ETV Bharat / business

ಜಾಗತಿಕ ಕುಬೇರರ ಪಟ್ಟಿಯಲ್ಲಿ ಅಂಬಾನಿಗೆ 8ನೇ ಸ್ಥಾನ: ಕೊರೊನಾ ಮಧ್ಯೆ ಜಿಯೋ ಒಡೆಯ ಗಳಿಸಿದ್ದೆಷ್ಟು? - ಮುಖೇಶ್ ಅಂಬಾನಿ ಹುರುನ್ ರಿಚ್ ಲಿಸ್ಟ್

ಕೋಟ್ಯಾಧಿಪತಿಗಳು ಕಳೆದ ವರ್ಷ ಜರ್ಮನಿಯ ಜಿಡಿಪಿಗೆ ಸಮಾನವಾಗಿ ಸಂಪತ್ತು ಗಳಿಸಿಕೊಂಡಿದ್ದಾರೆ. ಒಟ್ಟಾರೆ ಸಂಪತ್ತು ಚೀನಾದ ದೇಶೀಯ ಉತ್ಪನ್ನಕ್ಕೆ ಸರಿಸಮಾನವಾಗಿದೆ. 14.7 ಟ್ರಿಲಿಯನ್​ ಡಾಲರ್​​ ಸಂಪತ್ತಿಗೆ ಹೊಸದಾಗಿ 3.5 ಟ್ರಿಲಿಯನ್ ಡಾಲರ್ ಸೇರಿಸಿಕೊಂಡಿದ್ದಾರೆ. ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2021ರಲ್ಲಿ 68 ದೇಶಗಳ 2,402 ಕಂಪನಿಗಳ 3228 ಬಿಲಿಯನೇರ್‌ಗಳು ಇದ್ದಾರೆ.

Hurun Global Rich List
Hurun Global Rich List
author img

By

Published : Mar 2, 2021, 2:50 PM IST

ನವದೆಹಲಿ: ಹುರುನ್ 2021ರ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಟೆಸ್ಲಾದ ಎಲೋನ್ ಮಸ್ಕ್ ಅಗ್ರ ಸ್ಥಾನದಲ್ಲಿದ್ದಾರೆ.

ಮಂಗಳವಾರ ಬಿಡುಗಡೆಯಾದ 10ನೇ ಆವೃತ್ತಿಯ ಹುರುನ್ ಗ್ಲೋಬಲ್ ರಿಚ್​ಲಿಸ್ಟ್ 2021ರ ಪಟ್ಟಿಗೆ ವಾರದಲ್ಲಿ 8 ಬಿಲಿಯನೇರ್‌ ಸೇರ್ಪಡೆಯಾಗಿದ್ದು 2020ರ ವರ್ಷದಲ್ಲಿ 421 ಕಬೇರರು ಒಳಸೇರಿ ಆಗರ್ಭ ಸಿರಿವಂತರ ಸಂಖ್ಯೆ 3,288ಕ್ಕೇರಿದೆ.

ಕೋವಿಡ್​-19 ಸಾಂಕ್ರಾಮಿಕ ರೋಗದ ಹೊರತಾಗಿಯೂ, ಪರಿಶೀಲನೆಯ ಅವಧಿಯಲ್ಲಿ ವಿಶ್ವದಾದ್ಯಂತದ ಎಲ್ಲಾ ಬಿಲಿಯನೇರ್‌ಗಳ ಒಟ್ಟು ಸಂಪತ್ತು ಶೇ 32ರಷ್ಟು ಏರಿಕೆಯಾಗಿ 14.7 ಟ್ರಿಲಿಯನ್‌ಗೆ ತಲುಪಿದೆ.

ಕೋಟ್ಯಾಧಿಪತಿಗಳು ಕಳೆದ ವರ್ಷ ಜರ್ಮನಿ ಜಿಡಿಪಿ ಸಮಾನಾಗಿ ಸಂಪತ್ತು ಗಳಿಸಿಕೊಂಡಿದ್ದು, ಒಟ್ಟಾರೆ ಸಂಪತ್ತು ಚೀನಾದ ದೇಶೀಯ ಉತ್ಪನ್ನಕ್ಕೆ ಸರಿಸಮಾನಾಗಿದೆ. 14.7 ಟ್ರಿಲಿಯನ್​ ಡಾಲರ್​​ ಸಂಪತ್ತಿಗೆ ಹೊಸದಾಗಿ 3.5 ಟ್ರಿಲಿಯನ್ ಡಾಲರ್ ಸೇರಿಸಿಕೊಂಡಿದ್ದಾರೆ. ಇದು ಆರ್ಥಿಕ ಶಕ್ತಿಯ ದೊಡ್ಡ ಸಾಂದ್ರತೆಯಾಗಿದೆ ಎಂದು ವರದಿ ಹೇಳಿದೆ. ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2021ಯಲ್ಲಿ 68 ದೇಶಗಳ 2,402 ಕಂಪನಿಗಳ 3,228 ಬಿಲಿಯನೇರ್‌ಗಳು‌ ಇದ್ದಾರೆ.

