ETV Bharat / business

ಜಿಯೋ, ಏರ್​ಟೆಲ್, ಐಡಿಯಾ-ವೊಡಾ: ಈ ಮೂರರಲ್ಲಿ ಯಾವ ನೆಟ್​ವರ್ಕ್ ಹೈ-ಸ್ಪೀಡ್ ​?​ - Company News

ಐಡಿಯಾ ಸೆಲ್ಯುಲಾರ್ ನೆಟ್‌ವರ್ಕ್ (ವೊಡಾಫೋನ್ ಐಡಿಯಾ) ಜಿಯೋವನ್ನು 8.6 ಎಮ್‌ಬಿಪಿಎಸ್, ವೊಡಾಫೋನ್ 7.9 ಎಮ್‌ಬಿಪಿಎಸ್ ಮತ್ತು ಭಾರ್ತಿ ಏರ್‌ಟೆಲ್ 7.5 ಎಮ್‌ಬಿಪಿಎಸ್ ಡೌನ್‌ಲೋಡ್ ವೇಗದೊಂದಿಗೆ ನಂತರದ ಸ್ಥಾನದಲ್ಲಿವೆ. ಅಕ್ಟೋಬರ್ 10ರಂದು ನವೀಕರಿಸಿದ ಟ್ರಾಯ್​ ಡೇಟಾ ಈ ಅಂಕಿ- ಅಂಶ ನೀಡಿದೆ.

fastest mobile network
ಹೈಸ್ಪೀಡ್ ನೆಟ್​ವರ್ಕ್
author img

By

Published : Oct 13, 2020, 8:43 PM IST

ನವದೆಹಲಿ: ರಿಲಯನ್ಸ್ ಜಿಯೋ ಸೆಕೆಂಡಿಗೆ ಸರಾಸರಿ 19.3 ಮೆಗಾಬಿಟ್ (ಎಮ್‌ಬಿಪಿಎಸ್) ಡೌನ್ಲೋಡ್​ ವೇಗ ಹೊಂದಿರುವ ವೇಗದ ಮೊಬೈಲ್ ನೆಟ್‌ವರ್ಕ್ ಆಗಿ ಮುಂದುವರೆದಿದೆ.

ಅಪ್ಲೋಡ್​ ನೆಟ್​ವರ್ಕ್​​ನಲ್ಲಿ ವೊಡಾಫೋನ್ ಅತ್ಯಧಿಕ ವೇಗ ದಾಖಲಿಸಿದೆ ಎಂದು ಟೆಲಿಕಾಂ ನಿಯಂತ್ರಕ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ ಇತ್ತೀಚಿನ ಮಾಹಿತಿಯಲ್ಲಿ ತಿಳಿಸಿದೆ.

ಐಡಿಯಾ ಸೆಲ್ಯುಲಾರ್ ನೆಟ್‌ವರ್ಕ್ (ವೊಡಾಫೋನ್ ಐಡಿಯಾ) ಜಿಯೋವನ್ನು 8.6 ಎಮ್‌ಬಿಪಿಎಸ್, ವೊಡಾಫೋನ್ 7.9 ಎಮ್‌ಬಿಪಿಎಸ್ ಮತ್ತು ಭಾರ್ತಿ ಏರ್‌ಟೆಲ್ 7.5 ಎಮ್‌ಬಿಪಿಎಸ್ ಡೌನ್‌ಲೋಡ್ ವೇಗದೊಂದಿಗೆ ನಂತರದ ಸ್ಥಾನದಲ್ಲಿವೆ. ಅಕ್ಟೋಬರ್ 10ರಂದು ನವೀಕರಿಸಿದ ಟ್ರಾಯ್​ ಡೇಟಾ ತಿಳಿಸಿದೆ.

ವೊಡಾಫೋನ್ ಮತ್ತು ಐಡಿಯಾ ತಮ್ಮ ಮೊಬೈಲ್ ವ್ಯವಹಾರಗಳನ್ನು ವಿಲೀನಗೊಳಿಸಿದ್ದರೂ ಎರಡೂ ಕಂಪನಿಗಳ ನೆಟ್‌ವರ್ಕ್‌ಗಳ ಏಕೀಕರಣವು ಪ್ರಸ್ತುತದಲ್ಲಿ ಇರುವುದರಿಂದ ಟ್ರಾಯ್​ ಅವುಗಳ ಕಾರ್ಯಕ್ಷಮತೆ ಪ್ರತ್ಯೇಕವಾಗಿ ಅಳೆಯುತ್ತದೆ.

49 ನಗರಗಳಲ್ಲಿ ಅಧ್ಯಯನದ ನಂತರ ಈ ಖಾಸಗಿ ಸಂಸ್ಥೆ ಓಪನ್‌ಸಿಗ್ನಲ್ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಿತು. ಭಾರ್ತಿ ಏರ್‌ಟೆಲ್ ಭಾರತದಲ್ಲಿ ವೇಗದ ಡೌನ್ಲೋಡ್​ ವೇಗ ಹೊಂದಿದೆ. ನೈಜ ಸಮಯದ ಆಧಾರದ ಮೇಲೆ ತನ್ನ ಮೈಸ್ಪೀಡ್ ಅಪ್ಲಿಕೇಷನ್‌ ನೆರವಿನಿಂದ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸಂಗ್ರಹಿಸಿದ ಡೇಟಾದಿಂದ ಸರಾಸರಿ ನೆಟ್‌ವರ್ಕ್ ವೇಗವನ್ನು ಟ್ರಾಯ್ ಲೆಕ್ಕಾಚಾರ ಹಾಕಿದೆ.

ಟ್ರಾಯ್ ಚಾರ್ಟ್ ಪ್ರಕಾರ, ಆಗಸ್ಟ್‌ನಲ್ಲಿ ದಾಖಲಾದ ಡೇಟಾಗಳಿಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ಎಲ್ಲಾ ಖಾಸಗಿ ಟೆಲಿಕಾಂ ಆಪರೇಟರ್‌ಗಳ ಸರಾಸರಿ ವೇಗ ಹೆಚ್ಚಾಗಿದೆ. ರಿಲಯನ್ಸ್ ಜಿಯೋ ನೆಟ್‌ವರ್ಕ್‌ನ ಡೌನ್‌ಲೋಡ್ ವೇಗವು ಸೆಪ್ಟೆಂಬರ್‌ನಲ್ಲಿ ಶೇ 21ರಷ್ಟು ಏರಿಕೆಯಾಗಿದ್ದು, ಆಗಸ್ಟ್‌ನಲ್ಲಿ 15.9 ಎಮ್‌ಬಿಪಿಎಸ್‌ನಿಂದ 19.3 ಎಮ್‌ಬಿಪಿಎಸ್‌ಗೆ ಏರಿತು. ಏರ್ಟೆಲ್ ನೆಟ್ವರ್ಕ್​ನಲ್ಲಿ 7 ಎಂಬಿಪಿಎಸ್​ನಿಂದ 7.5 ಎಂಬಿಪಿಎಸ್ ಮತ್ತು ವೊಡಾಫೋನ್ ಮತ್ತು ಐಡಿಯಾ ನೆಟ್ವರ್ಕ್​ನಲ್ಲಿ ಶೇ 1-3ರಷ್ಟು ಹೆಚ್ಚಳವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.