ETV Bharat / business

Rcom ಕಥೆ ಮುಗಿಯಿತೇ?'ಅನಿಲ್​ ಅಂಬಾನಿ ಇನ್ಮುಂದೆ ಶ್ರೀಮಂತ ಉದ್ಯಮಿ ಅಲ್ಲ': ಇಂಗ್ಲೆಂಡ್ ನ್ಯಾಯಾಲಯ - ಅನಿಲ್ ಅಂಬಾನಿ ರಿಲಯನ್ಸ್​ ಕಮ್ಯುನಿಕೇಷನ್

ಇಂಡಸ್ಟ್ರಿಯಲ್ ಆ್ಯಂಡ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ ಲಿಮಿಟೆಡ್​ನ ಮುಂಬೈ ಶಾಖೆ, ಚೀನಾ ಡೆವಲಪ್​ಮೆಂಟ್ ಬ್ಯಾಂಕ್ ಮತ್ತು ಎಕ್ಸಿಮ್ ಬ್ಯಾಂಕ್ ಆಫ್ ಚೀನಾ ಅನಿಲ್​ ಅಂಬಾನಿಯ ವಿರುದ್ಧ ವಿವರಣೆಯ ತೀರ್ಪನ್ನು ಕೋರಿದ್ದವು.

Anil Ambani
ಅನಿಲ್ ಅಂಬಾನಿ
author img

By

Published : Feb 7, 2020, 9:14 PM IST

Updated : Feb 7, 2020, 9:55 PM IST

ಲಂಡನ್: 'ರಿಲಾಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಶ್ರೀಮಂತ ಉದ್ಯಮಿ ಆಗಿದ್ದರು. ಈಗ ಶ್ರೀಮಂತ ಉದ್ಯಮಿ ಅಲ್ಲ' ಎಂದು ಇಂಗ್ಲೆಂಡ್​ನ ಹೈಕೋರ್ಟ್​ ಹೇಳಿದೆ.

ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ನಡೆದ ಅಚ್ಚರಿಯ ಘಟನೆಗಳು ಇದರ ಮೇಲೆ ಪರಿಣಾಮ ಬೀರಿಲ್ಲ ಎಂದು ಅನಿಲ್​ ಅಂಬಾನಿ ವಕೀಲರ ತಂಡ ನ್ಯಾಯಾಲಯಕ್ಕೆ ಮನವರಿಕೆ ಮಾಡಿತ್ತು. ಭಾರತೀಯ ಉದ್ಯಮಿಯಿಂದ 680 ಮಿಲಿಯನ್ ಡಾಲರ್ ಸಾಲ ವಸೂಲಿ ಮಾಡಲು ಚೀನಾದ ಉನ್ನತ ಬ್ಯಾಂಕ್​ಗಳು ಇಂಗ್ಲೆಂಡ್​ ನ್ಯಾಯಾಲಯದಲ್ಲಿ ಬಿಡ್ ಸಲ್ಲಿಸಿವೆ.

ಇಂಡಸ್ಟ್ರಿಯಲ್ ಆ್ಯಂಡ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ ಲಿಮಿಟೆಡ್​ನ ಮುಂಬೈ ಶಾಖೆ, ಚೀನಾ ಡೆವಲಪ್​ಮೆಂಟ್ ಬ್ಯಾಂಕ್ ಮತ್ತು ಎಕ್ಸಿಮ್ ಬ್ಯಾಂಕ್ ಆಫ್ ಚೀನಾ ಅನಿಲ್​ ಅಂಬಾನಿಯ ವಿರುದ್ಧ ವಿವರಣೆಯ ತೀರ್ಪನ್ನು ಕೋರಿದ್ದವು. 2012ರ ಫೆಬ್ರವರಿಯಲ್ಲಿ ಸುಮಾರು 925 ಮಿಲಿಯನ್ ಡಾಲರ್ ಸಾಲ ಮರುಪಾವತಿಯ ವೈಯಕ್ತಿಕ ಖಾತರಿ ಉಲ್ಲಂಘಿಸಿದ್ದಾರೆ ಎಂದು ಕೂಡ ಅವು ಆರೋಪಿಸಿದ್ದವು.

