ನವದೆಹಲಿ : ಫೆಬ್ರವರಿ ಮಾಸಿಕದಲ್ಲಿ ಬಜಾಜ್ ಆಟೋ ಒಟ್ಟು ಮಾರಾಟದಲ್ಲಿ ಶೇ.6ರಷ್ಟು ಏರಿಕೆ ಕಂಡಿದೆ. 3,75,017 ಯುನಿಟ್ಗಳಷ್ಟು ಮಾರಾಟವಾಗಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 3,54,913 ಯುನಿಟ್ ಮಾರಾಟವಾಗಿದ್ದವು.
2020ರ ಫೆಬ್ರವರಿಯಲ್ಲಿ ಮಾರಾಟವಾದ 1,68,747 ಹೂನಿಟ್ಗಳಿಗೆ ಹೋಲಿಸಿದರೆ ಕಳೆದ ತಿಂಗಳು ಒಟ್ಟು ದೇಶೀಯ ಮಾರಾಟವು ಶೇ.2ರಷ್ಟು ಇಳಿಕೆಯಾಗಿ 1,64,811ಕ್ಕೆ ತಲುಪಿದೆ ಎಂದು ಬಜಾಜ್ ಆಟೋ ನಿಯಂತ್ರಕ ಪೈಲಿಂಗ್ನಲ್ಲಿ ತಿಳಿಸಿದೆ.
ಬಜಾಜ್ ಆಟೋದ ಒಟ್ಟು ದ್ವಿಚಕ್ರ ವಾಹನಗಳ ಮಾರಾಟವು ಶೇ.7ರಷ್ಟು ಏರಿಕೆ ಕಂಡು 3,32,563ಕ್ಕೆ ತಲುಪಿದೆ. ಹಿಂದಿನ ವರ್ಷದ 3,10,222 ಯುನಿಟ್ ಮಾರಾಟ ಆಗಿತ್ತು. ಒಟ್ಟಾರೆ ವಾಣಿಜ್ಯ ವಾಹನಗಳ ಮಾರಾಟವು ಶೇ.5ರಷ್ಟು ಕುಸಿದು 42,454ಕ್ಕೆ ತಲುಪಿದೆ. ಹಿಂದಿನ ವರ್ಷ ಇದೇ ಮಾಸಿಕದಲ್ಲಿ 44,691 ಯುನಿಟ್ ಮಾರಾಟ ಆಗಿದ್ದವು.
ಇದನ್ನೂ ಓದಿ: ಜನರಿಗೆ ಪೆಟ್ರೋಲ್ ಗಾಯದ ಮೇಲೆ ಸಿಲಿಂಡರ್ ಬರೆ: 5 ದಿನದಲ್ಲಿ ಮತ್ತೆ LPG ದರ ಏರಿಕೆ!
2020ರ ಫೆಬ್ರವರಿಯಲ್ಲಿ 1,86,166 ಯುನಿಟ್‌ಗಳಿಗೆ ಹೋಲಿಸಿದರೆ ಕಳೆದ ತಿಂಗಳು ತನ್ನ ಒಟ್ಟು ರಫ್ತು ಶೇ.13ರಷ್ಟು ಏರಿಕೆಯಾಗಿ 2,10,206ಕ್ಕೆ ತಲುಪಿದೆ ಎಂದು ಬಜಾಜ್ ಆಟೋ ತಿಳಿಸಿದೆ.