ETV Bharat / business

ಆಕ್ಸಿಜನ್ ಎಕ್ಸ್​​ಪ್ರೆಸ್​​: ಒಂದೇ ದಿನದಲ್ಲಿ 1,000 ಮೆಟ್ರಿಕ್​ ಟನ್ ವೈದ್ಯಕೀಯ ಆಮ್ಲಜನಕ ಸಾಗಣೆ

author img

By

Published : May 18, 2021, 8:21 PM IST

ಏಪ್ರಿಲ್ 24ರಂದು ಮಹಾರಾಷ್ಟ್ರದಲ್ಲಿ 126 ಮೆಟ್ರಿಕ್​ ಟನ್​ನೊಂದಿಗೆ ಆಕ್ಸಿಜನ್ ಎಕ್ಸ್​​ಪ್ರೆಸ್​ಗಳು ತಮ್ಮ ವಿತರಣೆಯ ಕಾರ್ಯ ಪ್ರಾರಂಭಿಸಿದವು. ಕಳೆದ 24 ದಿನಗಳಿಗಿಂತ ಹೆಚ್ಚು ಅವಧಿಯಲ್ಲಿ, ರೈಲ್ವೆಯು ತನ್ನ ಆಕ್ಸಿಜನ್ ಎಕ್ಸ್​​ಪ್ರೆಸ್​ ಕಾರ್ಯಾಚರಣೆಯನ್ನು ಉನ್ನತ ಮಟ್ಟಕ್ಕೇರಿಸಿ 11,030 ಮೆ.ಟನ್ ಗಿಂತ ಹೆಚ್ಚಿನ ವೈದ್ಯಕೀಯ ಆಮ್ಲಜನಕವನ್ನು 13 ರಾಜ್ಯಗಳಿಗೆ ತಲುಪಿಸಿದೆ.

Oxygen Expresses
Oxygen Expresses

ನವದೆಹಲಿ: ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಹೊಸ ಪರಿಹಾರಗಳನ್ನು ಕಂಡುಕೊಳ್ಳುತ್ತಿರುವ ಭಾರತೀಯ ರೈಲ್ವೆಯು ದೇಶಾದ್ಯಂತ ವಿವಿಧ ರಾಜ್ಯಗಳಿಗೆ ವೈದ್ಯಕೀಯ ಆಮ್ಲಜನಕ ತಲುಪಿಸುವ (ಎಲ್ಎಂಒ) ಮೂಲಕ ಪರಿಹಾರ ಕಾರ್ಯವನ್ನು ಮುಂದುವರಿಸಿದೆ.

ಇಲ್ಲಿಯವರೆಗೆ ರೈಲ್ವೆಯು ಸುಮಾರು 675ಕ್ಕೂ ಹೆಚ್ಚು ಟ್ಯಾಂಕರ್​ಗಳಲ್ಲಿ ಸುಮಾರು 11,030 ಮೆಟ್ರಿಕ್​ ಟನ್ ಎಲ್ಎಂಒ ಅನ್ನು ದೇಶದ ವಿವಿಧ ರಾಜ್ಯಗಳಿಗೆ ತಲುಪಿಸಿದೆ. ಆಕ್ಸಿಜನ್ ಎಕ್ಸ್​​ಪ್ರೆಸ್​ಗಳು ಕಳೆದ ಕೆಲವು ದಿನಗಳಿಂದ ಪ್ರತಿದಿನ ಸುಮಾರು 800 ಮೆ.ಟನ್ ಎಲ್ಎಂಒ ರಾಷ್ಟ್ರದಲ್ಲಿ ತಲುಪಿಸುತ್ತಿವೆ.

