ಬೀಜಿಂಗ್:ವಿಶ್ವದ ಸಿರಿವಂತರ ಪಟ್ಟಿಯಲ್ಲಿರುವ ಇ-ಕಾಮರ್ಸ್ ದೈತ್ಯ ಅಲಿಬಾಬಾ ಮುಖ್ಯಸ್ಥ ಜಾಕ್ ಮಾ ಅವರು ಮುಂದಿನ ವಾರ ತಮ್ಮ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರೆ.
55ನೇ ವರ್ಷದ ಜಾಕ್ ಮಾ ಅವರು, 1999ರಲ್ಲಿ ಅಲಿಬಾಬಾ ಆರಂಭಿಸುವುದಕ್ಕೂ ಮೊದಲು ಇಂಗ್ಲೀಷ್ ಶಿಕ್ಷಕರಾಗಿದ್ದರು. ಇದೀಗ ಮತ್ತೆ ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಚೀನಾದ ಕಾರ್ಯನಿರ್ವಾಹಕ ಸ್ಥಾನದ ಸ್ಟೀರಿಯೊಟೈಪ್‌ನ ಚೂರುಚೂರು ಮಾಡಿದ ಜಾಕ್ ಮಾ ಅವರು ತಮ್ಮ 55ನೇ ಜನ್ಮದಿನವಾದ ಮಂಗಳವಾರದಂದು ಅಧಿಕೃತವಾಗಿ ಅಲಿಬಾಬಾದಿಂದ ಹೊರ ನಡೆಯಲಿದ್ದಾರೆ.
ಮೈಕ್ರೊಸಾಫ್ಟ್ ಸಂಸ್ಥೆಯ ಸ್ಥಾಪಕ ಬಿಲ್ಗೇಟ್ಸ್ ಅವರ ಮಾರ್ಗವನ್ನು ಅನುಸರಿಸುವುದಾಗಿ ಹೇಳಿದ್ದ ಮಾ, 'ಶಿಕ್ಷಣ ಕ್ಷೇತ್ರದಲ್ಲಿ ನೆರವಾಗುವುದು, ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು... ಹೀಗೆ ಹಲವು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ' ಆಕಾಂಕ್ಷೆ ಇರಿಸಿಕೊಂಡಿದ್ದಾರೆ. ಆಲಿಬಾಬಾ ಕಂಪನಿಯು ಒಟ್ಟು 2.9 ಲಕ್ಷ ಕೋಟಿ ರೂ. ಮೌಲ್ಯದ (41 ಬಿಲಿಯನ್ ಡಾಲರ್) ಸಂಪತ್ತು ಹೊಂದಿದೆ.