ನವದೆಹಲಿ: ದೀಪಾವಳಿ ಹಬ್ಬದ ಸಂಭ್ರಮಾಚರಣೆಯ ವೇಳೆ ಪಟಾಕಿ ಸಿಡಿದು ಗಾಯಗೊಂಡರೆ ಚಿಕಿತ್ಸಾ ವೆಚ್ಚ ಭರಿಸುವಂತಹ ವಿಮಾ ಸೌಲಭ್ಯಗಳು ಬಜಾಜ್ ಫಿನ್‌ಸರ್ವ್ ಕಲ್ಪಿಸುತ್ತಿದೆ.
ಬಜಾಜ್ ಫಿನ್‌ಸರ್ವ್‌ನಿಂದ ಫೈರ್‌ಕ್ರ್ಯಾಕರ್ ವಿಮೆಯನ್ನು ಪರಿಚಯಿಸುತ್ತಿದೆ. ಒಂದು ವೇಳೆ ಪಟಾಕಿ ಸಿಡಿಸುವಾಗ ವ್ಯಕ್ತಿ/ ಮಕ್ಕಳು ಗಾಯಗೊಂಡರೇ 2 ಲಕ್ಷ ರೂ.ವರೆಗೆ ಚಿಕಿತ್ಸಾ ಮೊತ್ತ ದೊರೆಯಲಿದೆ. ಪ್ರಿಮಿಯಂ ಮೊತ್ತ ₹ 549ರಿಂದ ಆರಂಭವಾಗಲಿದೆ.
ಭಾಗಶಃ ಅಥವಾ ಶಾಶ್ವತ ಅಂಗವೈಕಲ್ಯದ ಆದರೆ ಪಾಲಿಸಿದಾರರು 1 ಲಕ್ಷ ರೂ.ಗಳ ವಿಮಾ ಸಹಾಯ ಮೊತ್ತ ಪಡೆಯಬಹುದು. ಕಣ್ಣುಗಳ ದೃಷ್ಟಿ ಕಳೆದುಕೊಳ್ಳುವುದು, ದೈಹಿಕ ಅಂಗವೈಕಲ್ಯದಂತಹ ಪರಿಹಾರಕ್ಕೆ ಪಾಲಿಸಿದಾರರ ನಿಗದಿತ ನಿಯಮಗಳಿಗೆ ಅನುಸಾರವಾಗಿ ವಾರಕ್ಕೆ 1,000 ರೂ.ಗಳವರೆಗೆ ಪರಿಹಾರ ಮೊತ್ತ ಪಡೆಯಬಹುದು.
ತೀವ್ರವಾದ ಸುಟ್ಟಗಾಯಗಳು, ಕಣ್ಣಿನ ಆಘಾತ ಮತ್ತು ಗಂಭೀರ ಪರಿಣಾಮದ ಗಾಯಗಳಾದರೇ ತಕ್ಷಣವೆ ಗಮನಕ್ಕೆ ತರಬೇಕು. ಫೈರ್‌ಕ್ರ್ಯಾಕರ್ ವಿಮೆಯು ಗ್ರಾಹಕರಿಗೆ ಆಂಬ್ಯುಲೆನ್ಸ್ ಶುಲ್ಕವಾಗಿ 25 ಸಾವಿರ ರೂ. ಸಿಗಲಿದೆ. ಆಸ್ಪತ್ರೆಗೆ ದಾಖಲಾಗಿ ತೀವ್ರವಾದ ಗಂಭೀರ ಗಾಯವಾಗಿದ್ದರೇ 2 ಲಕ್ಷ ರೂ.ವರೆಗೆ ಆರೈಕೆ ನಿಧಿ ಪಡೆಯಬಹುದು.
ಫೈರ್‌ಕ್ರ್ಯಾಕರ್ ವಿಮೆ ಪಡೆಯ ಬಯಸುವವರು customercare@bajajallianz.co.in ಇ-ಮೇಲ್ ಅಥವಾ 1800-209-1021ಗೆ ಕರೆ ಮಾಡಬಹುದು.