ETV Bharat / business

ಮಾರುತಿ-ಇಂಡಸ್ ಇಂಡ್‌ ಬ್ಯಾಂಕ್ ಸುಲಭ ಸಾಲ ಒಪ್ಪಂದ.. ₹899 EMIನಲ್ಲಿ ಹೊಸ ಕಾರು

author img

By

Published : Jun 16, 2020, 7:48 PM IST

ಮಾರುತಿ-ಇಂಡಸ್ ಬ್ಯಾಂಕ್ ಸುಲಭ ಸಾಲ ಒಪ್ಪಂದ​ದ ಪಾಲುದರಿಕೆಯ ಮೂಲಕ ಗ್ರಾಹಕರಿಗೆ ಪ್ರತಿ ಲಕ್ಷಕ್ಕೆ 899 ರೂ.ಯಿಂದ ಆರಂಭವಾಗುವ ಮೊದಲ 3 ತಿಂಗಳು ಕಡಿಮೆ ಇಎಂಐ ಯೋಜನೆ ನೀಡುತ್ತಿದೆ. ಪ್ರತಿ ಲಕ್ಷಕ್ಕೆ 1,800 ರೂ.ಗಳಿಂದ ಪ್ರಾರಂಭವಾಗುವ ಇಎಂಐನೊಂದಿಗೆ ಸ್ಟೆಪ್-ಅಪ್ ಯೋಜನೆ ಕೂಡ ಕಲ್ಪಿಸಿದೆ.

Maruti Suzuki
ಮಾರುತಿ ಸುಜುಕಿ

ನವದೆಹಲಿ : ಲಾಕ್‌ಡೌನ್ ಬಳಿಕ ಕಾರ್ಯಾಚರಣೆ ಪುನಾರಂಭಿಸಿದ ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್‌ಐಎಲ್), ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳಲು ಗ್ರಾಹಕರಿಗೆ ವಾಹನ ಫೈನಾನ್ಸ್​ ಸೇವೆ ಒದಗಿಸಲು ಇಂಡಸ್‌ ಇಂಡ್ ಬ್ಯಾಂಕ್‌ ಜತೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ.

ಪಾಲುದರಿಕೆಯ ಮೂಲಕ ಗ್ರಾಹಕರಿಗೆ ಪ್ರತಿ ಲಕ್ಷಕ್ಕೆ 899 ರೂ.ಯಿಂದ ಆರಂಭವಾಗುವ ಮೊದಲ 3 ತಿಂಗಳು ಕಡಿಮೆ ಇಎಂಐ ಯೋಜನೆ ಪಡೆಯಬಹುದು. ಪ್ರತಿ ಲಕ್ಷಕ್ಕೆ 1,800 ರೂ.ಗಳಿಂದ ಪ್ರಾರಂಭವಾಗುವ ಇಎಂಐನೊಂದಿಗೆ ಸ್ಟೆಪ್-ಅಪ್ ಯೋಜನೆ ಕೂಡ ನೀಡುತ್ತಿದೆ. ಮಾನ್ಯತೆಯ ಆದಾಯ ಪುರಾವೆ ಹೊಂದಿರುವ ಗ್ರಾಹಕರಿಗೆ ಶೇ.100ರಷ್ಟು ಆನ್‌ರೋಡ್ ಫಂಡಿಂಗ್ ನೀಡಲಾಗುವುದು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಮಾನ್ಯತೆಯ ಆದಾಯದ ಪುರಾವೆ ಇಲ್ಲದ ಗ್ರಾಹಕರು ಶೇ.100ರಷ್ಟು ಎಕ್ಸ್‌ಶೋರೂಂಗಳಿಂದ ಹಣ ಪಡೆಯಬಹುದು. ಮಾರುತಿ ಸುಜುಕಿಯ ಎಲ್ಲಾ ಮಾದರಿಯ ಕಾರುಗಳಿಗೆ ಈ ಆಫರ್​ ಅನ್ವಯವಾಗುತ್ತದೆ ಎಂದು ಹೇಳಿದೆ. ಪ್ರಸ್ತುತ ಕೋವಿಡ್​-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಇಂಡಸ್ ಇಂಡ್ ಬ್ಯಾಂಕ್ ಕಡಿಮೆ ಇಎಂಐ ಯೋಜನೆಗಳನ್ನು ನೀಡುತ್ತಿದೆ. ಇದರಲ್ಲಿ ಸ್ಟೆಪ್-ಅಪ್ ಮತ್ತು ಬಲೂನ್ ಪಾವತಿ ಆಯ್ಕೆಗಳು ವಾಹನಗಳಿಗೆ ಶೇ.100ರಷ್ಟು ಆನ್‌ರೋಡ್ ಬೆಲೆಯಡಿ ವಿವಿಧ ಹಣಕಾಸು ಸೇವೆಗಳನ್ನು ನೀಡಿದೆ.

ಇಂಡಸ್ ಇಂಡ್ ಬ್ಯಾಂಕ್ ವಿಶಾಲವಾದ ಬಂಡವಾಳ ಹೊಂದಿದೆ. ಸಂಬಳ ಪಡೆಯುವವರು, ಸ್ವಯಂ ಉದ್ಯೋಗಿಗಳು, ಕೃಷಿಕರು ಮತ್ತು ಉದ್ಯಮಿಗಳ ಅಗತ್ಯಕ್ಕೆ ತಕ್ಕಂತೆ ಕಸ್ಟಮೈಸ್ ಮಾಡಬಹುದು ಎಂದು ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.