  • Hurun Research released the 10th Edition of Hurun Global Rich List 2021, a report looking into wealth changes of the world’s most successful entrepreneurs in the year ending 15th January 2021.

    This is the tenth year of the ranking. The Hurun Global Rich List 2021 ranked pic.twitter.com/RiYQXxxexY

    — HURUN INDIA (@HurunReportInd) March 2, 2021 " class="align-text-top noRightClick twitterSection" data=" ">

ಟೆಸ್ಲಾದ ಎಲೋನ್ ಮಸ್ಕ್ ಒಂದೇ ವರ್ಷದಲ್ಲಿ 151 ಬಿಲಿಯನ್ ಡಾಲರ್ ಸಂಪತ್ತು ಗಳಿಸಿದ್ದಾರೆ. ಮೊದಲ ಬಾರಿಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ 197 ಬಿಲಿಯನ್ ಡಾಲರ್​ ನಿವ್ವಳ ಮೌಲ್ಯ ಹೊಂದಿದ್ದಾರೆ. ಅಮೆಜಾನ್ ಇಂಕ್ ಸಹ-ಸಂಸ್ಥಾಪಕ ಜೆಫ್ ಬೆಜೋಸ್ 189 ಬಿಲಿಯನ್ ಡಾಲರ್​ ನಿವ್ವಳ ಮೌಲ್ಯದೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ವಿಶ್ವದ ಅತಿದೊಡ್ಡ ಐಷಾರಾಮಿ ಸರಕುಗಳ ಕಂಪನಿ ಲೂಯಿ ವಿಟಾನ್ ಸಿಇಒ ಬರ್ನಾರ್ಡ್ ಅರ್ನಾಲ್ಟ್ 114 ಬಿಲಿಯನ್ ಡಾಲರ್ ಮುಖೇನ ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದ್ದಾರೆ. ಬಿಲ್ ಗೇಟ್ಸ್ (ಮೈಕ್ರೋಸಾಫ್ಟ್) ಮತ್ತು ಮಾರ್ಕ್ ಜುಕರ್‌ಬರ್ಗ್ (ಫೇಸ್‌ಬುಕ್) ನಂತರದ ಸ್ಥಾನದಲ್ಲಿದ್ದಾರೆ.

ಕೋವಿಡ್ -19ನಿಂದ ಉಂಟಾದ ಅಡ್ಡಿಗಳ ಹೊರತಾಗಿಯೂ ಈ ವರ್ಷ ಕಳೆದ ದಶಕದ ಅತಿದೊಡ್ಡ ಸಂಪತ್ತಿನ ಹೆಚ್ಚಳ ಕಂಡಿದೆ. ಸ್ಟಾಕ್ ಮಾರುಕಟ್ಟೆಯ ಉತ್ತುಂಗವು ಕಳೆದ ವರ್ಷ ವಾರಕ್ಕೆ ಎಂಟು ಹೊಸ ಡಾಲರ್ ಶತಕೋಟ್ಯಾಧಿಪತಿಗಳನ್ನು ಸೃಜಿಸಿದೆ ಎಂದು ಹುರುನ್ ವರದಿಯ ಅಧ್ಯಕ್ಷ ಮತ್ತು ಮುಖ್ಯ ಸಂಶೋಧಕ ರೂಪರ್ಟ್ ಹೂಗೆವರ್ಫ್ ಹೇಳಿದ್ದಾರೆ.

ಇದನ್ನೂ ಓದಿ: ಪ್ರತಿ 10 ಗ್ರಾಂ. ಚಿನ್ನದ ದರದಲ್ಲಿ 11,901 ರೂ. ಕುಸಿತ!

