ನವದೆಹಲಿ: ಸರ್ಕಾರಿ ಸ್ವಾಮ್ಯದ ರಕ್ಷಣಾ ಮತ್ತು ಎಂಜಿನಿಯರಿಂಗ್ ಕಂಪನಿ ಬೆಮೆಲ್ನಲ್ಲಿನ ಶೇ. 26ರಷ್ಟು ಪಾಲನ್ನು ಪಡೆಯಲು ಸರ್ಕಾರವು ಆರಂಭಿಕ ಬಿಡ್‌ಗಳನ್ನು ಆಹ್ವಾನಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರಿ ಸಂಸ್ಥೆಗಳ ಖಾಸಗೀಕರಣಗೊಳಿಸುವ ಯೋಜನೆಗಳ ಭಾಗವಾಗಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಏರ್ ಇಂಡಿಯಾ ಕೂಡಿ ಸೇರಿವೆ.
ಇದನ್ನೂ ಓದಿ: ಕೋವಿಡ್ ಎಫೆಕ್ಟ್: ಜಿಗಿದ ಪರೋಕ್ಷ ತೆರಿಗೆ, ಪಾತಾಳ ಕಂಡ ನೇರ ತೆರಿಗೆ!
ಬೆಮೆಲ್ನಲ್ಲಿ ಸರ್ಕಾರವು ಕೇವಲ 54 ಪ್ರತಿಶತ ಪಾಲನ್ನು ಮಾತ್ರವೇ ಹೊಂದಿದೆ. ಈ ಪಾಲು ಮಾರಾಟದ ಮೂಲಕ ಸರ್ಕಾರ ತನ್ನ ಹಿಡುವಳಿ ಕಡಿತ ನಿರ್ವಹಣಾ ನಿಯಂತ್ರಣವನ್ನು ಬಿಡ್ದಾರರಿಗೆ ವರ್ಗಾಯಿಸಲು ನಿರ್ಧರಿಸಿದೆ.
ಮಾರಾಟವು ಮುಕ್ತ ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ನಡೆಯಲಿದ್ದು, ಆಸಕ್ತ ಬಿಡ್ದಾರರು ಮಾರ್ಚ್ 1ರೊಳಗೆ ಆಸಕ್ತಿಯ ಅಭಿವ್ಯಕ್ತಿ ಸಲ್ಲಿಸಬಹುದು. ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ಅನ್ನು ಬೆಮೆಲ್ನಲ್ಲಿ ಉದ್ದೇಶಿತ ವಿತರಣೆಗಾಗಿ ತನ್ನ ವ್ಯವಹಾರ ಸಲಹೆಗಾರರಾಗಿ ಸರ್ಕಾರ ನೇಮಿಸಿದೆ.