ETV Bharat / business

ಯೆಸ್​ ಬ್ಯಾಂಕ್ ಬಿಕ್ಕಟ್ಟಿಗೆ UPA ಉತ್ತರಿಸುವಂತೆ ಪ್ರಶ್ನಿಸಿದ ಸೀತಾರಾಮನ್​ಗೆ ಚಿದು ಪ್ರತ್ಯುತ್ತರ - ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಸುದ್ದಿಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮನ್​ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ ಯೆಸ್ ಬ್ಯಾಂಕ್‌ನಲ್ಲಿ ನಡೆದ ಸಂಗತಿಗಳಿಗೆ ಉತ್ತರಿಸಲಾಗುವುದಿಲ್ಲ. ಈಗ ಸಂಭವಿಸಿದ ಸಂಗತಿಗಳ ಬಗ್ಗೆ ನಾನು ಉತ್ತರಗಳನ್ನು ನೀಡುತ್ತಿದ್ದೇನೆ ಎಂದಿದ್ದರು.

Yes Bank crisis
ಯೆಸ್ ಬ್ಯಾಂಕ್
author img

By

Published : Mar 6, 2020, 11:34 PM IST

ನವದೆಹಲಿ: ಯುಪಿಎ ಸರ್ಕಾರದ ಅವಧಿಯಲ್ಲಿ ಯೆಸ್ ಬ್ಯಾಂಕ್‌ನಲ್ಲಿ ನಡೆದ ಸಂಗತಿಗಳಿಗೆ ಆ ಸರ್ಕಾರವೇ ಉತ್ತರಿಸಬೇಕು ಎಂದು ಹೇಳಿಕೆ ನೀಡಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರಿಗೆ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಪ್ರತಿಕ್ರಿಯೆ ನೀಡಿದ್ದಾರೆ.

ಚಿದಂಬರಂ ಅವರು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ, ಆರು ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಹಣಕಾಸು ಸಂಸ್ಥೆಗಳನ್ನು ನಿಯಂತ್ರಿಸುವ ಅವರ ಸಾಮರ್ಥ್ಯವು ಬಹಿರಂಗವಾಗಿದೆ. ಮೊದಲು ಪಿಎಂಸಿ ಬ್ಯಾಂಕ್ ಆಯಿತು. ಈಗ ಯೆಸ್​ ಬ್ಯಾಂಕ್ ಆಗಿದೆ. ಸರ್ಕಾರಕ್ಕೆ ಯಾವುದೇ ಕಾಳಜಿ ಇಲ್ಲವೇ? ಅದು ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಹುದೇ? ಲೈನ್​ನಲ್ಲಿ ಮೂರನೇ ಬ್ಯಾಂಕ್ ಏನಾದರು ಇದೆಯೇ ಎಂದು ಪ್ರಶ್ನಿಸಿದ್ದಾರೆ.

  • BJP has been in power for six years. Their ability to govern and regulate financial institutions stands exposed

    First, it was PMC Bank. Now it is YES Bank. Is the government concerned at all? Can it shirk its responsibility?

    Is there a third bank in the line?

    — P. Chidambaram (@PChidambaram_IN) March 6, 2020 " class="align-text-top noRightClick twitterSection" data=" ">

ಮತ್ತೊಂದು ಟ್ವೀಟ್​ನಲ್ಲಿ, 2017ರಿಂದ ಬಿಕ್ಕಟ್ಟು ಉಂಟಾಗುತ್ತಿರುವುದು ಸ್ಪಷ್ಟವಾಗಿದೆ. ಸರ್ಕಾರವು ಆರ್‌ಬಿಐ ಜೊತೆ ಮಾತನಾಡುವುದು ಹೊರತುಪಡಿಸಿ ಪ್ರಾಯೋಗಿಕವಾಗಿ ಏನನ್ನೂ ಮಾಡಲಿಲ್ಲ ಎಂದು ಟೀಕಿಸಿದರು.

ನಿರೀಕ್ಷೆಯಂತೆ 2017ರಲ್ಲಿ ಬಿಕ್ಕಟ್ಟು ಆರಂಭವಾಯಿತು ಎಂಬ ತನ್ನ ಸ್ವಂತ ಹೇಳಿಕೆಯ ವಿರುದ್ಧವಾಗಿ ಯುಪಿಎ ಯೆಸ್ ಬ್ಯಾಂಕಿನ ಕುಸಿತಕ್ಕೆ ಕಾರಣವೆಂದು ಹಣಕಾಸು ಸಚಿವೆ ಪರೋಕ್ಷವಾಗಿ ದೂಷಿಸಿದ್ದಾರೆ ಎಂದು ಪ್ರತ್ಯುತ್ತರ ನೀಡಿದರು.

  • As expected, the FM has indirectly blamed the UPA for the near collapse of YES Bank contrary to her own claim that the crisis started in 2017.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.