ನವದೆಹಲಿ: ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್, ಪತ್ನಿ ಬಿಂದು ಮತ್ತು ಅವಂತ ರಿಯಾಲ್ಟಿ ಪ್ರವರ್ತಕ ಗೌತಮ್ ಥಾಪರ್ ವಿರುದ್ಧ ಸಿಬಿಐ ಹೊಸ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
ಕೇಂದ್ರೀಯ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ದೂರು ದಾಖಲಿಸಿಕೊಂಡ ಪ್ರಕರಣವು ಅಮೃತ ಶೆರ್ಗಿಲ್ ಬಂಗಲೆ ಒಪ್ಪಂದಕ್ಕೆ ಸಂಬಂಧಿಸಿದ್ದಾಗಿದೆ. ಗೌತಮ್ ಥಾಪರ್, ಕಂಪೆನಿಗಳಿಗೆ 1,500 ಕೋಟಿ ರೂ. ಸಾಲ ನೀಡಿದ್ದಕ್ಕೆ ಲಂಚ ಪಡೆದಿದ್ದಾರೆ ಎಂಬ ಆರೋಪದ ಬಗ್ಗೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ದೆಹಲಿ ಮತ್ತು ಮುಂಬೈನಲ್ಲಿ ಕಪೂರ್, ಪತ್ನಿ ಬಿಂದು ಹಾಗು ಥಾಪರ್ ಮತ್ತು ಅವರ ಕಂಪೆನಿಗಳಿಗೆ ಸಂಬಂಧಿಸಿರುವ ಬ್ಲಿಸ್ ಅಬೋಡ್ ಕಚೇರಿ ಮತ್ತು ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಸೇರಿದಂತೆ ಅನೇಕ ಸ್ಥಳಗಳಲ್ಲಿ ಸಿಬಿಐ ಶೋಧ ಕಾರ್ಯ ನಡೆಸುತ್ತಿದೆ.