ನವದೆಹಲಿ : ಟಾಟಾ ಕಮ್ಯುನಿಕೇಷನ್ಸ್ ಲಿಮಿಟೆಡ್‌ನಲ್ಲಿ ಕೇಂದ್ರ ಸರ್ಕಾರವು ತನ್ನ ಸಂಪೂರ್ಣ ಪಾಲಾದ ಶೇ.26.12ರಷ್ಟು ಷೇರುಗಳನ್ನು ಮಾರಾಟ ಮಾಡಲಿದೆ.
ಟಾಟಾ ಕಮ್ಯುನಿಕೇಷನ್‌ನಲ್ಲಿ ತನ್ನ ಸಂಪೂರ್ಣ ಪಾಲನ್ನು ಸರ್ಕಾರ ಮಾರಾಟ ಮಾಡಲಿದೆ. ಪ್ರಸ್ತುತ ಕಂಪನಿಯಲ್ಲಿ ಶೇ.26.12ರಷ್ಟು ಪಾಲನ್ನು ಸರ್ಕಾರ ಹೊಂದಿದೆ. ಶೇ. 16.12ರಷ್ಟು ಪಾಲನ್ನು ಆಫರ್ ಫಾರ್ ಸೇಲ್ ಮೂಲಕ ಮಾರಾಟ ಮಾಡಲಾಗುತ್ತದೆ.
ಉಳಿದ ಪಾಲನ್ನು ಟಾಟಾ ಸನ್ಸ್‌ನ ಹೂಡಿಕೆ ವಿಭಾಗವಾದ ಪನಾಟೋನ್ ಫಿನ್‌ವೆಸ್ಟ್‌ಗೆ ಮಾರಾಟವಾಗಲಿದೆ ಎಂದು ನಿಯಂತ್ರಣ ಪೈಲಿಂಗ್ನಲ್ಲಿ ತಿಳಿಸಿದೆ.
ಒದನ್ನೂ ಓದಿ: ಹೊಸ ಫೀಚರ್ ಹೊರತಂದ ಗೂಗಲ್ ಮ್ಯಾಪ್: ಏನದು, ಉಪಯೋಗಿಸುವುದು ಹೇಗೆ?
ಟಾಟಾ ಕಮ್ಯುನಿಕೇಷನ್‌ನಲ್ಲಿ ಪನಾಟೋನ್ ಫಿನ್ವೆಸ್ಟ್ ಪ್ರಸ್ತುತ ಶೇ.34.8ರಷ್ಟು ಪಾಲು ಹೊಂದಿದ್ದರೆ, ಟಾಟಾ ಸನ್ಸ್ ಶೇ.14.1ರಷ್ಟು ಪಾಲಿದೆ. ಭಾರತದ ರಾಷ್ಟ್ರಪತಿ ಪನಾಟೋನ್ ಫಿನ್‌ವೆಸ್ಟ್ ಮತ್ತು ಟಾಟಾ ಸನ್ಸ್ ನಡುವೆ ತಿದ್ದುಪಡಿ ಮಾಡಿದ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಪನಾಟೋನ್ ಈಗಾಗಲೇ ಶೇ.34.8ರಷ್ಟು ಮತ್ತು ಟಾಟಾ ಸನ್ಸ್ ಶೇ.14.07ರಷ್ಟು ಪಾಲು ಹೊಂದಿದೆ. ಸರ್ಕಾರದ ಪಾಲು ಪ್ರಸ್ತುತ 9,601 ಕೋಟಿ ರೂ.ಯಷ್ಟಿದೆ.