವ ರಿಲಯನ್ಸ್ ಹೋಮ್ ಫೈನಾನ್ಸ್ ಇತ್ತೀಚೆಗೆ ಸಾಲ ಪರಿಹಾರ ಪ್ರಕ್ರಿಯೆಯ ಭಾಗವಾಗಿ ಆರು ಕಂಪನಿಗಳು ಬಿಡ್ ಪಡೆದುಕೊಂಡಿವೆ.
ಒತ್ತಡದ ಸ್ವತ್ತುಗಳ ಪರಿಹಾರದ ಪ್ರುಡೆನ್ಶಿಯಲ್ ಫ್ರೇಮ್ ವರ್ಕ್ನಲ್ಲಿ 2019ರ ಜೂನ್ 7ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಐ) ಸುತ್ತೋಲೆಗೆ ಅನುಗುಣವಾಗಿ ಇಂಟರ್ ಕ್ರೆಡಿಟರ್ ಒಪ್ಪಂದವನ್ನು ಕಂಪನಿಯ ಸಾಲದಾತರು ಐಸಿಎ ಅವಧಿಯನ್ನು 2021ರ ಮಾರ್ಚ್ 31ರವರೆಗೆ ವಿಸ್ತರಿಸಿದ್ದಾರೆ ಎಂದು ಕಂಪನಿಯು ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.
ಓದಿ: SBI ಗ್ರಾಹಕರ ಗಮನಕ್ಕೆ! ಜ.1ರಿಂದ ಹೊಸ ಚೆಕ್ ಪಾವತಿ ಸಿಸ್ಟಮ್ ಜಾರಿ : ಈ ತಪ್ಪುಗಳು ಮಾಡದಿರಿ!
ಆರ್‌ಬಿಐನ ಜೂನ್ 7ರ ಸುತ್ತೋಲೆಯ ಪ್ರಕಾರ, ಐಸಿಎಗೆ ಸಹಿ ಮಾಡಿದ 180 ದಿನಗಳಲ್ಲಿ ಖಾತೆಯನ್ನು ಪರಿಹರಿಸದಿದ್ದರೆ ಸಾಲದಾತರು ಒಪ್ಪಂದದ ಅವಧಿಯನ್ನು ವಿಸ್ತರಿಸಬಹುದು ಎಂದು ಸೂಚಿಸುತ್ತದೆ.ಈ ನಿಯಮದ ಅನ್ವತ ದಿನಾಂಕ ಮುಂದೂಡಲಾಗಿದೆ.
ಆರು ಬಿಡ್ದಾರರ ಪೈಕಿ ಕೇವಲ ಇಬ್ಬರು ಸಲ್ಲಿಸಿದ್ದ ಬೈಂಡಿಂಗ್, ಹರಾಜು ಷರತ್ತುಗಳಿಗೆ ಅನುಗುಣವಾಗಿವೆ. ಉಳಿದ ನಾಲ್ವವರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ 2021ರ ಜನವರಿ 31 ರವರೆಗೆ ಬಿಡ್ಡಿಂಗ್ ಸಮಯ ವಿಸ್ತರಿಸಲು ಸಾಲದಾತರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.