ಏಪ್ರಿಲ್ 24ರಂದು ಮಹಾರಾಷ್ಟ್ರದಲ್ಲಿ 126 ಮೆ.ಟ​ನ್ನೊಂದಿಗೆ ಆಕ್ಸಿಜನ್ ಎಕ್ಸ್​​ಪ್ರೆಸ್​ಗಳು ತಮ್ಮ ವಿತರಣೆಯ ಕಾರ್ಯ ಪ್ರಾರಂಭಿಸಿತು. ಕಳೆದ 24 ದಿನಗಳಿಗಿಂತ ಹೆಚ್ಚು ಅವಧಿಯಲ್ಲಿ, ರೈಲ್ವೆಯು ತನ್ನ ಆಕ್ಸಿಜನ್ ಎಕ್ಸ್​​ಪ್ರೆಸ್​ ಕಾರ್ಯಾಚರಣೆಯನ್ನು ಉನ್ನತ ಮಟ್ಟಕ್ಕೇರಿಸಿ 11,030 ಮೆ.ಟನ್ ಗಿಂತ ಹೆಚ್ಚಿನ ವೈದ್ಯಕೀಯ ಆಮ್ಲಜನಕವನ್ನು 13 ರಾಜ್ಯಗಳಿಗೆ ತಲುಪಿಸಿದೆ.

ದೇಶದ ಉದ್ದಗಲಕ್ಕೆ ಸಂಚರಿಸುತ್ತ ಭಾರತೀಯ ರೈಲ್ವೆಯು ಪಶ್ಚಿಮದಲ್ಲಿ ಹಪಾ ಮತ್ತು ಮುಂಡ್ರಾ ಮತ್ತು ರೂರ್ಕೆಲಾ, ದುರ್ಗಾಪುರ, ಟಾಟಾನಗರ, ಪೂರ್ವದ ಅಂಗುಲ್ ಮುಂತಾದ ಸ್ಥಳಗಳಿಂದ ಆಮ್ಲಜನಕವನ್ನು ತೆಗೆದುಕೊಂಡು ನಂತರ ಅದನ್ನು ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು , ಹರಿಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ ಮತ್ತು ಉತ್ತರ ಪ್ರದೇಶದ ರಾಜ್ಯಗಳಿಗೆ ಕ್ಲಿಷ್ಟಕರವಾದ ಕಾರ್ಯಾಚರಣೆ ಮಾರ್ಗ ಯೋಜನೆ ಸನ್ನಿವೇಶಗಳಲ್ಲಿ ತಲುಪಿಸುತ್ತಿದೆ.

ಇದನ್ನೂ ಓದಿ: ಶೀಘ್ರವೇ ರೈಲ್ವೆ ಆಸ್ಪತ್ರೆಗಳಲ್ಲಿ 86 ಆಕ್ಸಿಜನ್ ಘಟಕಗಳ ಸ್ಥಾಪನೆ!

ಆಮ್ಲಜನಕವು ಸಾಧ್ಯವಾದಷ್ಟು ವೇಗವಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳಲು, ರೈಲ್ವೆ ಆಕ್ಸಿಜನ್ ಎಕ್ಸ್​​ಪ್ರೆಸ್​ ಸರಕು ರೈಲುಗಳ ಚಾಲನೆಯಲ್ಲಿ ಹೊಸ ಮತ್ತು ಸಮರ್ಪಕ ಮಾನದಂಡಗಳನ್ನು ರಚಿಸುತ್ತಿದೆ. ಈ ನಿರ್ಣಾಯಕ ಸರಕು ರೈಲುಗಳ ಸರಾಸರಿ ವೇಗವು ಹೆಚ್ಚಿನ ಸಂದರ್ಭಗಳಲ್ಲಿ 55ಕ್ಕಿಂತ ಹೆಚ್ಚಿನದಾಗಿರುತ್ತದೆ. ಹೆಚ್ಚಿನ ಆದ್ಯತೆಯ ಗ್ರೀನ್ ಕಾರಿಡಾರ್ ನಲ್ಲಿ ಚಾಲನೆಯಲ್ಲಿರುವ, ಹೆಚ್ಚಿನ ತುರ್ತು ಪ್ರಜ್ಞೆಯೊಂದಿಗೆ, ವಿವಿಧ ವಲಯಗಳ ಕಾರ್ಯಾಚರಣಾ ತಂಡಗಳು ಅತ್ಯಂತ ಸವಾಲಿನ ಸಂದರ್ಭಗಳಲ್ಲಿ 24 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದು, ಆಮ್ಲಜನಕವು ಸಾಧ್ಯವಾದಷ್ಟು ವೇಗವಾಗಿ ತಲುಪುವುದನ್ನು ಖಚಿತ ಪಡಿಸುತ್ತಿದೆ. ವಿವಿಧ ವಿಭಾಗಗಳಲ್ಲಿನ ಸಿಬ್ಬಂದಿ ಬದಲಾವಣೆಗಳಿಗಾಗಿ ತಾಂತ್ರಿಕ ನಿಲುಗಡೆಗಳನ್ನು 1 ನಿಮಿಷಕ್ಕೆ ಇಳಿಸಲಾಗಿದೆ.

