ETV Bharat / business

ರತನ್​ಗೆ 'ಭಾರತ ರತ್ನ' ನೀಡಿ... ಟ್ವಿಟ್ಟರ್​ನಲ್ಲಿ ಭರ್ಜರಿ ಟಾಕ್​: ನಿಮ್ಮ ಅಭಿಪ್ರಾಯವೇನು? - Bharat Ratna

ಕೋವಿಡ್ ವಿರುದ್ಧದ ಭಾರತದ ಹೋರಾಟಕ್ಕೆ ಟಾಟಾ ಸಮೂಹದಿಂದ 1,500 ಕೋಟಿ ರೂ. ದೇಣಿಗೆ ನೀಡಿದ್ದು ಸಾಕಷ್ಟು ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈಗ ಅದೇ ನೆಟ್ಟಿಗರು ಕೇಂದ್ರ ಸರ್ಕಾರ ರತನ್​ ಟಾಟಾ ಅವರನ್ನು ಭಾರತ ರತ್ನ ಪ್ರಶಸ್ತಿಗೆ ಪರಿಗಣಿಸಬೇಕು ಎಂದು ಸರಣಿ ಟ್ವೀಟ್ ಮಾಡುತ್ತಿದ್ದಾರೆ.

Ratan Tata
ರತನ್ ಟಾಟಾ
author img

By

Published : Apr 11, 2020, 5:00 PM IST

ನವದೆಹಲಿ: ದೇಶಿ- ವಿದೇಶಗಳಲ್ಲಿ ಹಲವು ಉದ್ಯಮಗಳನ್ನು ಸ್ಥಾಪಿಸಿರುವ ಭಾರತದ ಖ್ಯಾತ ಉದ್ಯಮಿ/ ಟಾಟಾ ಗ್ರೂಪ್​ನ ಮಾಜಿ ಮುಖ್ಯಸ್ಥ ರತನ್ ಟಾಟಾ ಅವರಿಗೆ ಭಾರತದ ಅತ್ಯುನ್ನತ ಪ್ರಶಸ್ತಿಯಾದ 'ಭಾರತ ರತ್ಮ' ನೀಡಿ ಗೌರವಿಸಬೇಕು ಎಂದು ಟ್ವಿಟ್ಟರ್​ನಲ್ಲಿ ದೊಡ್ಡ ಮಟ್ಟದ ಅಭಿಯಾನ ಶುರುವಾಗಿದೆ.

ಕೋವಿಡ್ ವಿರುದ್ಧದ ಭಾರತದ ಹೋರಾಟಕ್ಕೆ ಟಾಟಾ ಸಮೂಹದಿಂದ 1,500 ಕೋಟಿ ರೂ. ದೇಣಿಗೆ ನೀಡಿದ್ದು ಸಾಕಷ್ಟು ನೆಟ್ಟಿಗರು ಪ್ರಶಂಸಿಸಿದರು. ಈಗ ಅದೇ ನೆಟ್ಟಿಗರು ಕೇಂದ್ರ ಸರ್ಕಾರ ರತನ್​ ಟಾಟಾ ಅವರನ್ನು ಭಾರತ ರತ್ನ ಪ್ರಶಸ್ತಿಗೆ ಪರಿಗಣಿಸಬೇಕು ಎಂದು ಸರಣಿ ಟ್ವೀಟ್ ಮಾಡುತ್ತಿದ್ದಾರೆ.

ಕೇವಲ ಟ್ವೀಟ್ ಅಭಿಯಾನ ಆಗಿದ್ದರೇ ಈ ಬಗ್ಗೆ ಅಷ್ಟೊಂದು ಯೋಚಿಸಬೇಕಾಗಿರಲಿಲ್ಲ. ಪ್ರಶಸ್ತಿ ನೀಡುವಂತೆ ಕೋರಿ ಆನ್​ಲೈನ್ ಪಿಟಿಷನ್ ಕೂಡ ಸಿದ್ಧ ಮಾಡಿದ್ದು. ಇಲ್ಲಿ 14 ಲಕ್ಷಕ್ಕೂ ಅಧಿಕ ಜನ ಸಹಿ ಹಾಕಿದ್ದಾರೆ ಎನ್ನಲಾಗುತ್ತಿದೆ.

'ರತನ್​ ಟಾಟಾ ಅವರಿಗೆ ಪ್ರಶಸ್ತಿ ನೀಡಬೇಕೇ ಎಂಬುದನ್ನು ಚಿಂತಿಸುತ್ತಿದ್ದರೇ ಅವರು ನೀಡಿದ ದೇಣಿಗೆಗಳತ್ತ ಒಮ್ಮೆ ನೋಡಿ' ಎಂದು ಅಕ್ಷಯ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಭಾರತದ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿಯನ್ನು ರತನ್ ಟಾಟಾ ಅವರು ಬದುಕಿರುವಾಗಲೇ ನೀಡಿ ಎಂದು ರವಿ ರೈ ಎಂಬುವವರು ಬರೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.