ಸ್ಯಾನ್ ಫ್ರಾನ್ಸಿಸ್ಕೊ: ಜಾಗತಿಕ ಟೆಕ್ ದೈತ್ಯ ಆಲ್ಫಾಬೆಟ್ ಮತ್ತು ಗೂಗಲ್ ಸಿಇಒ, ಭಾರತೀಯ ಸುಂದರ್ ಪಿಚೈ ಅವರು ಜಾಗತಿಕ ಕೋವಿಡ್-19 ನಿರ್ಮೂಲನೆಯಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡಿರುವ ಸಣ್ಣ ಮತ್ತು ಮಧ್ಯಮ ವ್ಯವಹಾರ (ಎಸ್ಎಂಬಿ), ಆರೋಗ್ಯ ಸಂಸ್ಥೆ, ಸರ್ಕಾರ ಮತ್ತು ಆರೋಗ್ಯ ಕಾರ್ಯಕರ್ತರರಿಗೆ ಬೆಂಬಲಿಸಿ ಕಂಪನಿಯು 800 ಮಿಲಿಯನ್ ಡಾಲರ್ ನೀಡುವುದಾಗಿ ಘೋಷಿಸಿದ್ದಾರೆ.
-
We’re committing $800M+ in new #COVID19 response efforts, incl $340M in @GoogleAds credits for SMBs worldwide, $250M in ad grants for @WHO & 100+ govt orgs globally, a $200M investment fund for NGOs & banks to help small businesses access capital, and more https://t.co/oVj6MMs9Bl
— Sundar Pichai (@sundarpichai) March 27, 2020 " class="align-text-top noRightClick twitterSection" data="
">We’re committing $800M+ in new #COVID19 response efforts, incl $340M in @GoogleAds credits for SMBs worldwide, $250M in ad grants for @WHO & 100+ govt orgs globally, a $200M investment fund for NGOs & banks to help small businesses access capital, and more https://t.co/oVj6MMs9Bl
— Sundar Pichai (@sundarpichai) March 27, 2020We’re committing $800M+ in new #COVID19 response efforts, incl $340M in @GoogleAds credits for SMBs worldwide, $250M in ad grants for @WHO & 100+ govt orgs globally, a $200M investment fund for NGOs & banks to help small businesses access capital, and more https://t.co/oVj6MMs9Bl
— Sundar Pichai (@sundarpichai) March 27, 2020
ವಿಶ್ವ ಆರೋಗ್ಯ ಸಂಸ್ಥೆಗೆ (ಡಬ್ಲ್ಯುಎಚ್‌ಒ) ನೆರವಿಗೆ 250 ಮಿಲಿಯನ್ ಡಾಲರ್ ಜಾಹೀರಾತಿನ ಅನುದಾನ ಒಳಗೊಂಡಿರುತ್ತದೆ. ಜಾಗತಿಕವಾಗಿ 100ಕ್ಕೂ ಹೆಚ್ಚು ಸರ್ಕಾರಿ ಸಂಸ್ಥೆಗಳು ಕೋವಿಡ್-19 ಹರಡುವುದನ್ನು ತಡೆಯುವ ಬಗೆಗಿನ ಮಾಹಿತಿಗಳು ಒಳಗೊಂಡಿರಲಿದೆ.
ಕಳೆದ ತಿಂಗಳು 25 ಮಿಲಿಯನ್ ಡಾಲರ್ ನೀಡುವುದಾಗಿ ಘೋಷಿಸಿಲಾಗಿತ್ತು. ಈಗ ಅದರ ಏರಿಕೆ ಮಾಡಿದ್ದಾರೆ. ಎಸ್‌ಎಂಬಿಗಳಿಗೆ ಪರಿಹಾರ ನಿಧಿ, ಸಂಪನ್ಮೂಲಗಳ ಕುರಿತು ಸಾರ್ವಜನಿಕ ಸೇವಾ ಪ್ರಕಟಣೆಗಳನ್ನು ಒದಗಿಸುವ ಸಮುದಾಯ ಹಣಕಾಸು ಸಂಸ್ಥೆಗಳು ಮತ್ತು ಎನ್‌ಜಿಒಗಳಿಗೆ 20 ಮಿಲಿಯನ್ ಜಾಹೀರಾತು ಅನುದಾನವನ್ನು ನೀಡುತ್ತಿದ್ದೇವೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಖ್ಯವಾಹಿನಿಯ ಹಣಕಾಸು ಸಂಸ್ಥೆಗಳಿಂದ ಕಡಿಮೆ ಕೆಳ ವರ್ಗದವರ ಮತ್ತು ಸಮುದಾಯಗಳಿಗೆ ಹಣಕಾಸಿನ ಅವಶ್ಯಕತೆ ಪೂರೈಸಲು ಅಮೆರಿಕಲ್ಲಿರುವ ಆಪರ್ಚುನಿಟಿ ಫೈನಾನ್ಸ್ ನೆಟ್‌ವರ್ಕ್‌ನೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಪಿಚೈ ಹೇಳಿದ್ದಾರೆ.