ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ಉದ್ಯಮಿಗಳನ್ನು ಹೊಂದಿಕೆ, ನವೀನ ರಚನೆ ಮತ್ತು ಬದಲಾವಣೆಯಂತಹ ನಾಳಿನ ಮಾನದಂಡಗಳಿಗೆ ಮಾರ್ಗ ಕಂಡುಕೊಳ್ಳಲು ಒತ್ತಾಯಿಸುತ್ತಿದೆ ಎಂದು ಹಿರಿಯ ಕೈಗಾರಿಕೋದ್ಯಮಿ ರತನ್ ಟಾಟಾ ಹೇಳಿದ್ದಾರೆ.
ಈ ಸಮಯದಲ್ಲಿ ಹುದುಗಿರುವ ಸವಾಲು ಮತ್ತು ತೊಂದರೆಗಳನ್ನು ಕಡಿಮೆ ಮಾಡದಿರಲು ಪ್ರಯತ್ನಿಸುತ್ತಿರುವಾಗ, ಇದು ಎಲ್ಲವನ್ನೂ ಸ್ವಚ್ಛವಾದ ಕಾಗದದ ಹಾಳೆಯಲ್ಲಿ ಆರಂಭಿಸಬಹುದಾದ ಕೆಲಸದ ವಿಧಾನಗಳನ್ನು ಈ ಹಿಂದೆ ಯೋಚಿಸದ ರೀತಿಯಲ್ಲಿ ಈಗ ತೋರಿಸುತ್ತಿದೆ ಎಂದರು.
ಇನ್‌ಸ್ಟಾಗ್ರಾಮ್‌ನ ತಮ್ಮ ಖಾತೆಯಲ್ಲಿ ಬರೆದುಕೊಂಡ ರತನ್ ಅವರು, ಆರ್ಥಿಕ ಚಟುವಟಿಕೆಗಳನ್ನು ತೀವ್ರವಾಗಿ ಅಡ್ಡಿಪಡಿಸಿದ ಸಾಂಕ್ರಾಮಿಕ ರೋಗದ ಬಳಿಕ, ಉದ್ಯಮಿಗಳು ತಮ್ಮ ಕಾರ್ಯಾಚರಣೆಯನ್ನು ನಡೆಸಲು ಉತ್ತಮ ಮಾರ್ಗ ಕಂಡುಕೊಳ್ಳುತ್ತಾರೆ ಎಂದು ಆಶಿಸಿದ್ದಾರೆ.
ಹಿಂದಿನ ಕಷ್ಟದ ಸಮಯದಲ್ಲಿ ಉದ್ಯಮಿಗಳು ದೂರದೃಷ್ಟಿ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಿದ್ದಾರೆ. ಉತ್ಪನ್ನವನ್ನು ಹೆಚ್ಚಿಸಲು, ಕಂಪನಿಯನ್ನು ಸಮರ್ಥವಾಗಿ ಮುನ್ನಡೆಸಲು, ಕಾರ್ಯಾಚರಣೆಗಳನ್ನು ಉತ್ತಮ ರೀತಿಯಲ್ಲಿ ಸಾಗಿಸಲು ಬೇರೆ ಮಾರ್ಗವನ್ನು ಕಂಡುಕೊಳ್ಳುವ ಸಾಮರ್ಥ್ಯವು ಪ್ರಸ್ತುತ ಬಿಕ್ಕಟ್ಟಿನ ಫಲಿತಾಂಶವಾಗಿ ಹೊರಹೊಮ್ಮುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.