ನವದೆಹಲಿ: ಫೇಸ್‌ಬುಕ್ ಇಂಕಾ ಒಡೆತನದ ಅತಿಹೆಚ್ಚು ಸ್ಮಾರ್ಟ್ಫೋನ್ ಬಳಕೆದಾರರ ಸಂದೇಶ ವಾಹಕ ಆಗಿರುವ ವಾಟ್ಸ್ಆ್ಯಪ್, ಆಗಾಗ ಹ್ಯಾಕರ್‌ಗಳ ದಾಳಿಗೆ ಗುರಿಯಾಗುತ್ತಿರುತ್ತದೆ. ಇದನ್ನು ತಡೆಯಲು ಫೇಸ್‌ಬುಕ್ ಇಂಕಾ ನೂತನ ಭದ್ರತಾ ವ್ಯವಸ್ಥೆಯನ್ನು ಆ್ಯಪ್ನಲ್ಲಿ ಪರಿಚಯಿಸಿದೆ.
ವಾಟ್ಸ್ಆ್ಯಪ್ ಹ್ಯಾಕರ್ಗೆ ಸಂಬಂಧಪಟ್ಟ ಕೆಲವು ಸಂಸ್ಥೆಗಳು ತಮ್ಮ ವರದಿಯ ಮೂಲಕ ಫೇಸ್‌ಬುಕ್ ಇಂಕಾ ಗಮನಕ್ಕೆ ತರುತ್ತಿವೆ. ಮೊಬೈಲ್
ಸಾಧನಗಳಲ್ಲಿ ಸ್ಪೈವೇರ್ ಸ್ಥಾಪಿಸಲು ಹ್ಯಾಕರ್‌ಗಳಿಗೆ ಅನುಕೂಲ ಆಗುವಂತಹ ದೋಷ ಇರುವುದು ಈಗ ಪತ್ತೆಯಾಗಿದೆ. ಇದು ಬಳಕೆದಾರರ ಸುರಕ್ಷತೆಗೆ ಧಕ್ಕೆತರಲು ದುರುದ್ದೇಶಪೂರಿತ ಜಿಫ್ (GIF) ಫೈಲ್ ಕಳುಹಿಸುತ್ತಿದ್ದಾರೆ ಎಂಬುದನ್ನು ಕಂಡುಕೊಂಡಿದೆ.
ಹ್ಯಾಕರ್ಗಳು ವಾಟ್ಸ್ಆ್ಯಪ್ ಬಳಕೆದಾರರಿಗೆ ದುರುದೇಶಪೂರಿತವಾಗಿ ಜಿಫ್ ಫೈಲ್ಗಳನ್ನು ಕಳುಹಿಸಿ ಮೊಬೈಲ್ ಒಳಗಿನ ಡೇಟಾ ಕದಿಯುತ್ತಿದ್ದರು ಎಂಬ ದೋಷವನ್ನು ಫೇಸ್‌ಬುಕ್ ಪತ್ತೆ ಹಚ್ಚಿದೆ. ಇದಕ್ಕೆ ಪರಿಹಾರವಾಗಿ ವಾಟ್ಸ್ಆ್ಯಪ್ 2.19.244 ಆವೃತ್ತಿಯ ನೂತನ ವರ್ಸನ್ ಅನ್ನು ಪ್ಲೇಸ್ಟೋರ್ ಹಾಗೂ ಐಓಸಿಯಲ್ಲಿ ನವೀಕರಿಸಿದೆ. ಬಳಕೆದಾರರ ತಮ್ಮ ವಾಟ್ಸ್ಆ್ಯಪ್ ಮೆಸೆಂಜರ್ ಅನ್ನು ಹೊಸ ಆವೃತ್ತಿಗೆ ನವೀಕರಿಸಬೇಕು ಎಂದು ಭದ್ರತಾ ಲೋಪದೋಷದ ವಿಭಾಗ ಮನವಿ ಮಾಡಿದೆ.
ಹ್ಯಾಕರ್ಗಳು ಇಮೇಲ್ ಅಥವಾ ಇತರ ಯಾವುದೇ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಮೂಲಕ ಹಾನಿಕಾರಕ ಜಿಫ್ ಫೈಲ್ ಅನ್ನು ಬಳಕೆದಾರರಿಗೆ ಕಳುಹಿಸಿ ಮೊಬೈಲ್ನಲ್ಲಿನ ದತ್ತಾಂಶ ಪಡೆಯುವ ಸಾಧ್ಯತೆ ಇದೆ. ಈ ಜಿಫ್ ಸಾಧನವು ವಾಟ್ಸ್ಆ್ಯಪ್ನಲ್ಲಿನ ಮೀಡಿಯಾ ಗ್ಯಾಲರಿ ತೆರೆಯುವಂತೆ ಪ್ರಚೋದಿಸಿ ಬಳಿಕ ಹ್ಯಾಕ್ರಗಳು ದಾಳಿ ಮಾಡಲಿದ್ದಾರೆ ಎಂದು ಭದ್ರತಾ ಸಂಶೋಧಕರು ವಿವರಿಸಿದ್ದಾರೆ.