ನವದೆಹಲಿ: ತಂತ್ರಜ್ಞಾನ ದೈತ್ಯ ಆ್ಯಪಲ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಟಿಮ್ ಕುಕ್ ಬುಧವಾರ ಆ್ಯಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಸ್ಟೀವ್ ಜಾಬ್ ಅವರ ಹಳೆಯ ಕಪ್ಪು ಮತ್ತು ಬಿಳುಪಿನ ಫೋಟೋವನ್ನು ಪೋಸ್ಟ್ ಮಾಡಿದ ಕುಕ್, ಸ್ಟೀವ್ ಅವರ 66ನೇ ಜನ್ಮದಿನ ಆಚರಿಸಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಕ್ಯಾನ್ಸರ್ ವಿರುದ್ಧ ಸುದೀರ್ಘ ಹೋರಾಟದ ನಂತರ 2011ರ ಅಕ್ಟೋಬರ್ 5ರಂದು ಜಾಬ್ ನಿಧನರಾದರು.
ಇದನ್ನೂ ಓದು: ಆಸ್ತಿ ಪುನರ್ನಿರ್ಮಾಣ ಕಂಪನಿ ಪ್ರಸ್ತಾವನೆ ಉದ್ಯಮಗಳಿಗೆ ಅಪಾಯಕಾರಿಯಲ್ಲ: ಶಕ್ತಿಕಾಂತ ದಾಸ್
ಸ್ಟೀವ್ ಅವರ 66ನೇ ಜನ್ಮದಿನ ಆಚರಿಸಲಾಗುತ್ತಿದೆ. ವಿಶೇಷವಾಗಿ ನಮ್ಮಿಬ್ಬರನ್ನು ತುಂಬಾ ದೂರವಿಟ್ಟ ಒಂದು ವರ್ಷದಲ್ಲಿ ತಂತ್ರಜ್ಞಾನವು ನಮ್ಮನ್ನು ಅಪಾರ ರೀತಿಯಲ್ಲಿ ಒಂದುಗೂಡಿಸಿತ್ತು. ಇದು ಸ್ಟೀವ್‌ನ ಜೀವನ ಮತ್ತು ಅವನು ಬಿಟ್ಟ ಪರಂಪರೆಗೆ ಸಾಕ್ಷಿಯಾಗಿದೆ. ಅದು ನಿತ್ಯ ನನಗೆ ಸ್ಫೂರ್ತಿ ನೀಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
-
Celebrating Steve on what would have been his 66th birthday. Especially in a year where so much kept us apart, technology brought us together in limitless ways. That’s a testament to Steve’s life and the legacy he left, which continue to inspire me every day. pic.twitter.com/4nluynVjFF
— Tim Cook (@tim_cook) February 24, 2021 " class="align-text-top noRightClick twitterSection" data="
">Celebrating Steve on what would have been his 66th birthday. Especially in a year where so much kept us apart, technology brought us together in limitless ways. That’s a testament to Steve’s life and the legacy he left, which continue to inspire me every day. pic.twitter.com/4nluynVjFF
— Tim Cook (@tim_cook) February 24, 2021Celebrating Steve on what would have been his 66th birthday. Especially in a year where so much kept us apart, technology brought us together in limitless ways. That’s a testament to Steve’s life and the legacy he left, which continue to inspire me every day. pic.twitter.com/4nluynVjFF
— Tim Cook (@tim_cook) February 24, 2021
ಜಾಬ್ ಸಾವಿನ ಕೆಲವು ವಾರಗಳ ನಂತರ ಕುಕ್, ಆ್ಯಪಲ್ ಕಂಪನಿಯ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಟಿಮ್ ಕುಕ್ ಕಳೆದ ವರ್ಷ 65ನೇ ಜನ್ಮ ದಿನಾಚರಣೆಯಂದು ಜಾಬ್ ಬಗ್ಗೆ ಹೀಗೆ ಬರೆದಿದ್ದರು; 'ಓರ್ವನ ಮಹಾನ್ ಆತ್ಮ ಎಂದಿಗೂ ಸಾಯುವುದಿಲ್ಲ. ಅದು ನಮ್ಮನ್ನು ಮತ್ತೆ- ಮತ್ತೆ ಒಗ್ಗೂಡಿಸುತ್ತದೆ. ನೀವು ಮಾಯಾ ಏಂಜೆಲೊ. ನೀವು ಯಾವಾಗಲೂ ನಮ್ಮೊಂದಿಗೆ ಇರುತ್ತೀರಿ ಸ್ಟೀವ್, ನಿಮ್ಮ ಸ್ಮರಣೆ ಪ್ರತಿದಿನ ನಮ್ಮನ್ನು ಸಂದಿಸುತ್ತದೆ ಮತ್ತು ಪ್ರೇರೇಪಿಸುತ್ತದೆ' ಎಂದಿದ್ದರು.