ನವದೆಹಲಿ: ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ) ಮೂರು ಟಾಟಾ ಗ್ರೂಪ್ ಟ್ರಸ್ಟ್‌ಗಳ ತೆರಿಗೆ ವಿನಾಯಿತಿ ಎತ್ತಿ ಹಿಡಿದಿದ್ದು, ಆದಾಯ ತೆರಿಗೆ ಇಲಾಖೆಯ ಪರಿಷ್ಕರಣೆ ಆದೇಶ ರದ್ದುಪಡಿಸಿದೆ.
ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಸಂಸ್ಥೆಯ ಮುಖ್ಯಸ್ಥರಾಗಿ ಬಳಿಕ ವಜಾಗೊಂಡಿದ್ದರು. ಗ್ರೂಪ್ನಿಂದ ನಿರ್ಗಮಿಸಿದ ಕೂಡಲೇ ತೆರಿಗೆ ಇಲಾಖೆಗೆ ದಾಖಲೆಗಳನ್ನು ಪೂರೈಸಿದ್ದನ್ನು ನ್ಯಾಯಮಂಡಳಿ ಖಂಡಿಸಿತು.
ರತನ್ ಟಾಟಾ ಟ್ರಸ್ಟ್, ಜೆಆರ್ಡಿ ಟಾಟಾ ಟ್ರಸ್ಟ್ ಮತ್ತು ದೊರಾಬ್ಜಿ ಟಾಟಾ ಟ್ರಸ್ಟ್‌ನ ತೆರಿಗೆ ವಿನಾಯಿತಿ ಎತ್ತಿಹಿಡಿದ ಐಟಿಎಟಿಯ ಅಧ್ಯಕ್ಷ ನ್ಯಾಯಮೂರ್ತಿ ಪಿ ಪಿ ಭಟ್ ಮತ್ತು ಉಪಾಧ್ಯಕ್ಷ ಪ್ರಮೋದ್ ಕುಮಾರ್ ಅವರನ್ನೊಳಗೊಂಡ ಮುಂಬೈ ಪೀಠವು ಡಿಸೆಂಬರ್ 28ರಂದು ಮೂರು ಪ್ರತ್ಯೇಕ ಆದೇಶಗಳನ್ನು ಹೊರಡಿಸಿದೆ.
ಇದನ್ನೂ ಓದಿ: ಹಿಂಬದಿ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯದಂತೆ ಮುಂಬದಿ ಕಾರು ಸವಾರರಿಗೂ ಬರಲಿದೆ ಹೊಸ ರೂಲ್ಸ್!
ಮೂರು ಟ್ರಸ್ಟ್‌ಗಳಿಗೆ ತೆರಿಗೆ ವಿನಾಯಿತಿ ರದ್ದುಗೊಳಿಸಲು ಯತ್ನಿಸಿದ ಆದಾಯ ತೆರಿಗೆ ಇಲಾಖೆಯ ಮಾರ್ಚ್ 2019ರ ಪರಿಷ್ಕರಣೆ ಆದೇಶ, ಕಾನೂನುಬದ್ಧವಾಗಿ ಸಮರ್ಥನೀಯ ಅರ್ಹತೆಗಳಿಂದ ದೂರವಿದೆ ಎಂದು ಹೇಳಿದೆ.
ಟಾಟಾ ಗ್ರೂಪ್‌ನ ಹಿಡುವಳಿ ಕಂಪನಿಯಾದ ಟಾಟಾ ಸನ್ಸ್‌ನಲ್ಲಿ ಮೂರು ಟ್ರಸ್ಟ್‌ಗಳು ಒಟ್ಟಾರೆಯಾಗಿ ಶೇ 66ರಷ್ಟು ಪಾಲು ಹೊಂದಿವೆ.
ಟಾಟಾ ಸನ್ಸ್‌ನ ದಶಕಗಳಷ್ಟು ಹಳೆಯದಾದ ಟಾಟಾ ಮಾಲೀಕತ್ವದ ಟ್ರಸ್ಟ್‌ಗಳು ಮತ್ತು ಷೇರುದಾರರು ಆದಾಯ ತೆರಿಗೆ ಕಾನೂನುಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಆದಾಯ ತೆರಿಗೆ (ವಿನಾಯಿತಿ) (ಸಿಐಟಿ-ಇ) ಆಯುಕ್ತರು ಆರೋಪಿಸಿದ್ದರು. ಸಿಐಟಿ -ಇ ಆರೋಪ ನಿರಾಕರಿಸಿ ಟಾಟಾ ಟ್ರಸ್ಟ್ಸ್, ನ್ಯಾಯಮಂಡಳಿಗೆ ಮನವಿ ಸಲ್ಲಿಸಿತ್ತು.