ETV Bharat / business

ಎಲಾನ್ ಮಸ್ಕ್​ ವಿಶ್ವದ ನಂ.1 ಕುಬೇರ: ಈವರೆಗೆ ಯಾರೂ ಮಾಡದ ದಾಖಲೆ ನಿರ್ಮಾಣ!

ಟೆಸ್ಲಾ ಷೇರು ಬೆಲೆ ಗುರುವಾರ ಶೇ 7.94ರಷ್ಟು ಏರಿಕೆಯಾಗಿದ್ದು, ಪ್ರತಿ ಷೇರಿಗೆ 816.04 ಡಾಲರ್​​ಗೆ ತಲುಪಿದೆ. ಇದು ಕಂಪನಿ ಮಾರುಕಟ್ಟೆ ಬಂಡವಾಳವನ್ನು 773 ಬಿಲಿಯನ್ ಡಾಲರ್‌ಗೆ ತೆಗೆದುಕೊಂಡು ಹೋಗಿದೆ. 2020ರ ಜನವರಿ 8ರಂದು ಟೆಸ್ಲಾ ಷೇರು ಬೆಲೆ ಕೇವಲ 93 ಡಾಲರ್ ಆಗಿತ್ತು. ಒಂದು ವರ್ಷದಲ್ಲಿ ಶೇ 777ರಷ್ಟು ಹೆಚ್ಚಳವಾಗಿದೆ.

author img

By

Published : Jan 8, 2021, 12:08 PM IST

Updated : Jan 8, 2021, 12:15 PM IST

Elon Musk
ಎಲೋನ್ ಮಸ್ಕ್

ನ್ಯೂಯಾರ್ಕ್​: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಆಗಿದ್ದ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರನ್ನು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಹಿಂದಿಕ್ಕಿದ್ದಾರೆ.

ಮಸ್ಕ್​ ಅವರ ಕಂಪನಿಯ ಷೇರು ಬೆಲೆ ಏರಿಕೆಯ ನಂತರ ಕಂಪನಿಯ ನಿವ್ವಳ ಮೌಲ್ಯವು 195 ಬಿಲಿಯನ್ ಯುಎಸ್ ಡಾಲರ್​​ಗೆ ಏರಿಕೆಯಾಗಿದೆ. ಈ ಮೂಲಕ 184 ಶತಕೋಟಿ ಡಾಲರ್​ ಸಂಪತ್ತು ಹೊಂದಿರುವ ಜೆಫ್​ ಅವರನ್ನು ಎಲಾನ್ ಹಿಂದೆ ತಳ್ಳಿದ್ದಾರೆ.

ಟೆಸ್ಲಾ ಷೇರು ಬೆಲೆ ಗುರುವಾರ ಶೇ 7.94ರಷ್ಟು ಏರಿಕೆಯಾಗಿದ್ದು, ಪ್ರತಿ ಷೇರಿಗೆ 816.04 ಡಾಲರ್​​ಗೆ ತಲುಪಿದೆ. ಇದು ಕಂಪನಿ ಮಾರುಕಟ್ಟೆ ಬಂಡವಾಳವನ್ನು 773 ಬಿಲಿಯನ್ ಡಾಲರ್‌ಗೆ ತೆಗೆದುಕೊಂಡು ಹೋಗಿದೆ. 2020ರ ಜನವರಿ 8ರಂದು ಟೆಸ್ಲಾ ಷೇರು ಬೆಲೆ ಕೇವಲ 93 ಡಾಲರ್ ಆಗಿತ್ತು. ಒಂದು ವರ್ಷದಲ್ಲಿ ಶೇ 777ರಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ: ಷೇರುಪೇಟೆಯಲ್ಲಿ ಭಾರಿ ಏರಿಕೆ: ಆರಂಭದಲ್ಲಿ 350 ಅಂಕ ಏರಿಕೆ ದಾಖಲಿಸಿದ ಸೆನ್ಸೆಕ್ಸ್​

ಬ್ಲೂಮ್‌ಬರ್ಗ್ ಪ್ರಕಾರ, 2010ರ ಆರಂಭಿಕ ಸಾರ್ವಜನಿಕ ಕೊಡುಗೆಯಿಂದ ಟೆಸ್ಲಾದಲ್ಲಿನ ಷೇರುಗಳು ಶೇ 23,900ಕ್ಕಿಂತ ಅಧಿಕ ಲಾಭ ಗಳಿಸಿವೆ. 2020ರ ಆರಂಭದಲ್ಲಿ ಮಸ್ಕ್‌ನ ನಿವ್ವಳ ಮೌಲ್ಯವು ಸುಮಾರು 27 ಬಿಲಿಯನ್ ಡಾಲರ್​ ಆಗಿತ್ತು. ಇದು ಅವರನ್ನು ವಿಶ್ವದ ಅಗ್ರ 50 ಶ್ರೀಮಂತ ವ್ಯಕ್ತಿಗಳಲ್ಲಿ ಸ್ಥಾನ ಕಲ್ಪಿಸಿತ್ತು. ಈಗ ಎಲಾನ್ ಬೆಜೋಸ್‌ಗಿಂತ (184 ಶತಕೋಟಿ ಡಾಲರ್​) 11 ಶತಕೋಟಿ ಡಾಲರ್​ ಮುಂದಿದ್ದು, ಇತಿಹಾಸದಲ್ಲಿ ವೇಗವಾಗಿ ಉನ್ನತ ಸ್ಥಾನಕ್ಕೆ ಏರಿದ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

Last Updated : Jan 8, 2021, 12:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.