ETV Bharat / business

ಉನ್ನತ ಬಳಕೆದಾರರ ಖಾತೆಗಳಿಗೆ ಕನ್ನ​​: ಟ್ವಿಟರ್​ಗೆ ನೋಟಿಸ್ ನೀಡಿದ ಕೇಂದ್ರ ಸರ್ಕಾರ

ಘಟನೆಯ ವಿವರಗಳು ಮತ್ತು ಆ ಬಳಕೆದಾರರ ಡೇಟಾದ ಮೇಲೆ ಪರಿಣಾಮ ಬೀರುವ ಜೊತೆಗೆ ಭಾರತೀಯ ಬಳಕೆದಾರರ ಸಂಖ್ಯೆ ಸೇರಿದಂತೆ ಅನೇಕ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಸಿಇಆರ್​ಟಿ-ಇನ್ ಟ್ವಿಟರ್​ಗೆ ಕೇಳಿದೆ ಎಂದು ಮೂಲಗಳು ತಿಳಿಸಿವೆ. ಜಾಗತಿಕ ಹ್ಯಾಕ್ ನಿಂದಾಗಿ ಅಪಾರ ಸಂಖ್ಯೆಯ ಭಾರತೀಯ ಬಳಕೆದಾರರು ಹಾಗೂ ಅವರ ಡಾಟಾ ಮೇಲೆ ಪರಿಣಾಮ ಬೀರಿದೆ ಎಂಬುದು ತಿಳಿದುಬಂದಿದೆ.

Twitter
ಟ್ವಿಟ್ಟರ್​
author img

By

Published : Jul 18, 2020, 9:17 PM IST

ನವದೆಹಲಿ: ಭಾರತದ ಸೈಬರ್‌ ಸೆಕ್ಯುರಿಟಿ ನೋಡಲ್ ಏಜೆನ್ಸಿ ಸಿಇಆರ್‌ಟಿ-ಇನ್, ಉನ್ನತ ಮಟ್ಟದ ಬಳಕೆದಾರರನ್ನು ಗುರಿಯಾಗಿಸಿಕೊಂಡು ಇತ್ತೀಚೆಗೆ ನಡೆದ ಜಾಗತಿಕ ಹ್ಯಾಕಿಂಗ್​ ಸಂಪೂರ್ಣ ಮಾಹಿತಿ ನೀಡುವಂತೆ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್​ಗೆ ನೋಟಿಸ್ ನೀಡಿದೆ.

ದುರುದ್ದೇಶಪೂರಿತ ಟ್ವೀಟ್‌ಗಳು ಮತ್ತು ಲಿಂಕ್‌ಗಳಿಗೆ ಭೇಟಿ ನೀಡಿದ ಭಾರತದ ಬಳಕೆದಾರರ ಡಾಟಾ ಮೇಲೆ ಪರಿಣಾಮ ಬೀರಿದ್ದು, ಅದರ ಸಂಪೂರ್ಣ ಮಾಹಿತಿ ನೀಡುವಂತೆ ನೋಟಿಸ್​ನಲ್ಲಿ ಕೇಳಲಾಗಿದೆ ಎಂದು ಬಲ್ಲ ಮೂಲಗಳು ಪಿಟಿಐಗೆ ತಿಳಿಸಿದೆ. ಪಿಟಿಐನ ಇಮೇಲ್ ಪ್ರಶ್ನೆಗೆ ಟ್ವಿಟರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ದಾಳಿಕೋರರು ಬಳಸಿಕೊಳ್ಳುವ ದುರ್ಬಲತೆ ಮತ್ತು ದಾಳಿಯ ಮೋಡಸ್ ಒಪೆರಾಂಡಿ ಬಗ್ಗೆಯೂ ಸರ್ಕಾರ ಒತ್ತಾಯಿಸಿದೆ. ಹ್ಯಾಕಿಂಗ್ ಘಟನೆಯ ಪರಿಣಾಮವನ್ನು ತಗ್ಗಿಸಲು ಟ್ವಿಟರ್​ ತೆಗೆದುಕೊಂಡ ಪರಿಹಾರ ಕ್ರಮಗಳ ವಿವರಗಳನ್ನು ಕೋರಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.