ETV Bharat / business

ಇನ್ಫೋಸಿಸ್​ನ 17 GSTN ವಿನ್ಯಾಸದ ಬಗ್ಗೆ ವಿತ್ತ ಸಚಿವಾಲಯ ಅಸಮಾಧಾನ... ನಂದನ್ ನಿಲೇಕಣಿಗೆ ಬುಲಾವ್​

author img

By

Published : Mar 11, 2020, 8:42 PM IST

ಬೆಂಗಳೂರು ಮೂಲದ ಸಾಫ್ಟ್​ವೇರ್ ಕಂಪನಿಗೆ ಹಣಕಾಸು ಸಚಿವಾಲಯ ಸೂಚಿಸಿರುವ 17 ವಿನ್ಯಾಸಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಯೋಜನೆ ರೂಪಿಸಿ ಇತ್ಯರ್ಥಪಡಿಸುವಂತೆ ಕೋರಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Infosys
ಇನ್ಫೋಸಿಸ್

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ತೆರಿಗೆ ಪಾವತಿದಾರರಿಗೆ ಪರಿವರ್ತನೆ ಸಮಸ್ಯೆ, ಆಧಾರ್ ಪರಿಶೀಲನೆ, ಸರ್ವರ್‌ನ ಪ್ರಮಾಣ ವೃದ್ಧಿ ಸಾಮರ್ಥ್ಯದ (ಸ್ಕೇಲೆಬಿಲಿಟಿ) ಕೊರತೆ ಸೇರಿದಂತೆ ಇನ್ಫೋಸಿಸ್ ವಿನ್ಯಾಸಗೊಳಿಸಿದ ಜಿಎಸ್‌ಟಿ ನೆಟ್‌ವರ್ಕ್​ನ 17 ಅಂಶಗಳ ಬಗ್ಗೆ ಹಣಕಾಸು ಸಚಿವಾಲಯವು ಅಸಮಾಧಾನ ವ್ಯಕ್ತಪಡಿಸಿದೆ.

ಸಚಿವಾಲಯವು ಗುರುತಿಸಿದ ಇತರ ಅಂಶಗಳಲ್ಲಿ ಬಗೆಹರಿಸಲಾಗದ ಅಥವಾ ತಡವಾಗಿ ಇತ್ಯರ್ಥಿಪಡಿಸುವ ಜೊತೆಗೆ ಜಿಎಸ್​ಟಿಆರ್ -3ಬಿ ಫೈಲ್ ಮಾಡದವರ ಪ್ರಕರಣಗಳಲ್ಲಿ ಇ-ವೇ ಬಿಲ್ ಸಮ್ಮತಿ ನಿರ್ಬಂಧಿಸಲು ಸಾಫ್ಟ್‌ವೇರ್ ಒದಗಿಸುವಲ್ಲಿ ವಿಳಂಬ ಸಹ ಒಳಗೊಂಡಿದೆ ಎನ್ನಲಾಗ್ತಿದೆ.

ಇದಲ್ಲದೆ ಭಾರತದ ಹೊರಗಿನ ಮಾರಾಟದ ಸ್ಥಳಕ್ಕಾಗಿ ಹೊಸ ಪೂರೈಕೆ ಕೋಡ್ ಅಥವಾ ನೋಂದಣಿ ಅರ್ಜಿಯನ್ನು ನಿಯೋಜನೆಗೆ ಅನುವು ಮಾಡಿಕೊಡುವ ವೈಶಿಷ್ಟ್ಯ ನಿಯೋಜನೆಯ ಬಗೆಯೂ ಸಚಿವಾಲಯ ಗುರುತಿಸಿದೆ.

ಜಿಎಸ್​ಟಿ ನೆಟ್​ವರ್ಕ್ (ಜಿಎಸ್​ಟಿಎನ್), ಬ್ಯಾಕೆಂಡ್ ನಿರ್ವಹಿಸುವ ಒಪ್ಪಂದವನ್ನು 2015ರಲ್ಲಿ ಇನ್ಫೋಸಿಸ್ ವಹಿಸಿಕೊಂಡಿತ್ತು. ತಂತ್ರಜ್ಞಾನ ತೊಡಕುಗಳನ್ನು ಪತ್ತೆಹಚ್ಚಿ ಸಚಿವಾಲಯದ ಗಮನವನ್ನು ಸಹ ಸೆಳೆದಿತ್ತು. ಆದರೆ, ಅವುಗಳಲ್ಲಿ ಕೆಲವನ್ನು ಎರಡು ವರ್ಷಗಳಿಂದ ಇನ್ನೂ ಇತ್ಯರ್ಥಪಡಿಸಿಲ್ಲ.

ಈ ಬಗ್ಗೆ ಹಣಕಾಸು ಸಚಿವಾಲಯ ಇನ್ಫೋಸಿಸ್‌ಗೆ ಕಳುಹಿಸಿದ ಇಮೇಲ್​ಗೆ ಯಾವುದೇ ಪ್ರತಿಕ್ರಿಯೆಯನ್ನು ಕಂಪನಿ ನೀಡಿಲ್ಲ ಎನ್ನಲಾಗ್ತಿದೆ. ಹಣಕಾಸು ಸಚಿವಾಲಯದಲ್ಲಿ ಮಾರ್ಚ್ 14ರಂದು ಜಿಎಸ್‌ಟಿ ಮಂಡಳಿ ಸಭೆ ನಡೆಯಲಿದೆ. ಸಭೆಯ ಬಳಿಕ ಬಾಕಿ ಇರುವ ಸಮಸ್ಯೆಗಳನ್ನು ಬಗೆಹರಿಸಲು ಉನ್ನತ ಮಟ್ಟದ ಸಭೆಯ ಮುಂದೆ ಪ್ರಸ್ತುತಿ ನೀಡುವಂತೆ ಇನ್‌ಫೋಸಿಸ್ ಅಧ್ಯಕ್ಷ ನಂದನ್ ನಿಲೇಕಣಿ ಅವರನ್ನು ಸರ್ಕಾರ ಆಹ್ವಾನಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.