ETV Bharat / business

ವರ್ಕ್​ ಫ್ರಮ್​ ಹೋಮ್ ವರದಾನ: ಗೂಗಲ್​ಗೆ ಜೇಬಿಗೆ ಬಿಲಿಯನ್​ ಡಾಲರ್​ ಉಳಿತಾಯ!

author img

By

Published : Apr 30, 2021, 10:26 PM IST

ವರ್ಕ್​ ಫ್ರಮ್​ ಹೋಮ್ ಪ್ರಯಾಣದ ಸಮಯ ಕಡಿತಗೊಳಿಸಿದೆ. ಹಣದ ಉಳಿತಾಯಕ್ಕೆ ಕಾರಣವಾಗಿದೆ. ಉದ್ಯೋಗಿಯು ತನ್ನ ಕುಟುಂಬದ ಜತೆಗೆ ಹೆಚ್ಚಿನ ಸಮಯ ಮೀಸಲಿಟ್ಟಿದ್ದಾನೆ. ಮನೆಗಳನ್ನು ಉತ್ತಮವಾಗಿ ನಿರ್ವಹಿಸಲು ಮತ್ತೊಬ್ಬರಿಗೆ ಅವಕಾಶ ಮಾಡಿಕೊಟ್ಟಿದೆ. ಉದ್ಯೋಗಿಗಳನ್ನು ಮಾತ್ರವಲ್ಲ, ಗೂಗಲ್ ಕೂಡ ವರ್ಕ್​ ಫ್ರಮ್​ ಹೋಮ್​ನಿಂದ ಲಾಭ ಪಡೆದಿದೆ. ಸಾಂಕ್ರಾಮಿಕ ರೋಗದ ಮಧ್ಯೆ ನೌಕರರು ಮನೆಯಿಂದ ಕೆಲಸ ಮಾಡುತ್ತಿದ್ದರಿಂದ ಕಂಪನಿಯು ಸುಮಾರು 1 ಬಿಲಿಯನ್ ಡಾಲರ್​ ಉಳಿತಾಯ ಮಾಡಿತು.

Google
Google

ಸ್ಯಾನ್​ಫ್ರಾನ್ಸಿಸ್ಕೋ: ಕೋವಿಡ್​ ಸಾಂಕ್ರಾಮಿಕ ವೇಳೆ ವರ್ಕ್​​ ಫ್ರಮ್​ ಹೋಮ್​ ಬಹಳಷ್ಟು ಉದ್ಯೋಗಿಗಳಿಗೆ ಹಾಗೂ ಸಂಸ್ಥೆಗಳಿಗೆ ವರದಾನವಾಗಿದೆ ಎಂಬುದು ಸಾಬೀತಾಗಿದೆ.

ಇದು ಪ್ರಯಾಣದ ಸಮಯ ಕಡಿತಗೊಳಿಸಿದೆ. ಹಣದ ಉಳಿತಾಯಕ್ಕೆ ಕಾರಣವಾಗಿದೆ. ಉದ್ಯೋಗಿಯು ತನ್ನ ಕುಟುಂಬದ ಜತೆಗೆ ಹೆಚ್ಚಿನ ಸಮಯ ಮೀಸಲಿಟ್ಟಿದ್ದಾನೆ. ಮನೆಗಳನ್ನು ಉತ್ತಮವಾಗಿ ನಿರ್ವಹಿಸಲು ಮತ್ತೊಬ್ಬರಿಗೆ ಅವಕಾಶ ಮಾಡಿಕೊಟ್ಟಿದೆ. ಉದ್ಯೋಗಿಗಳನ್ನು ಮಾತ್ರವಲ್ಲ, ಗೂಗಲ್ ಕೂಡ ವರ್ಕ್​ ಫ್ರಮ್​ ಹೋಮ್​ನಿಂದ ಲಾಭ ಪಡೆದಿದೆ. ಸಾಂಕ್ರಾಮಿಕ ರೋಗದ ಮಧ್ಯೆ ನೌಕರರು ಮನೆಯಿಂದ ಕೆಲಸ ಮಾಡುತ್ತಿದ್ದರಿಂದ ಕಂಪನಿಯು ಸುಮಾರು 1 ಬಿಲಿಯನ್ ಡಾಲರ್​ ಉಳಿತಾಯ ಮಾಡಿತು.

