ETV Bharat / business

ದೊಡ್ಡಬಳ್ಳಾಪುರ - ಹೊಸಕೋಟೆ ನಡುವಣ ಭಾರತ ಮಾಲಾ ರಸ್ತೆ ಟೆಂಡರ್​ ಗೆದ್ದ ಮಧ್ಯಪ್ರದೇಶ ಕಂಪನಿ

author img

By

Published : Aug 27, 2020, 4:31 PM IST

4-ಲೇನಿಂಗ್ ರಸ್ತೆಯು ದೊಡ್ಡಬಳ್ಳಾಪುರ ಬೈಪಾಸ್‌ನಿಂದ ಹೊಸಕೋಟೆ ವಿಭಾಗದ ತನಕ 42 ಕಿ.ಮೀ.ನಿಂದ 80 ಕಿ.ಮೀ.ವರೆಗೆ ಎನ್ಎಚ್ -648 (ಎನ್ಎಚ್ -207) ರಸ್ತೆ ನಿರ್ಮಾಣ ಮಾಡಲಿದೆ. ರಾಜ್ಯದಲ್ಲಿ ಹಾದು ಹೋಗುವ ಈ ಕಾಮಗಾರಿ (ಪ್ಯಾಕೇಜ್- II) ಭಾರತ ಮಾಲಾ ಪರಿ ಯೋಜನ ಅಡಿಯಲ್ಲಿದೆ.

Road
ರಸ್ತೆ ಕಾಮಗಾರಿ

ನವದೆಹಲಿ: ಮಧ್ಯಪ್ರದೇಶ ಮೂಲದ ದಿಲೀಪ್‌ ಬಿಲ್ಡ್‌ಕಾನ್‌ ಕಂಪನಿಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ (ಎನ್‌ಎಚ್‌ಎಐ) ಕರ್ನಾಟಕದಲ್ಲಿ ಹಾದು ಹೋಗುವ 1,274 ಕೋಟಿ ರೂ. ರಸ್ತೆ ಅಭಿವೃದ್ಧಿ ಕಾಮಗಾರಿ ಗುತ್ತಿಗೆ ಪಡೆದುಕೊಂಡಿದೆ.

ಎನ್ಎಚ್ 648ರ ವಿಸ್ತರಿಸುವ ಭಾರತ ಮಾಲಾ ಯೋಜನೆ ಅಡಿ ರಾಜ್ಯದ ದೊಡ್ಡಬಳ್ಳಾಪುರ ಬೈಪಾಸ್​- ಹೊಸಕೋಟೆ ನಡುವೆ ಹಾದುಹೋಗುವ ಕಾಮಗಾರಿ ಗುತ್ತಿಗೆಯನ್ನು ದಿಲೀಪ್​ ಬಿಲ್ಡ್​ಕಾನ್​ ತನ್ನದಾಗಿಸಿಕೊಂಡಿದೆ.

ದಿಲೀಪ್ ಬಿಲ್ಡ್​ಕಾನ್​ ಲಿಮಿಟೆಡ್ ಹೊಸ ಎಚ್‌ಎಎಂ ಯೋಜನೆಯ ಕಾಮಗಾರಿ ಸಂಬಂಧ ಅನುಮೋದನೆ ಪತ್ರ ಸ್ವೀಕರಿಸಿದೆ. 4 - ಲೇನಿಂಗ್ ರಸ್ತೆಯು ದೊಡ್ಡಬಳ್ಳಾಪುರ ಬೈಪಾಸ್‌ನಿಂದ ಹೊಸಕೋಟೆ ವಿಭಾಗದ ತನಕ 42 ಕಿ.ಮೀ.ನಿಂದ 80 ಕಿ.ಮೀ.ವರೆಗೆ ಎನ್ಎಚ್ -648 (ಎನ್ಎಚ್ -207) ರಸ್ತೆ ನಿರ್ಮಾಣ ಮಾಡಲಿದೆ. ರಾಜ್ಯದಲ್ಲಿ ಹಾದುಹೋಗುವ ಈ ಕಾಮಗಾರಿ (ಪ್ಯಾಕೇಜ್- II) ಭಾರತ ಮಾಲಾ ಪರಿಯೋಜನ ಅಡಿಯಲ್ಲಿದೆ ಎಂದು ಕಂಪನಿಯು ನಿಯಂತ್ರಕ ಫೈಲಿಂಗ್​ನಲ್ಲಿ ತಿಳಿಸಿದೆ.

ಈ ಯೋಜನೆಯನ್ನು 24 ತಿಂಗಳಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಯೋಜನೆಯ ಕಾರ್ಯಾಚರಣೆಯ ಅವಧಿ ವಾಣಿಜ್ಯ ಕಾರ್ಯಾಚರಣೆಯ ದಿನಾಂಕದಿಂದ 15 ವರ್ಷಗಳ ತನಕ ಇರಲಿದೆ ಎಂದು ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.