ನವದೆಹಲಿ: ಪ್ರೇಮಿಗಳ ದಿನ ಹತ್ತಿರ ಬರುತ್ತಿದೆ. ತನ್ನ ಪ್ರೇಮಿಯನ್ನು ಒಲಿಸಿಕೊಳ್ಳಲು ಪ್ರಿಯತಮ ಅಥವಾ ಪ್ರಿಯತಮೆ ಉಡುಗೊರೆ ಕೊಡುವುದು ಸಾಮಾನ್ಯ. ಆದರೆ, ಜಗತ್ತಿನ ನಂಬರ್ ಶ್ರೀಮಂತ ತನ್ನ ಪ್ರೇಯಸಿಗಾಗಿ ಉಡುಗೊರೆಯಾಗಿ ನೀಡಿದ ಮಹಲ್ನ ಮೌಲ್ಯ ಭಾರೀ ಸದ್ದು ಮಾಡುತ್ತಿದೆ.
ಅಮೆಜಾನ್ ಮುಖ್ಯ ಕಾರ್ಯನಿರ್ವಾಹಕ ಜೆಫ್ ಬೆಜೋಸ್ 165 ಮಿಲಿಯನ್ ಡಾಲರ್ (₹ 1,178 ಕೋಟಿ) ವೆಚ್ಚದಲ್ಲಿ ಹೊಸ ಮನೆಯನ್ನು ಖರೀದಿಸಿದ್ದಾರೆ. ಈ ಹೊಸ ಮನೆ ಸಂಗೀತ ಮೊಗಲ್ ಡೇವಿಡ್ ಜೆಫೆನ್ ಅವರಿಗೆ ಸೇರಿದಾಗಿತ್ತು ಎಂದು ವರದಿಯಾಗಿದೆ.
-
Aerial shot of Jeff Bezos’ new $165 Million home purchase in Beverly Hills. Built by Jack Warner of Warner Bros.
— Ben Wegmann (@benwegmann) February 13, 2020 " class="align-text-top noRightClick twitterSection" data="
This sale is now the highest recorded purchase in the state of California. pic.twitter.com/xPHP6535bi
">Aerial shot of Jeff Bezos’ new $165 Million home purchase in Beverly Hills. Built by Jack Warner of Warner Bros.
— Ben Wegmann (@benwegmann) February 13, 2020
This sale is now the highest recorded purchase in the state of California. pic.twitter.com/xPHP6535biAerial shot of Jeff Bezos’ new $165 Million home purchase in Beverly Hills. Built by Jack Warner of Warner Bros.
— Ben Wegmann (@benwegmann) February 13, 2020
This sale is now the highest recorded purchase in the state of California. pic.twitter.com/xPHP6535bi
ಬೆವರ್ಲಿ ಹಿಲ್ಸ್‌ನಲ್ಲಿರುವ ಬೆಜೋಸ್‌ನ ಹೊಸ ಮಹಲು ಲಾಸ್ ಏಂಜಲೀಸ್ ಪ್ರದೇಶದಲ್ಲಿ ಮಾರಾಟವಾದ ಅತ್ಯಂತ ದುಬಾರಿ ಎಂದು ವರದಿಯಾಗಿದೆ. ಕಳೆದ ವರ್ಷ ಮಾಧ್ಯಮ ದೊರೆ ರುಪರ್ಟ್ ಮುರ್ಡೊಕ್ ಪುತ್ರ ಲಾಚ್ಲಾನ್ ಅವರು ಬೆವರ್ಲಿ ಹಿಲ್ಸ್ ಭವನ ಎಂದು ಕರೆಯಲ್ಪಡುವ ಚಾರ್ಟ್ವೆಲ್ ಎಸ್ಟೇಟ್ಗೆ ಸುಮಾರು 150 ಮಿಲಿಯನ್ ಡಾಲರ್ (₹ 1,071 ಕೋಟಿ ) ಪಾವತಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದನ್ನು ಬೆಜೋಸ್ ಹಿಂದಿಕ್ಕಿದ್ದಾರೆ.
ಕಳೆದ ವಾರ ಲಾಸ್ ಏಂಜಲೀಸ್ನಲ್ಲಿ ಗೆಳತಿ ಲಾರೆನ್ ಸ್ಯಾಂಚೆಝ್ ಅವರೊಂದಿಗೆ ಬೆಜೋಸ್ ಹೊಸ ಮನೆ ಹುಡುಕುತ್ತಿದ್ದಾರೆ ಎಂಬ ವರದಿಗಳು ಹೊರಬಿದಿದ್ದವು. ಅಮೆಜಾನ್ ಸಂಸ್ಥಾಪಕ ಖರೀದಿಸಿದ ಹೊಸ ಮಹಲ್, ಮೂಲತಃ 1930ರ ದಶಕದಲ್ಲಿ ವಾರ್ನರ್ ಬ್ರದರ್ಸ್ ಸಂಸ್ಥಾಪಕ ಜ್ಯಾಕ್ ವಾರ್ನರ್‌ಗಾಗಿ ನಿರ್ಮಿಸಲಾಗಿತ್ತು.
ಆರ್ಕಿಟೆಕ್ಚರಲ್ ಡೈಜೆಸ್ಟ್ ಪ್ರಕಾರ, ಬೆವರ್ಲಿ ಹಿಲ್ಸ್ ಮನೆಯು 13,600 ಚದರ ಅಡಿ ವಿಸ್ತೀರ್ಣದಲ್ಲಿದೆ. ಇದು ವಿಸ್ತಾರವಾದ ಟೆರೇಸ್ ಮತ್ತು ಉದ್ಯಾನವನಗಳು, ಎರಡು ಅತಿಥಿಗೃಹಗಳು, ನರ್ಸರಿ, ಮೂರು ಹಾಟ್‌ಹೌಸ್‌ಗಳು, ಟೆನಿಸ್ ಕೋರ್ಟ್, ಈಜುಕೊಳ, ಒಂಬತ್ತು ರಂಧ್ರಗಳ ಗಾಲ್ಫ್ ಕೋರ್ಸ್ ಮತ್ತು ಮೋಟಾರ್ ಕೋರ್ಟ್‌ಗಳನ್ನು ಹೊಂದಿದೆ ಎನ್ನಲಾಗುತ್ತಿದೆ.