ಮೊದಲ ತ್ರೈಮಾಸಿಕದಲ್ಲಿ ಗೂಗಲ್ ಪೇರೆಂಟ್ ಆಲ್ಫಾಬೆಟ್ ಇಂಕ್ ಕಂಪನಿಯ ಫೈಲಿಂಗ್‌ನಲ್ಲಿ ಉಲ್ಲೇಖಿಸಿರುವಂತೆ ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಕಂಪನಿಯ ಪ್ರಚಾರ, ಪ್ರಯಾಣ ಮತ್ತು ಮನರಂಜನೆಯಿಂದ 268 ಮಿಲಿಯನ್ ಡಾಲರ್​ನ ವೆಚ್ಚ ಉಳಿಸಿಕೊಂಡಿದೆ. ವಾರ್ಷಿಕ ಆಧಾರದ ಮೇಲೆ ಅದು 1 ಬಿಲಿಯನ್ ಡಾಲರ್​ ಮೀರುತ್ತದೆ.

ಬ್ಲೂಮ್‌ಬರ್ಗ್‌ ವರದಿಯ ಪ್ರಕಾರ, ಆಲ್ಫಾಬೆಟ್ ತನ್ನ ಜಾಹೀರಾತು ಮತ್ತು ಪ್ರಚಾರದ ವೆಚ್ಚಗಳು 2020ರಲ್ಲಿ 1.4 ಬಿಲಿಯನ್ ಡಾಲರ್​ ಇಳಿಕೆಯಾಗಿದೆ. ಏಕೆಂದರೇ ಖರ್ಚು ಕಡಿಮೆಯಾಗಿದ್ದು, ಡಿಜಿಟಲ್ ಓನ್ಲಿ ಈವೆಂಟ್ ಫಾರ್ಮೆಟ್​ ಮೊರೆ ಹೋಗಲಾಗಿದೆ. ಪ್ರಯಾಣ ಮತ್ತು ಮನರಂಜನಾ ವೆಚ್ಚವು 371 ಮಿಲಿಯನ್ ಡಾಲರ್​ ತಗ್ಗಿದೆ.

'ಸಾವಿರಾರು' ಸಂಖ್ಯೆಯಲ್ಲಿರುವ ಹೊಸ ಪ್ರತಿಭಾನ್ವಿತರನ್ನು ನೇಮಿಸಿಕೊಳ್ಳಲು ಆಗಲಿರುವ ವೆಚ್ಚವನ್ನು ಸರಿದೂಗಿಸಲು ಗೂಗಲ್ ಉಳಿತಾಯ ಬಳಸಿದೆ. ಸಾಂಕ್ರಾಮಿಕ ರೋಗದಿಂದಾಗಿ ಕಂಪನಿಯಲ್ಲಿನ ಮಾರ್ಕೆಟಿಂಗ್ ಮತ್ತು ಆಡಳಿತಾತ್ಮಕ ವೆಚ್ಚಗಳು ಸಮತಟ್ಟಾಗಿವೆ ಎಂದು ವರದಿ ಹೇಳುತ್ತದೆ.

ಇತರ ಹಲವು ಟೆಕ್ ಕಂಪನಿಗಳಿಗಿಂತ ಭಿನ್ನವಾಗಿ ಗೂಗಲ್ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಹೆಚ್ಚಿನ ಸ್ಥಳಗಳಲ್ಲಿ ತನ್ನ ಕಚೇರಿಗಳನ್ನು ತೆರೆಯುವುದಾಗಿ ಹೇಳಿದೆ.

ಇದು ಕೋವಿಡ್​-19 ಪರಿಸ್ಥಿತಿ ಅವಲಂಬಿಸಿರುತ್ತದೆ. ಆದರೆ ದೇಶಗಳು ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳುವುದರಿಂದ ಇದು ಸಂಭವಿಸುವ ಸಾಧ್ಯತೆಯಿದೆ. 'ಹೈಬ್ರಿಡ್' ಮಾದರಿಗೆ ಹೋಗುವುದಾಗಿ ಗೂಗಲ್ ಹೇಳಿದೆ. ಗೂಗಲ್ ಜಗತ್ತಿನಾದ್ಯಂತ ರಿಯಲ್ ಎಸ್ಟೇಟ್​ನಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಲಿದೆ ಎಂದು ಪೊರಾಟ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.