ETV Bharat / business

3 ನಿಮಿಷದಲ್ಲಿ ಸಾಲ ನೀಡುವ ಚೀನಾದ ಜಾಕ್​​ ಮಾ! - ಮೈಬ್ಯಾಂಕ್

ಮೈಬ್ಯಾಂಕ್​ (MYbank) ಆರಂಭಿಸಿ 2 ಟ್ರಿಲಿಯನ್​ ಯುವಾನ್ (₹ 20.02 ಲಕ್ಷ ಕೋಟಿ) ಮೂಲಕ 16 ಮಿಲಿಯನ್ (1.6 ಕೋಟಿ) ಸಣ್ಣ ಉದ್ಯಮಿಗಳಿಗೆ ನೇರವಾಗಿ ಸಾಲ ವಿತರಣೆ ಮಾಡಿದ್ದಾರೆ. ಮಾ ಅವರ ಮೈಬ್ಯಾಂಕ್​ನಿಂದ ಚೀನಾದ ಸಣ್ಣ- ಪುಟ್ಟ ಉದ್ಯಮಿಗಳಿಗೆ ಸುಲಭವಾಗಿ ಸಾಲ ಸಿಗುತ್ತಿದ್ದು, ಚೀನಾದ್ಯಂತ ಕಿರು ಉದ್ಯಮದ ಕ್ರಾಂತಿ ನಡೆಯುತ್ತಿದೆ.

ಜಾಕ್ ಮಾ
author img

By

Published : Jul 31, 2019, 9:53 PM IST

ಬೀಜಿಂಗ್​: ಅಲಿಬಾಬಾ ಗ್ರೂಪ್​ ಸಂಸ್ಥಾಪಕ ಜಾಕ್​ ಮಾ ಅವರು ಚೀನಾದ ಇ- ಕಾಮರ್ಸ್​ ಉದ್ಯಮದ ಚಿತ್ರಣವನ್ನೇ ಬದಲಾಯಿಸಿದ್ದು, ಈಗ ಬ್ಯಾಂಕಿಂಗ್​ ವಲಯದತ್ತ ದೃಷ್ಟಿ ನೆಟ್ಟಿದ್ದಾರೆ.

ಮೈಬ್ಯಾಂಕ್​ (MYbank) ಆರಂಭಿಸಿ 2 ಟ್ರಿಲಿಯನ್​ ಯುವಾನ್ (₹ 20.02 ಲಕ್ಷ ಕೋಟಿ) ಮೂಲಕ 16 ಮಿಲಿಯನ್ (1.6 ಕೋಟಿ) ಸಣ್ಣ ಉದ್ಯಮಿಗಳಿಗೆ ನೇರವಾಗಿ ಸಾಲ ವಿತರಣೆ ಮಾಡಿದ್ದಾರೆ. ಮಾ ಅವರ ಮೈಬ್ಯಾಂಕ್​ನಿಂದ ಚೀನಾದ ಸಣ್ಣ- ಪುಟ್ಟ ಉದ್ಯಮಿಗಳಿಗೆ ಸುಲಭವಾಗಿ ಸಾಲ ಸಿಗುತ್ತಿದ್ದು, ಚೀನಾದ್ಯಂತ ಕಿರು ಉದ್ಯಮದ ಕ್ರಾಂತಿ ನಡೆಯುತ್ತಿದೆ.

ಉದ್ಯಮ ನಡೆಸುವ ಇಚ್ಛೆ ಹೊಂದಿರುವವರು ತಮ್ಮ ಸ್ಮಾರ್ಟ್​ಫೋನ್​ಲ್ಲಿಯೇ ಸಾಲಕ್ಕೆ ಅರ್ಜಿ ಸಲ್ಲಿಸುವ ಅವಕಾಶವಿದೆ. ಅರ್ಜಿದಾರ ಸಲ್ಲಿಸಿದ್ದ ಎಲ್ಲ ದಾಖಲೆಗಳು ಸರಿಯಾಗಿದ್ದರೆ ಕೆವಲ 3 ನಿಮಿಷಗಳಲ್ಲಿ ಸಾಲ ಲಭ್ಯವಾಗುತ್ತದೆ. ಸಾಲದ ವಸೂಲಾತಿ ಮೊತ್ತ ಸಹ ಉತ್ತವಾಗಿದ್ದು, ಒಟ್ಟು ಸುಸ್ತಿದಾರರ ಪ್ರಮಾಣ ಶೇ. 1ಕ್ಕಿಂತ ಕಡಿಮೆ ಆಗಿದೆ.

ತಂತ್ರಜ್ಞಾನದ ನೆರವಿನಿಂದ ಹಣಕಾಸಿನ ವಹಿವಾಟಿನಲ್ಲಿ ಕ್ಷಿಪ್ರತೆ ಕಂಡುಕೊಂಡು ವಿಶ್ವದಲ್ಲಿಯೇ ಇ-ಪೇಮೆಂಟ್​ ಮಾರುಕಟ್ಟೆಯನ್ನು ಚೀನಾ ಅಗಾಧವಾಗಿ ವಿಸ್ತರಿಸಿಕೊಳ್ಳುತ್ತಿದೆ. ಪಾವತಿ ವ್ಯವಸ್ಥೆಯಡಿ ಬರುವ ಸಾಲಗಾರರ ವೈಯಕ್ತಿಕ ದಾಖಲಾತಿಯನ್ನು ಸೋಷಿಯಲ್ ಮೀಡಿಯಾ ಹಾಗೂ ಇತರೆ ಮೀಡಿಯಾಗಳಿಂದ ಸಂಗ್ರಹಿಸುತ್ತಿದೆ. ಈ ಮುಖೇನ ತ್ವರಿತವಾಗಿ ಸಾಲ ವಿತರಿಸಿ ವಿಳಂಬ ಧೋರಣೆಗೆ ಇತಿಶ್ರೀ ಹಾಡುತ್ತಿದೆ.

2015ರಲ್ಲಿ ಆರಂಭಿಸಿದ ಮೈಬ್ಯಾಂಕ್​ ಸಾಲ ವಿತರಣೆಗೆ ಸಂಪೂರ್ಣ ಎಐ ಮತ್ತು ಆಟೋಮೇಷನ್‌ ತಂತ್ರಜ್ಞಾನವನ್ನೇ ಬಳಸಿಕೊಂಡಿದ್ದಾರೆ. ಈ ಪ್ರಕ್ರಿಯೆಗೆ ಬ್ಯಾಂಕ್‌ಗಳಲ್ಲಿ ಉದ್ಯೋಗಿಗಳ ಅಗತ್ಯವಿಲ್ಲ. ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಮತ್ತು ಡೇಟಾವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದೆ.

ಈ ನಾಲ್ಕು ವರ್ಷಗಳ ಅವಧಿಯಲ್ಲಿ ಸಾಂಪ್ರದಾಯಿಕ ಸಾಲ ವಿತರಣೆಗಿಂತ ಮೈಬ್ಯಾಂಕ್​ನಲ್ಲಿ ಸಾಲ ಪಡೆಯುವವರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ಕಳೆದ ವರ್ಷ 670 ಮಿಲಿಯನ್ ಯುವಾನ್ ಲಾಭ ಗಳಿಸಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.