ETV Bharat / business

ಲಾಕ್​ಡೌನ್​ನಿಂದ ಸೆಲ್ಯುಲಾರ್ ನೆಟ್‌ವರ್ಕ್ ಬಳಕೆ ಏರಿಕೆ... ಟೆಲಿಕಾಂ ಆಪರೇಟರ್​ಗಳ ತುರ್ತು ಸಭೆ

ಡಿಜಿಟಲ್ ಉದ್ಯಮವು ವ್ಯಾಪಕ ಬಳಕೆಯ ಸಂಭಾವ್ಯ ಸವಾಲಿನ ಬಗ್ಗೆ ಈಗಾಗಲೇ ಸ್ಪಷ್ಟವಾಗಿ ಅರಿತುಕೊಂಡಿದೆ. ಬಳಕೆದಾರರು ಎಲ್ಲಿ ಬೇಕಾದರೂ ಮತ್ತು ಯಾವಾಗ ಬೇಕಾದರೂ ಮೊಬೈಲ್ ನೆಟ್‌ವರ್ಕ್‌ ಸೇವೆ ಪಡೆಯಬಹುದಾಗಿದೆ. ನೆಟ್​ವರ್ಕ್​ ಸೇವೆಯಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲು ಆಪರೇಟರ್​ಗಳು ಬದ್ಧವಾಗಿದ್ದಾರೆ. ಇದನ್ನು ಕಾರ್ಯಗತಗೊಳಿಸಲು ಸ್ಟಾರ್ ಆ್ಯಂಡ್​ ಡಿಸ್ನಿ ಇಂಡಿಯಾದ ಅಧ್ಯಕ್ಷ ಉದಯ್ ಶಂಕರ್ ಅವರು ಡಿಜಿಟಲ್ ಉದ್ಯಮದ ಪ್ರಮುಖ ಪಾಲುದಾರರೊಂದಿಗೆ ಸಭೆ ಆಯೋಜಿಸಿದ್ದರು.

Network Operator
ಸೆಲ್ಯುಲಾರ್ ನೆಟ್‌ವರ್ಕ್
author img

By

Published : Mar 25, 2020, 7:02 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ವೈರಸ್ ಸೋಂಕಿನಿಂದಾಗಿ ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕರೆ ನೀಡಿದ್ದಾರೆ. ಇದರಿಂದ ಮನೆಯಲ್ಲಿ ಬಹುತೇಕ ನಾಗರಿಕರು ಉಳಿದುಕೊಳ್ಳುತ್ತಿದ್ದಾರೆ. ಇದು ಮೊಬೈಲ್ ಇಂಟರ್​ನೆಟ್​ ಬಳಕೆಯಲ್ಲಿ ಯಥೇಚ್ಛ ಪ್ರಮಾಣದ ಏರಿಕೆಗೆ ಕಾರಣವಾಗಿದೆ. ಸೆಲ್ಯುಲಾರ್ ನೆಟ್‌ವರ್ಕ್ ಸೌಕರ್ಯದ ಮೇಲೆ ಬಳಕೆಯ ಸಂಭಾವ್ಯ ಪರಿಣಾಮದ ಬಗ್ಗೆ ಸರ್ಕಾರ ಮತ್ತು ಟೆಲಿಕಾಂ ಆಪರೇಟರ್‌ಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಡಿಜಿಟಲ್ ಉದ್ಯಮವು ವ್ಯಾಪಕ ಬಳಕೆಯ ಸಂಭಾವ್ಯ ಸವಾಲಿನ ಬಗ್ಗೆ ಈಗಾಗಲೇ ಸ್ಪಷ್ಟವಾಗಿ ಅರಿತುಕೊಂಡಿದೆ. ಬಳಕೆದಾರರು ಎಲ್ಲಿ ಬೇಕಾದರೂ ಮತ್ತು ಯಾವಾಗ ಬೇಕಾದರೂ ಮೊಬೈಲ್ ನೆಟ್‌ವರ್ಕ್‌ ಸೇವೆ ಪಡೆಯಬಹುದಾಗಿದೆ. ನೆಟ್​ವರ್ಕ್​ ಸೇವೆಯಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲು ಆಪರೇಟರ್​ಗಳು ಬದ್ಧವಾಗಿದ್ದಾರೆ. ಇದನ್ನು ಕಾರ್ಯಗತಗೊಳಿಸಲು ಸ್ಟಾರ್ ಆ್ಯಂಡ್​ ಡಿಸ್ನಿ ಇಂಡಿಯಾದ ಅಧ್ಯಕ್ಷ ಉದಯ್ ಶಂಕರ್ ಅವರು ಡಿಜಿಟಲ್ ಉದ್ಯಮದ ಪ್ರಮುಖ ಪಾಲುದಾರರೊಂದಿಗೆ ಸಭೆ ಆಯೋಜಿಸಿದ್ದರು.

