ನವದೆಹಲಿ: ಮುಂದಿನ ಮೂರು ವರ್ಷಗಳಲ್ಲಿ ಕ್ಯಾಲ್ಗರಿಯದಲ್ಲಿ 500 ಐಟಿ ಸೇವಾ ತಂತ್ರಜ್ಞರನ್ನು ನೇಮಕ ಮಾಡಿಕೊಳ್ಳುವುದಾಗಿ ಟೆಕ್ ದೈತ್ಯ ಇನ್ಫೋಸಿಸ್ ಹೇಳಿದೆ.
2023ರ ವೇಳೆಗೆ ಕೆನಡಾದಲ್ಲಿ ಇರುವ ಈಗಿನ ಉದ್ಯೋಗಿಗಳು ಸೇರಿ 4,000 ನೌಕರರ ತನಕ ದ್ವಿಗುಣಗೊಳಿಸಲಿದೆ ಎಂದು ಇನ್ಫಿಯ ಉನ್ನತ ಆಡಳಿತ ಮಂಡಳಿ ಘೋಷಿಸಿದೆ.
ಕೆನಡಾದಲ್ಲಿ ನಮ್ಮ ಅಸ್ತಿತ್ವ ವಿಸ್ತರಿಸಲು ಮತ್ತು ಪ್ರಮುಖ ಹಬ್‌ಗಳಲ್ಲಿ ಉನ್ನತ ತಂತ್ರಜ್ಞಾನದ ಪ್ರತಿಭಾನ್ವಿತರ ನೇಮಿಸಿಕೊಳ್ಳಲಿದ್ದೇವೆ. ಕೆನಡಾದ ವಿಸ್ತರಣೆಯ ಭಾಗವಾಗಿ ಕ್ಯಾಲ್ಗರಿ ಮುಂದಿನ ಹಂತದ ಮಾರುಕಟ್ಟೆ ವಿಸ್ತರಣೆಯಾಗಿದೆ. ಇನ್ಫೋಸಿಸ್‌ಗೆ ಮಹತ್ವದ ಮತ್ತು ಭರವಸೆಯ ಮಾರುಕಟ್ಟೆಯಾಗಿದೆ ಎಂದು ಇನ್ಫಿ ಅಧ್ಯಕ್ಷ ರವಿ ಕುಮಾರ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: GSTಯಡಿ ಡೀಸೆಲ್ ಬಂದ್ರೆ ಲೀಟರ್ಗೆ ₹ 68: ಇದ್ರಲ್ಲಿ ಖಳನಾಯಕ ಕೇಂದ್ರವೇ? ರಾಜ್ಯವೇ?
ನಗರವು ಅಭಿವೃದ್ಧಿ ಹೊಂದುತ್ತಿರುವ ಪ್ರತಿಭೆಗಳ ನೆಲೆಯಾಗಿದೆ. ಇದು ಕೋವಿಡ್- ಸಂಬಂಧಿತ ಆರ್ಥಿಕ ಕುಸಿತದ ಮೇಲೆ ಪರಿಣಾಮ ಬೀರಿದೆ ಎಂದೂ ಇದೇ ವೇಳೆ ಹೇಳಲಾಗಿದೆ.
ಕಳೆದ ಎರಡು ವರ್ಷಗಳಲ್ಲಿ ಟೊರೊಂಟೊ, ವ್ಯಾಂಕೋವರ್, ಒಟ್ಟಾವಾ ಮತ್ತು ಮಾಂಟ್ರಿಯಲ್‌ನಾದ್ಯಂತ ಇನ್ಫೋಸಿಸ್ 2,000 ಉದ್ಯೋಗಗಳನ್ನು ಸೃಷ್ಟಿಸಿದೆ. ದೇಶಾದ್ಯಂತ ಮತ್ತಷ್ಟು ಉದ್ಯೋಗ ಅವಕಾಶಗಳನ್ನು ವಿಸ್ತರಿಸುವ ಯೋಜನೆ ಹೊಂದಿದೆ.
ಕ್ಯಾಲ್ಗರಿ ವಿಸ್ತರಣೆಯು ನೈಸರ್ಗಿಕ ಸಂಪನ್ಮೂಲಗಳು, ಇಂಧನ, ಮಾಧ್ಯಮ, ಚಿಲ್ಲರೆ ವ್ಯಾಪಾರ ಮತ್ತು ಸಂವಹನ ಸೇರಿದಂತೆ ವಿವಿಧ ಕೈಗಾರಿಕೆಗಳಲ್ಲಿ ಪಶ್ಚಿಮ ಕೆನಡಾ, ಪೆಸಿಫಿಕ್ ನಾರ್ತ್ ವೆಸ್ಟ್ ಮತ್ತು ಮಧ್ಯ ಅಮೆರಿಕದ ಗ್ರಾಹಕರೊಂದಿಗೆ ಕೆಲಸ ಮಾಡಲು ಇನ್ಫೋಸಿಸ್‌ಗೆ ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದ್ದಾರೆ.