ಟ್ರ್ಯಾಕ್‌ಗಳನ್ನು ಮುಕ್ತವಾಗಿ ಇಡಲಾಗುತ್ತದೆ ಮತ್ತು ಆಕ್ಸಿಜನ್ ಎಕ್ಸ್ ಪ್ರೆಸ್ ತಡೆಯಿಲ್ಲದೆ ಸಾಗುವುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಜಾಗರೂಕತೆಯನ್ನು ವಹಿಸಲಾಗುತ್ತಿದೆ. ಇತರ ಸರಕು ಸಾಗಣಿಕೆಯ ವೇಗವು ಕಡಿಮೆಯಾಗಬಾರದು ಎನ್ನುವ ರೀತಿಯಲ್ಲಿ ಇದನ್ನು ನಿರ್ವಹಿಸಲಾಗುತ್ತದೆ.

ಸುಮಾರು 175 ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ಈವರೆಗೆ ತಮ್ಮ ಯಾನವನ್ನು ಪೂರ್ಣಗೊಳಿಸಿವೆ ಮತ್ತು ವಿವಿಧ ರಾಜ್ಯಗಳಿಗೆ ಪರಿಹಾರವನ್ನು ನೀಡಿವೆ ಎನ್ನುವುದನ್ನು ಗಮನಿಸಬಹುದು. ಕೋರಿಕೊಂಡಿರುವ ರಾಜ್ಯಗಳಿಗೆ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಸಾಧ್ಯವಾದಷ್ಟು ಎಲ್ಎಂಒ ತಲುಪಿಸಲು ಭಾರತೀಯ ರೈಲ್ವೆಯ ಪ್ರಯತ್ನವಾಗಿದೆ.

ಮಹಾರಾಷ್ಟ್ರದಲ್ಲಿ 521 ಮೆ.ಟನ್ ಆಕ್ಸಿಜನ್, ಉತ್ತರ ಪ್ರದೇಶದಲ್ಲಿ ಸುಮಾರು 2,858 ಮೆ.ಟನ್, ಮಧ್ಯಪ್ರದೇಶದಲ್ಲಿ 476 ಮೆ.ಟನ್, ಹರಿಯಾಣದಲ್ಲಿ 1427 ಮೆ.ಟನ್, ತೆಲಂಗಾಣದಲ್ಲಿ 565 ಮೆ.ಟನ್, ರಾಜಸ್ಥಾನದಲ್ಲಿ 40 ಮೆ.ಟನ್, ಕರ್ನಾಟಕದಲ್ಲಿ 480 ಮೆ.ಟನ್, ಉತ್ತರಾಖಂಡದಲ್ಲಿ200 ಮೆ.ಟನ್, ತಮಿಳುನಾಡಿನಲ್ಲಿ 350 ಮೆ.ಟನ್, ಪಂಜಾಬ್ ನಲ್ಲಿ 81 ಮೆ.ಟನ್, ಕೇರಳದಲ್ಲಿ 118 ಮೆ.ಟನ್ ಮತ್ತು ದೆಹಲಿಯಲ್ಲಿ ಸುಮಾರು 3794 ಮೆ.ಟನ್ ಆಮ್ಲಜನಕವನ್ನು ತಲುಪಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.