ಮುಂಬೈ: ದೇಶದ 5,500 ರೈಲ್ವೆ ನಿಲ್ದಾಣಗಳಲ್ಲಿರುವ ಸಾರ್ವಜನಿಕ ವೈಫೈ ಹಾಟ್‌ಸ್ಪಾಟ್‌ಗಳ ಸಂಪರ್ಕ ಸೌಲಭ್ಯವನ್ನು ನಿಲ್ದಾಣಗಳ ಸಮೀಪ ವಾಸಿಸುವ ಜನರೂ ಸಹ ಬಳಸಿಕೊಳ್ಳಲು ಅವಕಾಶ ನೀಡುಲಾಗುತ್ತದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದರು.
ನಾಸ್ಕಾಮ್ನ ವಾರ್ಷಿಕ ಟೆಕ್ನಾಲಜಿ ಆ್ಯಂಡ್ ಲೀಡರ್ಶಿಫ್ ಫೋರಮ್ (ಎನ್‌ಟಿಎಲ್‌ಎಫ್) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈಲ್ವೆ ನಿಲ್ದಾಣಗಳ ಹತ್ತಿರ ಬರುವ ಮಹಿಳೆಯರು, ರೈತರು ಮತ್ತು ವಿದ್ಯಾರ್ಥಿಗಳು ಇಂಟರ್ನೆಟ್ ಸೇವೆಯನ್ನು ಪಡೆದುಕೊಳ್ಳಬಹುದು. ಈ ಆಧುನಿಕ ಸಂವಹನ ತಂತ್ರಜ್ಞಾನದ ಬಳಕೆಯ ಮೂಲಕ ತಮ್ಮ ಜೀವನವನ್ನು ಉತ್ತಮಗೊಳಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಆನ್‌ಲೈನ್ ಜಾಹೀರಾತು ದೈತ್ಯ ಗೂಗಲ್‌ನ ಸಹಾಯದಿಂದ ಸಚಿವಾಲಯವು ಆರಂಭದಲ್ಲಿ 410 ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಆರಂಭಿಸಿತ್ತು. ನಂತರ ಕೆಲವು ನಿಲ್ದಾಣಗಳಿಗೆ ಸ್ವಂತ ಹಣದಿಂದ ವಿಸ್ತರಿಸಲಾಗಿದೆ ಎಂದು ಗೋಯಲ್ ಹೇಳಿದರು.
ಯೋಜನೆಗೆ ಹಣವನ್ನು ವ್ಯವಸ್ಥೆ ಮಾಡುವುದು ಒಂದು ಕಾರ್ಯವಾಗಿತ್ತು. ಇದಕ್ಕಾಗಿ ನಿಲ್ದಾಣಗಳಲ್ಲಿ ವೈಫೈ ಸ್ಥಾಪಿಸಲು ಸಹಾಯ ಮಾಡುವಂತೆ ಕಾರ್ಪೊರೇಟ್‌ಗಳಿಗೆ ವಿನಂತಿಸಿಕೊಂಡು ಸಾರ್ವಜನಿಕ ಸಂದೇಶವನ್ನು ಹೊರಡಿಸಿದ್ದೆವು. ಟಾಟಾ ಟ್ರಸ್ಟ್‌ಗಳು ಈ ಪ್ರಸ್ತಾವನೆಗೆ ಒಪ್ಪಿ ಮುಂದೆ ಬಂದಿವೆ. ಇಂತಹ ಸೇವೆ ಮಾಡಲು ಮುಂದೆ ಬಂದ ಅವರಿಗೆ ಧನ್ಯವಾದಗಳು ಎಂದರು.