ಮೂವರು ವ್ಯಕ್ತಿಗಳು ಒಂದೇ ವರ್ಷದಲ್ಲಿ 50 ಶತಕೋಟಿ ಡಾಲರ್​ ಗಳಿಸಿದ್ದಾರೆ. ಎಲೋನ್ ಮಸ್ಕ್ 151 ಬಿಲಿಯನ್ ಡಾಲರ್​, ಇ-ಕಾಮರ್ಸ್ ಬಿಲಿಯನೇರ್‌ಗಳಾದ ಅಮೆಜಾನ್‌ನ ಜೆಫ್ ಬೆಜೋಸ್ ಮತ್ತು ಪಿಂಡೊಡುವೊದ ಕಾಲಿನ್ ಹುವಾಂಗ್ ತಲಾ 50 ಬಿಲಿಯನ್ ಡಾಲರ್​ ಸಂಪತ್ತು ಸೃಜಿಸಿಕೊಂಡಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ 100 ಬಿಲಿಯನ್ ಡಾಲರ್​ ಮೊತ್ತದ ಮೂಲಕ 50 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯಮಿಗಳು ಸೇರ್ಪಡೆ ಆಗಬಹುದು ಎಂದು ಹೂಗೆವರ್ಫ್ ಹೇಳಿದರು.

  • Over the years, Hurun India has been celebrating Indian entrepreneurs and their inspiring stories of wealth creation.

    Through this series of "The Chronicles of Wealth Creation", find out the growth in wealth of some of India's leading entrepreneurs over the last years. pic.twitter.com/Xfs5eaixFA

    — HURUN INDIA (@HurunReportInd) February 8, 2021 " class="align-text-top noRightClick twitterSection" data=" ">

ಎಲ್ಲಾ ಜಾಗತಿಕ ಬಿಲಿಯನೇರ್‌ಗಳಲ್ಲಿ ಶೇ 71ರಷ್ಟು ಉದ್ಯಮಿಗಳು ಸ್ವಯಂನಿರ್ಮಿತರಾಗಿದ್ದಾರೆ. ಕೇವಲ 29 ಪ್ರತಿಶತದಷ್ಟು ಜನರು ಮಾತ್ರ ಸಂಪತ್ತನ್ನು ತಮ್ಮ ಹಿರಿಯರಿಂದ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ. ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ವಾಲ್ಮಾ​ರ್ಟ್‌ನ ಆಲಿಸ್ ವಾಲ್ಟನ್ 74 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ.

ಇದನ್ನೂ ಓದಿ: ವಿಶ್ವದಾಖಲೆ ಬರೆದ 'ರಾಮಾಯಣ' ಸೀರಿಯಲ್​; 999 ಶತಕೋಟಿಗೇರಿದ ವೀಕ್ಷಣಾ ನಿಮಿಷ!

ಚೀನಾ 1,058 ಬಿಲಿಯನೇರ್​ಗಳನ್ನು ಹೊಂದಿದ್ದರೆ ಅಮೆರಿಕ 696, ಭಾರತ 177, ಜರ್ಮನಿ, ಇಂಗ್ಲೆಂಡ್​ ಮತ್ತು ಸ್ವಿಟ್ಜರ್ಲೆಂಡ್ ತಲಾ 100ಕ್ಕೂ ಅಧಿಕ ಜನರನ್ನು ಹೊಂದಿದೆ.

ಏಷ್ಯಾವು ಕೋಟ್ಯಾಧಿಪತಿಗಳಲ್ಲಿ ಶೇ 51ರಷ್ಟನ್ನು ಹೊಂದಿದೆ. ಭಾರತದಲ್ಲಿ ಈಗ 209 ಶತಕೋಟ್ಯಾಧಿಪತಿಗಳು ಇದ್ದಾರೆ.

83 ಬಿಲಿಯನ್‌ ಡಾಲರ್​​ನೊಂದಿಗೆ ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ಅಧ್ಯಕ್ಷ ಮುಖೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು, ಏಷ್ಯಾದ ಎರಡನೇ ಶ್ರೀಮಂತ ಉದ್ಯಮಿ. ವಿಶ್ವದಲ್ಲಿ ಎಂಟನೇ ಸ್ಥಾನ ಪಡೆದಿದ್ದಾರೆ. ಗೌತಮ್ ಅದಾನಿ (ಅದಾನಿ ಗ್ರೂಪ್), ಶಿವ ನಾಡರ್ (ಎಚ್‌ಸಿಎಲ್ ಗ್ರೂಪ್), ಲಕ್ಷ್ಮಿ ಎನ್. ಮಿತ್ತಲ್ (ಆರ್ಸೆಲರ್ ಮಿತ್ತಲ್) ಮತ್ತು ಸೈರಸ್ ಪೂನವಾಲ್ಲಾ (ಸೀರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ) ಭಾರತದ ಅಗ್ರ ಶ್ರೇಯಾಂಕಿತ ಬಿಲಿಯನೇರ್‌ಗಳು ಎಂದು ವರದಿ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.