ನವದೆಹಲಿ : ಭದ್ರತಾ ನಿಯಮ ಉಲ್ಲಂಘಿಸಿದ ಆಪಾದನೆಯಡಿ ನಿಷೇಧಕ್ಕೆ ಒಳಗಾಗಿರುವ ಚೀನಾ ಮೂಲದ ಜನಪ್ರಿಯ ವಿಡಿಯೋ ಗೇಮಿಂಗ್ ಆ್ಯಪ್ ಪಬ್ಜಿಗೆ ಸೆಡ್ಡು ಹೊಡೆಯಲು ಬಾಲಿವುಡ್ ನಟ ಅಕ್ಷಯ್ ಕುಮಾರ್ ಘೋಷಿಸಿದ್ದ ಮಲ್ಟಿ ಪ್ಲೇಯರ್ ಆ್ಯಕ್ಷನ್-ಗೇಮ್ FAU-G (ಫೌಜಿ) ಗಣರಾಜ್ಯೋತ್ಸವದ ದಿನದಂದು ಬಿಡುಗಡೆಯಾಗಿದೆ.
ಬಹುನಿರೀಕ್ಷಿತ ಆ್ಯಕ್ಷನ್ ಗೇಮ್ 'ಫಿಯರ್‌ಲೆಸ್ ಮತ್ತು ಯುನೈಟೆಡ್ ಗಾರ್ಡ್ಸ್' ಅಥವಾ ಫೌಜಿಯನ್ನು ಭಾರತದ 72ನೇ ಗಣರಾಜ್ಯೋತ್ಸವದಂದು ಪ್ಲೇಸ್ಟೋರ್ ಮತ್ತು ಆ್ಯಪಲ್ ಸ್ಟೋರ್ನಲ್ಲಿ ಲಭ್ಯವಾಗುತ್ತಿದೆ. ಎನ್‌ಕೋರ್ ಗೇಮ್ಸ್ ಅಭಿವೃದ್ಧಿಪಡಿಸಿದ ಆನ್‌ಲೈನ್ ಮಲ್ಟಿಪ್ಲೇಯರ್ ಗೇಮಿಂಗ್, ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಸೈನಿಕನ ಜೀವನ ಚಿತ್ರ ಆಧರಿಸಿದೆ.
ಇದನ್ನೂ ಓದಿ: ಭಾರತದ ಪರಮಾಪ್ತ ಗೆಳೆಯ ರಷ್ಯಾ ಕೊಟ್ಟಿತ್ತು 72ನೇ ಗಣರಾಜ್ಯೋತ್ಸವದ ಗಿಫ್ಟ್!
ಡೆವಲಪರ್‌ಗಳ ಪ್ರಕಾರ, ಫೌಜಿ ಗೇಮಿಂಗ್ ಆಂಡ್ರಾಯ್ಡ್ 8 ಮತ್ತು ಅದಕ್ಕಿಂತ ಸುಧಾರಿತ ಹ್ಯಾಂಡ್‌ಸೆಟ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ. ಇದನ್ನು ಬೆಂಗಳೂರು ಮೂಲದ ಎನ್‌ಕೋರ್ ಗೇಮ್ಸ್ ಎಂಬ ಕಂಪನಿ ಅಭಿವೃದ್ಧಿಪಡಿಸಿದೆ. ಐಒಎಸ್ ಬಳಕೆದಾರರಿಗೆ ಈ ಗೇಮಿಂಗ್ ಲಭ್ಯವಾಗುತ್ತದೆಯೇ ಅಥವಾ ಯಾವಾಗ ಎಂಬುದರ ಕುರಿತು ತಯಾರಕರು ಯಾವುದೇ ಮಾಹಿತಿ ನೀಡಿಲ್ಲ.
ಭಾರತದ ಯುವಕರಿಗೆ ಗೇಮಿಂಗ್ ಮನರಂಜನೆಯ ಒಂದು ಭಾಗವಾಗುತ್ತಿದೆ. ಫೌಜಿ ಗೇಮಿಂಗ್ ಆಡುವಾಗ ಅವರು ಸೈನಿಕರ ತ್ಯಾಗದ ಬಗ್ಗೆ ಕಲಿಯುತ್ತಾರೆ ಎಂದು ನಾನು ಭಾವಿಸುತ್ತೇನೆ. ನಮ್ಮ ಸೈನಿಕರು ಮತ್ತು ಹುತಾತ್ಮರ ಕುಟುಂಬಗಳಿಗೆ ಸಹ ಕೊಡುಗೆ ನೀಡುತ್ತಾರೆ.
ಇದರೊಂದಿಗೆ ನಮ್ಮಲ್ಲಿ ಪ್ರತಿಯೊಬ್ಬರೂ ಪ್ರಧಾನಿ ಮೋದಿ ಅವರ ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಬೆಂಬಲಿಸುವ ಸಾಮರ್ಥ್ಯ ಹೊಂದಲಿದ್ದಾರೆ. ಗೇಮಿಂಗ್ನಿಂದ ಗಳಿಸಿದ ಆದಾಯದ ಶೇ.20ರಷ್ಟು ಭಾರತ್ ಕೆವೀರ್ ಟ್ರಸ್ಟ್ಗೆ ನೀಡಲಾಗುವುದು ಎಂದು ಅಕ್ಷಯ್ ಕುಮಾರ್ ಗೇಮಿಂಗ್ ಘೋಷಣೆ ವೇಳೆ ಹೇಳಿದ್ದರು.
ಆಂಡ್ರಾಯ್ಡ್ 8.0 ಓರಿಯೊ ಅಥವಾ ಇದಕ್ಕೂ ಹೆಚ್ಚಿನ ಸುಧಾರಿತ ಯಾವುದೇ ಸಾಧನದಲ್ಲಿ ಈ ಗೇಮಿಂಗ್‌ನ ಡೌನ್‌ಲೋಡ್ ಮಾಡಬಹುದು. ಆಂಡ್ರಾಯ್ಡ್ 8, 9, 10, ಮತ್ತು 11ನಿಂದ ಚಾಲಿತ ಯಾವುದೇ ಮೊಬೈಲ್ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ನೀವು ಈ ಗೇಮಿಂಗ್ ಆಡಬಹುದು. ಆ್ಯಪ್ನ ಒಟ್ಟಾರೆ ಸಾಮರ್ಥ್ಯ 500 ಎಂಬಿಯಷ್ಟಿದೆ.