ಈ ಸಭೆಯಲ್ಲಿ ಎನ್‌ಪಿ ಸಿಂಗ್ (ಸೋನಿ), ಸಂಜಯ್ ಗುಪ್ತಾ (ಗೂಗಲ್), ಅಜಿತ್ ಮೋಹನ್ (ಫೇಸ್‌ಬುಕ್), ಸುಧಾಂಶು ವ್ಯಾಟ್ಸ್ (ವಯಾಕಾಮ್ 18), ಗೌರವ್ ಗಾಂಧಿ (ಅಮೆಜಾನ್ ಪ್ರೈಮ್ ವಿಡಿಯೋ), ಪುನೀತ್ ಗೋಯೆಂಕಾ (ಝೀ), ನಿಖಿಲ್ ಗಾಂಧಿ (ಟಿಕ್​ಟಾಕ್), ಅಂಬಿಕಾ ಖುರಾನಾ (ನೆಟ್​ಫ್ಲಿಕ್ಸ್​), ಕರಣ್ ಬೇಡಿ (ಎಂಎಕ್ಸ್ ಪ್ಲೇಯರ್) ಮತ್ತು ವರುಣ್ ನಾರಂಗ್ (ಹಾಟ್​ಸ್ಟಾರ್) ಭಾಗವಹಿಸಿದ್ದರು.

ಡಿಜಿಟಲ್ ಉದ್ಯಮವು ರಾಷ್ಟ್ರದ ಗ್ರಾಹಕರ ಹಿತದೃಷ್ಟಿಯಿಂದ ತಕ್ಷಣ ಅಗತ್ಯವಾದ ಕಾರ್ಯ ಸೇವೆಗಳನ್ನು ಒದಗಿಸಲು ನಿರ್ಧರಿಸಿದೆ. ಸೆಲ್ಯುಲಾರ್ ನೆಟ್‌ವರ್ಕ್‌ನ ದೃಢತೆಯನ್ನು ಖಚಿತಪಡಿಸಲಿದೆ. ಎಲ್ಲಾ ಕಂಪನಿಗಳು ತಕ್ಷಣವೇ ಹೆಚ್‌ಡಿ ಮತ್ತು ಅಲ್ಟ್ರಾ-ಹೆಚ್‌ಡಿ ಸ್ಟ್ರೀಮಿಂಗ್ ಅಭಾವವನ್ನು ಎಸ್‌ಡಿಗೆ ಮಾಡುವುದು ಅಥವಾ ಎಸ್‌ಡಿ ಸೇವೆಯನ್ನು ಮಾತ್ರ ನೀಡುವುದು ಸೇರಿದಂತೆ ಸೆಲ್ಯುಲಾರ್ ನೆಟ್‌ವರ್ಕ್‌ಗಳಲ್ಲಿ 480ಪಿ ಗಿಂತ ಹೆಚ್ಚಿಲ್ಲದ ಕ್ರಮಗಳನ್ನು ಅಳವಡಿಸಿಕೊಳ್ಳುವ ಸರ್ವಾನುಮತದ ತೀರ್ಮಾನಕ್ಕೆ ಬಂದವು. ಈ ಸ್ವಯಂಪ್ರೇರಿತ ಕ್ರಮಗಳು ಏಪ್ರಿಲ್ 14ರವರೆಗೆ ಜಾರಿಯಲ್ಲಿರುತ್ತವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.