ನವದೆಹಲಿ: ಖಾಸಗಿ ವಲಯದ ಬ್ಯಾಂಕ್ ಐಸಿಐಸಿಐ ತನ್ನ ಬ್ಯಾಂಕ್ ನೌಕರರ ಲಸಿಕೆ ವೆಚ್ಚ ಭರಿಸುವುದಾಗಿ ಘೋಷಿಸಿದೆ.
ಲಕ್ಷಾಂತರ ಉದ್ಯೋಗಿಗಳು ತಮ್ಮ ಕುಟುಂಬ ಸದಸ್ಯರಿಗೆ ಲಸಿಕೆ ಹಾಕುವ ವೆಚ್ಚವನ್ನು ಕಂಪನಿ ವತಿಯಿಂದ ಭರಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರನ್ನು ರಕ್ಷಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೋವಿಡ್ ವಿರುದ್ಧ ರಕ್ಷಿಸಲು ತೆಗೆದುಕೊಳ್ಳಬೇಕಾದ ಎರಡು ಲಸಿಕೆಗಳ ವೆಚ್ಚವನ್ನು ನೌಕರರಿಗೆ ಮರುಪಾವತಿ ಮಾಡುವುದಾಗಿ ಐಸಿಐಸಿಐ ತಿಳಿಸಿದೆ.
ಇದನ್ನೂ ಓದಿ: ಪ್ರೋತ್ಸಾಹ ಯೋಜನೆಯಿಂದ ಕೇಂದ್ರಕ್ಕೆ ಹರಿದು ಬರಲಿದೆ 40 ಲಕ್ಷ ಕೋಟಿ ರೂ. ಆದಾಯ
ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿಯೂ ಲಕ್ಷಾಂತರ ಗ್ರಾಹಕರಿಗೆ ತಮ್ಮ ಉದ್ಯೋಗಿಗಳಿಂದ ಹೆಚ್ಚಿನ ವೆಚ್ಚದಲ್ಲಿ ಸೇವೆ ಸಲ್ಲಿಸುತ್ತಿದೆ. ಅಂತಹ ನೌಕರರು ಮತ್ತು ಅವರ ಕುಟುಂಬ ಸದಸ್ಯರನ್ನು ರಕ್ಷಿಸುವುದು ಅವರ ಜವಾಬ್ದಾರಿಯಾಗಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಐಸಿಐಸಿಐ ಸಮೂಹದ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ತಿಳಿಸಿದ್ದಾರೆ.