60ರ ಹರೆಯದ ಅನಿಲ್​ ಅಂಬಾನಿ, ಯಾವುದೇ ಗ್ಯಾರಂಟಿ ಅಧಿಕಾರ ನೀಡುವುದನ್ನು ನಿರಾಕರಿಸಿದ್ದಾರೆ. ಇದರ ಪರಿಣಾಮವಾಗಿ ಇಂಗ್ಲೆಂಡ್​ನ ಹೈಕೋರ್ಟ್ ಸಾಲ ಒಪ್ಪಂದದ ನಿಯಮಗಳ ಭಾಗವಾಗಿ ವಿಚಾರಣೆ ನಡೆಸಲು ಒಪ್ಪಿಕೊಂಡಿದೆ.

ರಿಲಾಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಮ್) ಮುಖ್ಯಸ್ಥನ ವಿರುದ್ಧ ಕಳೆದ ವರ್ಷ ಮೂರು ಚೀನಿ ಬ್ಯಾಂಕ್​ಗಳಿಗೆ ನೀಡಲಾದ ಷರತ್ತುಬದ್ಧ ಆದೇಶಕ್ಕೆ ಷರತ್ತುಗಳನ್ನು ವಿಧಿಸಲು ಇಂಗ್ಲೆಂಡ್​ನ ಲಂಡನ್‌ ಹೈಕೋರ್ಟ್‌ ಮತ್ತು ವೇಲ್ಸ್‌ನ ವಾಣಿಜ್ಯ ವಿಭಾಗದಲ್ಲಿ ವಿಚಾರಣೆ ನಡೆಯಿತು. ಅಂಬಾನಿ ಅವರ ತಂಡ, ಹಣ ಪಾವತಿಸಲು ಅವರು ಪ್ರಯತ್ನಿಸಿದ್ದರು. ಜವಾಬ್ದಾರಿ ತೆಗೆದುಕೊಂಡ ನಂತರ ನಿವ್ವಳ ಮೌಲ್ಯ ಶೂನ್ಯವಾಗಿತ್ತು ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಅಂಬಾನಿಯ ಹೂಡಿಕೆಗಳ ಮೌಲ್ಯವು 2012ರಿಂದ ಕುಸಿದಿದೆ. ವಿಶೇಷವಾಗಿ ಭಾರತೀಯ ಟೆಲಿಕಾಂ ಕ್ಷೇತ್ರವು ಭಾರತ ಸರ್ಕಾರದ ಬದಲಾವಣೆಯಿಂದ ತೀವ್ರ ಹೊಡೆತ ಬಿದ್ದಿದೆ. ಮುಖ್ಯವಾಗಿ ತರಂಗಾಂತರ ನೀತಿಗಳ ಬದಲಾವಣೆಯಿಂದ ಇದು ತುಸು ಹೆಚ್ಚಾಗಿದೆ.

'ಅಂಬಾನಿಯ ಹೂಡಿಕೆಗಳು 2012ರಲ್ಲಿ 7 ಬಿಲಿಯನ್ ಡಾಲರ್‌ಗಿಂತಲೂ ಅಧಿಕವಾಗಿತ್ತು. ಅವುಗಳು ಮೌಲ್ಯ ಈಗ 89 ಮಿಲಿಯನ್ ಡಾಲರ್‌ಗಳಷ್ಟಾಗಿದೆ. ಅವರು ಜವಾಬ್ದಾರಿ ವಹಿಸಿಕೊಂಡ ನಂತರ ನಿವ್ವಳ ಮೌಲ್ಯ ಶೂನ್ಯವಾಗಿರುತ್ತದೆ. ಸರಳವಾಗಿ ಹೇಳುವುದಾದರೆ ಅವರು ಶ್ರೀಮಂತ ಉದ್ಯಮಿಯಾಗಿದ್ದರು. ಈಗ ಅವರು ಅಲ್ಲ' ಎಂದು ನ್ಯಾಯಮೂರ್ತಿ ರಾಬರ್ಟ್ ಹೋವೆ ಹೇಳಿದ್ದಾರೆ.

Last Updated : Feb 7, 2020, 9:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.