ETV Bharat / business

ಕೋಲು ಕೊಟ್ಟು ಹೊಡೆಸಿಕೊಂಡ ಜಾಕ್​ ಮಾ: ಚೀನಾ ಏಟಿಗೆ ಏಷ್ಯಾದ ಕುಬೇರ ಕಂಗಾಲು! - ಜಾಕ್​ ಮಾ ವರ್ಸಸ್ ಚೀನಾ ಸರ್ಕಾರ

ಚೀನಾದ ಅಧಿಕೃತ ಕ್ಸಿನ್ಹುವಾ ಸುದ್ದಿ ಸಂಸ್ಥೆಯಾದ ಶಾಂಘೈ ಸೆಕ್ಯೂರಿಟಿ ನ್ಯೂಸ್ ತನ್ನ ಟೆಕ್ ದೈತ್ಯರ ಬಗ್ಗೆ ಮಂಗಳವಾರ ಲೇಖನವೊಂದನ್ನು ಪ್ರಕಟಿಸಿದೆ. ಅದರಲ್ಲಿ ಜಾಕ್ ಮಾ ಅವರ ಹೆಸರಿಲ್ಲ. ಮಾಗೆ ತಿರುಗೇಟು ಎಂಬಂತೆ ಆಲಿಬಾಬಾ ಪ್ರತಿಸ್ಪರ್ಧಿ ಟೆನ್ಸೆಂಟ್ ಸಿಇಒ ಪೋನಿ ಅವರನ್ನು ಹಾಡಿ ಹೊಗಳಲಾಗಿದೆ.

Jack MA
Jack MA
author img

By

Published : Feb 2, 2021, 2:22 PM IST

ಬೀಜಿಂಗ್: ಅಲಿಬಾಬಾ ಸಹ ಸಂಸ್ಥಾಪಕ ಜಾಕ್ ಮಾ ಚೀನಾ ಸರ್ಕಾರವನ್ನು ಟೀಕಿಸಿ ಅನಗತ್ಯ ತೊಂದರೆಗೆ ಸಿಲುಕಿದ್ದಾರೆ. ಡ್ರ್ಯಾಗನ್ ಸರ್ಕಾರ ಈಗಾಗಲೇ ತನ್ನ ಕಂಪನಿಗಳ ಮೇಲೆ ನಿಗಾ ಇರಿಸಿದ್ದು, ಮಾ ಅವರನ್ನು ಟೆಕ್ ದೈತ್ಯರ ಪಟ್ಟಿಯಿಂದ ತೆಗೆದು ಹಾಕಿದೆ.

ಚೀನಾದ ಅಧಿಕೃತ ಕ್ಸಿನ್ಹುವಾ ಸುದ್ದಿ ಸಂಸ್ಥೆಯಾದ ಶಾಂಘೈ ಸೆಕ್ಯುರಿಟಿ ನ್ಯೂಸ್ ತನ್ನ ಟೆಕ್ ದೈತ್ಯರ ಬಗ್ಗೆ ಮಂಗಳವಾರ ಲೇಖನವೊಂದನ್ನು ಪ್ರಕಟಿಸಿದೆ. ಅದರಲ್ಲಿ ಜಾಕ್ ಮಾ ಅವರ ಹೆಸರಿಲ್ಲ. ಮಾಗೆ ತಿರುಗೇಟು ಎಂಬಂತೆ ಆಲಿಬಾಬಾ ಪ್ರತಿಸ್ಪರ್ಧಿ ಟೆನ್ಸೆಂಟ್ ಸಿಇಒ ಪೋನಿ ಅವರನ್ನು ಹಾಡಿ ಹೊಗಳಲಾಗಿದೆ. 'ತಂತ್ರಜ್ಞಾನದಲ್ಲಿನ ಕುದುರೆ ನಮ್ಮ ಇತಿಹಾಸವನ್ನು ಪುನಃ ಬರೆಯುತ್ತಿದೆ' ಎಂದು ಶಾಂಘೈ ಸೆಕ್ಯುರಿಟೀಸ್ ಸರ್ಟಿಫಿಕೇಟ್​ ನೀಡಿದೆ. ಬಿವೈಡಿ ಕಂಪನಿ ಅಧ್ಯಕ್ಷ ವಾಂಗ್ ಚುವಾನ್ಫು, ಶೋಮಿ ಸಹ-ಸಂಸ್ಥಾಪಕ ಲೀ ಜುನ್, ಹುವಾಯ್​ ಮುಖ್ಯಸ್ಥ ರೆನ್ ಝಾಗ್‌ಫೈ ಮತ್ತು ಇತರ ಖ್ಯಾತ ಉದ್ಯಮಿಗಳನ್ನು ಹೆಸರಿಸಲಾಗಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರ ಸೇತುವೆಗಳನ್ನು ಕಟ್ಟಬೇಕು, ಗೋಡೆಗಳನ್ನಲ್ಲ: ರಾಹುಲ್ ಟ್ವೀಟ್​​

ಕೆಲವು ತಿಂಗಳ ಹಿಂದೆ ಸರ್ಕಾರಕ್ಕೆ ಸಲಹೆ ನೀಡಿದ ಜಾಕ್ ಮಾ, ಚೀನಾದ ಆಡಳಿತಗಾರರ ಕೆಂಗಣ್ಣಿಗೆ ಗುರಿಯಾಗಿದ್ದರು ಎಂದು ತಿಳಿದುಬಂದಿದೆ. ಕಳೆದ ವರ್ಷ ಅಕ್ಟೋಬರ್ 24ರಂದು ಚೀನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜಾಕ್ ಮಾ, ಚೀನಾದ ಆರ್ಥಿಕತೆಯ ನ್ಯೂನತೆಗಳನ್ನು ಒಳಗೊಂಡಿದೆ. ಚೀನಾದ ಬ್ಯಾಂಕ್​ಗಳು ಹಳೆ ಕ್ಲಬ್​ ಸದಸ್ಯರ ಮನೋಭಾವದಿಂದ ಹೊರಬಂದು ವಿಶಾಲವಾಗಿ ಯೋಚಿಸುವಂತೆ ಆಗ್ರಹಿಸಿದ್ದರು. ಇದರಿಂದ ಅವರು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು.

ಮಾ ವ್ಯಾಪಾರ ಸಾಮ್ರಾಜ್ಯದ ಮೇಲೆ ನಿಯಂತ್ರಕ ಸಂಸ್ಥೆಗಳು ಕಣ್ಣಿಟ್ಟಿವೆ. ಇದಲ್ಲದೆ ನಡುವೆ ಅವರ ಆ್ಯಂಟ್​ನ ಐಪಿಒ ವಿಫಲವಾಯಿತು. ನಂತರದ ದಿನಗಳಲ್ಲಿ ಜಾಕ್ ಹೊರಗಿನ ಪ್ರಪಂಚಕ್ಕೆ ಕಾಣಿಸಿಕೊಳ್ಳದೆ ಅಗೋಚರವಾದರು. ಅವರ ಕಣ್ಮರೆಯ ಬಗ್ಗೆ ಅನೇಕ ಅನುಮಾನಗಳು ಹುಟ್ಟಿಕೊಂಡು, ಇತ್ತೀಚಿಗೆ ಸಾಮಾಜಿಕ ಜಾಲತಾಣದ ವಿಡಿಯೋವೊಂದರಲ್ಲಿ ಕಾಣಿಸಿಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.