ನವದೆಹಲಿ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ 'ಭಾರತ್ ಸಂಚಾರ್ ನಿಗಮ ನಿಯಮಿತ (ಬಿಎಸ್ಎನ್ಎಲ್) ಸುಮಾರು 54 ಸಾವಿರ ಉದ್ಯೋಗಿಗಳನ್ನು ಕೈಬಿಡುವ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದೆ.
ಸಾವಿರಾರು ಕೋಟಿ ನಷ್ಟದ ಕೂಪದಲ್ಲಿರುವ ಬಿಎಸ್ಎನ್ಎಲ್ ಹೊರ ಬರಬೇಕಾಗದರೆ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದರ ಕುರಿತು ಸಮಗ್ರವಾಗಿ ಅಧ್ಯಯನ ಮಾಡಲು ತಜ್ಞರ ಸಮಿತಿ ರಚಿಸಲಾಯಿತು. ಸಮಿತಿಯ 3 ಸದಸ್ಯರು 10 ಶಿಫಾಸುಗಳನ್ನು ಆಡಳಿತ ಮಂಡಳಿ ಮುಂದಿಟಿದೆ. ಅದರಲ್ಲಿ ಮೂರು ಅಂಶಗಳನ್ನು ಜಾರಿ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದು, ಸುಮಾರು 54 ಸಾವಿರ ಸಿಬ್ಬಂದಿ ತಮ್ಮ ಕೆಲಸವನ್ನು ಕಳೆದುಕೊಳ್ಳಲಿದ್ದಾರೆ.
ಸಮಿತಿಯ ಶಿಫಾರಸು ಮೇರೆಗೆ ಕೇಂದ್ರದ ಮುಂದೆ ಬಿಎಸ್ಎನ್ಎಲ್ ಪ್ರಸ್ತಾಪಿಸಿದೆ. 'ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ್ರಸ್ತಾವನೆಯನ್ನು ತಡೆಹಿಡಿದಿದೆ. ಮುಂದಿನ ನಿರ್ದೇಶನದವರೆಗೆ ಯಥಾಸ್ಥಿತಿಯಲ್ಲಿ ಮುಂದುವರಿಯುವಂತೆ ಆದೇಶಿಸಿದೆ ಎಂದು ಹೇಳಲಾಗುತ್ತಿದೆ.
ನಿವೃತ್ತಿ ವಯೋಮಿತಿ ಇಳಿಕೆ, 50 ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದ ಸಿಬ್ಬಂದಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್ಎಸ್) ಘೋಷಿಸುವ ಶಿಫಾರಸನ್ನು ಮಂಡಳಿ ಗ್ರೀನ್ ಸಿಗ್ನಲ್ ನೀಡಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇದು ಜಾರಿಯಾದರೆ ಸುಮಾರು 54,451 ಹುದ್ದೆ ಖಾಲಿಯಾಗಲಿದೆ.
ಸಂಸ್ಥೆಯ ಒಟ್ಟು ಉದ್ಯೋಗಿಗಳ ಸಂಖ್ಯೆಯಲ್ಲಿ ಶೇ 31ರಷ್ಟು (1,74,312 ಸಿಬ್ಬಂದಿ) ಕಡಿತವಾಗಲಿದೆ. ವಾರ್ಷಿಕ ಸುಮಾರು ₹ 2 ಸಾವಿರ ಕೋಟಿ ಉಳಿಯಲಿದೆ ಎಂದು ಅಂದಾಜಿಸಲಾಗಿದೆ. ಈಗಿನ ಸ್ಪರ್ಧಾತ್ಮಕತೆಗೆ ತಕ್ಕಂತೆ 4ಜಿ ತರಂಗಾಂತರದ ವೇಗ ಹೆಚ್ಚಿಸುವ ಶಿಫಾರಸಿಗೆ ಬಿಎಸ್ಎನ್ಎಲ್ ಮಂಡಳಿ ಸಮ್ಮತಿಸಿ ಸೂಚಿಸಿದೆ ಎಂದು ಹೇಳಲಾಗುತ್ತಿದೆ.