ನವದೆಹಲಿ: ಲೆನೊವೊ ಒಡೆತನದ ಸ್ಮಾರ್ಟ್ಫೋನ್ ಬ್ರಾಂಡ್ ಮೊಟೊರೋಲಾ ಕ್ವಾಡ್ ಕ್ಯಾಮೆರಾ ಫೀಚರ್ನ ಹೊಸ ಮಿಡ್ ರೇಂಜ್ ಸ್ಮಾರ್ಟ್ಫೋನ್ 'ಮೊಟೊರೊಲಾ ಒನ್ ಫ್ಯೂಷನ್+' ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ಭಾರತದಲ್ಲಿ 16,999 ರೂ. ಮುಖಬೆಲೆಗೆ 5000 ಎಂಎಹೆಚ್ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಟ್ವಿಲೈಟ್ ನೀಲಿ ಮತ್ತು ಮೂನ್ಲೈಟ್ ಬಿಳಿ ಬಣ್ಣದಲ್ಲಿ ಲಭ್ಯವಿದೆ.
ಇದು ಜೂನ್ 24ರಂದು ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್ಕಾರ್ಟ್ ಮೂಲಕ ಮಾರಾಟವಾಗಲಿದೆ. ಕ್ವಾಡ್ ಕ್ಯಾಮೆರಾ ಸೆಟಪ್, 64 ಎಂಪಿ ಪ್ರೈಮರಿ ಸೆನ್ಸರ್ ಜೊತೆಗೆ 8 ಎಂಪಿ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್, 5 ಎಂಪಿ ಮ್ಯಾಕ್ರೋ ಲೆನ್ಸ್ ಮತ್ತು 2 ಎಂಪಿ ಡೆಪ್ತ್ ಸೆನ್ಸರ್ ಒಳಗೊಂಡಿದೆ.
ಸಂಪರ್ಕ ಆಯ್ಕೆಗಳಲ್ಲಿ ಬ್ಲೂಟೂತ್ ವಿ 5, ವೈ-ಫೈ 802.11 ಎಸಿ, ಜಿಪಿಎಸ್, 3.5 ಎಂಎಂ ಆಡಿಯೋ ಜ್ಯಾಕ್, ಯುಎಸ್ಬಿ ಟೈಪ್-ಸಿ ಪೋರ್ಟ್ ಮತ್ತು ಡ್ಯುಯಲ್ 4 ಜಿ ವೋಲ್ಟ್ (4G VoLTE) ನಂತಹ ಪೀಚರ್ ಹೊಂದಿದೆ.