ಜೆರೂಸಲೆಂ: ಇಸ್ರೇಲ್ನ ಎರಡು ಕಂಪನಿಗಳು ಆಂಟಿವೈರಲ್ ಮತ್ತು ಮರುಬಳಕೆ ಮಾಡಬಹುದಾದ ಬಟ್ಟೆಯ ಮುಖಗವಸು ತಯಾರಿಸಿ ಮಾರಾಟ ಮಾಡುತ್ತಿದ್ದು, ಇದು ಕೊರೊನಾ ವೈರಸ್ ಹರಡುವಿಕೆ ತಡೆಯಲು ನೆರವಾಗಲಿದೆ.
ಜನರು ಈಗ ಧರಿಸಿರುವ ಬಹುತೇಕ ಮಾಸ್ಕ್ಗಳು ವೈರಲ್ ಕಣಗಳ ನಿರ್ಬಂಧನಕ್ಕೆ ಮಾತ್ರ ಸೀಮಿತವಾಗಿದೆ. ಈ ಬಟ್ಟೆಯು ವೈರಾಣುಗಳನ್ನು ಕೊಲ್ಲುವುದಿಲ್ಲ. ಸೋನೊವಿಯಾ ಮತ್ತು ಅರ್ಗಮಾನ್ ಇತ್ತೀಚೆಗೆ ಬಟ್ಟೆಗಳ ಮೇಲಿನ ವೈರಾಣು ಮತ್ತು ಬ್ಯಾಕ್ಟೀರಿಯಾ ಕಣಗಳನ್ನು ಕೊಲ್ಲುವಂತಹ ತಂತ್ರಜ್ಞಾನ ಅಭಿವೃದ್ಧಿಪಡಿಸಿವೆ. ಕೊರೊನಾ ವೈರಸ್ ಶೀಘ್ರ ಹರಡುವಿಕೆ ನಿಯಂತ್ರಿಸಲು ಮಾಸ್ಕ್ಗಳಿಗೆ ಬಹಳಷ್ಟು ಬೇಡಿಕೆ ಸೃಷ್ಟಿಯಾಗಿದೆ. ಈ ಎರಡೂ ಕಂಪನಿಗಳು ತಮ್ಮ ಹಕ್ಕುಸ್ವಾಮ್ಯ ಪರಿಶೀಲಿಸಲು ಎಫ್ಡಿಎ ಅನುಮೋದನೆಗಾಗಿ ಕಾಯುತ್ತಿವೆ.
ಸೋನೊವಿಯಾ ಬಟ್ಟೆಗೆ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಗುಣಲಕ್ಷಣಗಳ ಯಂತ್ರ ಮತ್ತು ರಾಸಾಯನಿಕಗಳ ಹೊಂದಿರುವ ಮಾಸ್ಕ್ಗಳ ಮಾರಾಟ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿತ್ತು. ಎರಡು ತಿಂಗಳ ಹಿಂದೆ ಈ ತಂತ್ರಜ್ಞಾನ ಬಳಸಿಕೊಂಡು ಮುಖಗವಸು ತಯಾರಿಕೆ ಆರಂಭಿಸಿತು ಎಂದು ಕಂಪನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಲಿಯಾಟ್ ಗೋಲ್ಡ್ ಹ್ಯಾಮರ್ ಹೇಳಿದ್ದಾರೆ.
ಇಸ್ರೇಲ್ನ ಸ್ಟಾರ್ಟ್ಅಪ್ ಅರ್ಗಮಾನ್ ಸಹ ಆಂಟಿವೈರಲ್ ಫೇಸ್ ಮಾಸ್ಕ್ಗಳನ್ನು ತಯಾರಿಸುತ್ತಿದೆ. ಹತ್ತಿ ಮತ್ತು ಸಂಶ್ಲೇಷಿತ ನಾರು ಹೀಗೆ ಎರಡರಲ್ಲೂ ವೇಗವರ್ಧಿತ ತಾಮ್ರದ ಸಂಯುಕ್ತವಾಗಿದೆ. ಈ ಮುಖಗವಸು ರೋಗಕಾರಕಗಳನ್ನು ನಿರ್ಬಂಧಿಸುವ ಬಟ್ಟೆಗಳ ಪದರಗಳನ್ನು ಒಳಗೊಂಡಿದೆ.