ನವದೆಹಲಿ: ಬ್ಯಾಂಕ್ಗಳಿಂದ ಕೋಟ್ಯಂತರ ರೂಪಾಯಿ ಸಾಲ ಮಾಡಿ ಅದನ್ನು ಪಾವತಿಸದೇ ವಿದೇಶದಲ್ಲಿ ತಲೆ ಮರೆಸಿಕೊಂಡ ಮದ್ಯದ ಉದ್ಯಮಿ ವಿಜಯ್ ಮಲ್ಯ ಅವರಿಗೆ ಸೇರಿದ್ದ ಫ್ರಾನ್ಸ್ನಲ್ಲಿನ 1.6 ಮಿಲಿಯನ್ ಯೂರೋ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ.
ಫ್ರಾನ್ಸ್‌ನ 32 ಅವೆನ್ಯೂ ಫೋಚ್‌ನಲ್ಲಿ ಇರುವ ವಿಜಯ್ ಮಲ್ಯ ಅವರ ಆಸ್ತಿಯನ್ನು ಇಡಿ ಕೋರಿಕೆಯ ಮೇರೆಗೆ ಫ್ರೆಂಚ್ ಪ್ರಾಧಿಕಾರ ವಶಪಡಿಸಿಕೊಂಡಿದೆ. ಫ್ರಾನ್ಸ್‌ನಲ್ಲಿ ವಶಪಡಿಸಿಕೊಂಡ ಆಸ್ತಿಯ ಮೌಲ್ಯ 1.6 ಮಿಲಿಯನ್ ಯುರೋಗಳಷ್ಟು (14 ಕೋಟಿ ರೂ.) ಇದೆ. ಕಿಂಗ್‌ಫಿಶರ್ ಏರ್‌ಲೈನ್ಸ್ ಲಿಮಿಟೆಡ್‌ನ ಬ್ಯಾಂಕ್ ಖಾತೆಯಿಂದ ಹೆಚ್ಚಿನ ಮೊತ್ತವನ್ನು ವಿದೇಶಕ್ಕೆ ರವಾನಿಸಲಾಗಿದೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಕಾರ್ಡ್ದಾರರಿಗೆ ಸಿಹಿ ಸುದ್ದಿ: ಕಾಂಟೆಕ್ಟ್ಲೆಸ್ ಪೇಮೆಂಟ್ ಮಿತಿ ಏರಿಕೆ: ಇಲ್ಲಿದೆ ಅದರ ವಿವರಣೆ
ಮಲ್ಯ ಅವರಿಗೆ ಸಂಬಂಧಿಸಿದ ಹಲವು ಆಸ್ತಿಯನ್ನು ಇಡಿ ಇತ್ತೀಚೆಗೆ ವಶಪಡಿಸಿಕೊಂಡಿದೆ. ಇದೀಗ ಫ್ರಾನ್ಸ್ ಮೂಲದ ಆಸ್ತಿ ಕೂಡ ಸೇರ್ಪಡೆಯಾಗಿದೆ. ಬ್ರಿಟನ್ನಿಂದ ಭಾರತಕ್ಕೆ ಹಸ್ತಾಂತರಿಸುವ ಕಾನೂನಿನ ಹೋರಾಟ ಪ್ರಗತಿಯಲ್ಲಿದೆ. ಇದರ ಮಧ್ಯೆ ಮತ್ತೊಂದು ಸಂಕಷ್ಟ ಮಲ್ಯಗೆ ಎದುರಾಗಿದೆ.
9,000 ಕೋಟಿ ಮೌಲ್ಯದ ಸಾಲವನ್ನು ನಾನಾ ಬ್ಯಾಂಕ್ಗಳಿಂದ ಪಡೆದ ಉದ್ದೇಶ ಪೂರ್ವಕವಾಗಿ ವಂಚಿಸಿ 2016ರಲ್ಲಿ ದೇಶಬಿಟ್ಟು ಪರಾರಿ ಆಗಿದ್ದರು.