ನವದೆಹಲಿ: ಪಿಎಂ-ಕೇರ್ಸ್ ಫಂಡ್‌ಗೆ ದೇಣಿಗೆ ಸಂಗ್ರಹಿಸಲು ಸರ್ಕಾರಿ ಸ್ವಾಮ್ಯದ ಇಂಡಿಯನ್ ಒವರ್‌ಸೀಸ್ ಬ್ಯಾಂಕ್ (ಐಒಬಿ) ಅನ್ನು ನಾಮನಿರ್ದೇಶನ ಮಾಡಿದೆ ಎಂದು ಐಒಬಿ ಹೇಳಿದೆ.
ಪ್ರಧಾನ ಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ ನಿಧಿ (ಪಿಎಂ-ಕೇರ್ಸ್ ಫಂಡ್), ಮಾರ್ಚ್ 28ರಂದು ಸ್ಥಾಪಿಸಿತು. ಕೋವಿಡ್- 19 ಬಿಕ್ಕಟ್ಟನ್ನು ಎದುರಿಸಲು ಮತ್ತು ಸಂತ್ರಸ್ತರಿಗೆ ಪರಿಹಾರವನ್ನು ಒದಗಿಸಲು ಈ ಹಣವನ್ನು ವಿನಿಯೋಗಿಸಲಾಗುತ್ತದೆ.
ಇಂಡಿಯನ್ ಒವರ್‌ಸೀಸ್ ಬ್ಯಾಂಕ್ (ಐಒಬಿ) ಅನ್ನು ಸರ್ಕಾರವು ಹಣ ಸಂಗ್ರಹಕ್ಕಾಗಿ ನಾಮನಿರ್ದೇಶನ ಮಾಡಿದೆ. ಇದನ್ನು ಕೊರೊನಾ ವೈರಸ್ ಹಬ್ಬುವಿಕೆ ಸಮಯದಲ್ಲಿ ಸಮುದಾಯಕ್ಕೆ ಬೆಂಬಲ ನೀಡಲು ಬಳಸಲಾಗುತ್ತದೆ. ಈ ಹಣವನ್ನು ಪಿಎಂ-ಕೇರ್ಸ್ ಫಂಡ್‌ಗೆ ವರ್ಗಾಯಿಸಲಾಗುವುದು ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
ಆರ್‌ಟಿಜಿಎಸ್, ಎನ್‌ಇಎಫ್‌ಟಿ, ಐಎಂಪಿಎಸ್, ಚೆಕ್ ಮತ್ತು ಪಿಎಂ-ಕೇರ್ಸ್ ಫಂಡ್ ಪರವಾಗಿ ಪಡೆದ ಬೇಡಿಕೆ ಕರಡುಗಳಿಂದ ದೇಣಿಗೆ ನೀಡಬಹುದು.
ಇಂಡಿಯನ್ ಓವರ್‌ಸೀಸ್ ಬ್ಯಾಂಕಿನ ಗೊತ್ತುಪಡಿಸಿದ ಉಳಿತಾಯ ಬ್ಯಾಂಕ್ ಖಾತೆಗೆ ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಮ್ (ಇಸಿಎಸ್) ಮೂಲಕ ನೇರವಾಗಿ ಕೊಡುಗೆಗಳನ್ನು ರವಾನಿಸಬಹುದು. ಎಲ್ಲ ದೇಣಿಗೆಗಳಿಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಜಿ ಅಡಿಯಲ್ಲಿ ಶೇ 100ರಷ್ಟು ಆದಾಯ ತೆರಿಗೆ ವಿನಾಯಿತಿ ಸಿಗುತ್ತದೆ.
ರಾಜಕೀಯ ಮುಖಂಡರು, ಕಾರ್ಪೊರೇಟ್, ರಕ್ಷಣಾ ಸಿಬ್ಬಂದಿ, ಪಿಎಸ್ಯು ನೌಕರರಾದ ರೈಲ್ವೆ ಸಿಬ್ಬದಿ, ಬಾಲಿವುಡ್ ನಟರು, ಕ್ರೀಡಾಪಟುಗಳು, ಸಂಘ- ಸಂಸ್ಥೆಗಳು ಪಿಎಂ-ಕೇರ್ಸ್ ಫಂಡ್‌ಗೆ ತಮ್ಮ ಕೊಡುಗೆ ಘೋಷಿಸಿವೆ.