ETV Bharat / business

ಕಣ್ಣಿಗೆ ಮಾಸ್ಕ್​ ಹಾಕಿಕೊಂಡು ರೈಲಲ್ಲಿ ನಿದ್ದೆಗೆ ಜಾರಿದ ಭೂಪ: ಆನಂದ್ ಮಹೀಂದ್ರಾ ಟ್ವೀಟ್ ವೈರಲ್​ - ಮುಂಬೈನಲ್ಲಿ ಕೋವಿಡ್

ಕೆಲವು ಸಮಸ್ಯೆಗಳಿಗೆ ಅಗ್ಗದ ಪರ್ಯಾಯ ಪರಿಹಾರಗಳನ್ನು ರೂಪಿಸುವ ಜಾಣ್ಮೆ ಹೊಂದಿರುವ ದೇಶದ ಜನರ ಚಾಣಕ್ಷತೆಯನ್ನು ಆನಂದ್ ಮಹೀಂದ್ರಾ ಯಾವಾಗಲೂ ಶ್ಲಾಘಿಸುತ್ತಾರೆ. ಇತ್ತೀಚಿನ ಫೋಟೋವೊಂದು ಮಹೀಂದ್ರಾ ಗ್ರೂಪ್ ಅಧ್ಯಕ್ಷರನ್ನು ಅಸಮಾಧಾನಗೊಳಿಸಿದೆ.

Tweet
Tweet
author img

By

Published : Feb 26, 2021, 5:04 PM IST

ನವದೆಹಲಿ: ನೆಟ್ಟಿಗರಲ್ಲಿ ಆಗಾಗೆ ಹರಿದಾಡುವ 'ಜುಗಾಡ್' (ಸಮಸ್ಯೆಗಳಿಗೆ ದೇಶೀಯ ಪರಿಹಾರ ಕಂಡುಕೊಳ್ಳುವ ವಿಧಾನ) ಎಂಬ ತಾತ್ಕಾಲಿಕ ಇನ್ನೋವೆಟಿವ್ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರ ಗಮನ ಸೆಳೆದಿದೆ.

ಕೆಲವು ಸಮಸ್ಯೆಗಳಿಗೆ ಅಗ್ಗದ ಪರ್ಯಾಯ ಪರಿಹಾರಗಳನ್ನು ರೂಪಿಸುವ ಜಾಣ್ಮೆ ಹೊಂದಿರುವ ದೇಶದ ಜನರ ಚಾಣಕ್ಷತೆಯನ್ನು ಆನಂದ್ ಮಹೀಂದ್ರಾ ಯಾವಾಗಲೂ ಶ್ಲಾಘಿಸುತ್ತಾರೆ. ಜುಗಾಡ್‌ನ ಇತ್ತೀಚಿನ ಫೋಟೋವೊಂದು ಮಹೀಂದ್ರಾ ಗ್ರೂಪ್ ಅಧ್ಯಕ್ಷರನ್ನು ಅಸಮಾಧಾನಗೊಳಿಸಿದೆ.

ಮಹೀಂದ್ರಾ ಅವರು ತಮ್ಮ ಟ್ವಿಟರ್​​ನಲ್ಲಿ ಯುವಕ ರೈಲಿನಲ್ಲಿ ಮಲಗಿರುವ ಫೋಟೋ ಹಂಚಿಕೊಂಡಿದ್ದಾರೆ. ಯುವಕನೊಬ್ಬ ರೈಲಿನಲ್ಲಿ ಮಲಗಿದ್ದು. ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಮಾಸ್ಕ್​ ಅನ್ನು ಮೂಗು ಮತ್ತು ಬಾಯಿಗೆ ಬದಲಾಗಿ ಅವನ ಕಣ್ಣುಗಳಿಗೆ ಹಾಕಿಕೊಂಡು ನಿದ್ದೆಗೆ ಜಾರಿದ್ದಾನೆ.

  • When you start looking for reasons behind the recent rise in Covid cases in Mumbai...(This is one jugaad that doesn’t deserve any applause.) pic.twitter.com/3FbyNR7ClM

    — anand mahindra (@anandmahindra) February 26, 2021 " class="align-text-top noRightClick twitterSection" data=" ">

ಮುಂಬೈನಲ್ಲಿ ಇತ್ತೀಚಿನ ಕೋವಿಡ್ ಪ್ರಕರಣಗಳ ಹೆಚ್ಚಳದ ಹಿಂದಿನ ಕಾರಣಗಳನ್ನು ನೀವು ಹುಡುಕಲು ಪ್ರಾರಂಭಿಸಿದಾಗ... (ಇದು ಯಾವುದೇ ಚಪ್ಪಾಳೆಗೆ ಅರ್ಹವಲ್ಲದ ಒಂದು ಜುಗಾಡ್.) ಎಂದು ಫೋಟೋ ಹಂಚಿಕೊಂಡು ಟ್ವಿಟರ್​ನಲ್ಲಿ ಬರೆದು ಕೊಂಡಿದ್ದಾರೆ. ಮಹೀಂದ್ರಾ ಅವರ ಈ ಟ್ವೀಟ್‌ಗೆ 4,000ಕ್ಕೂ ಹೆಚ್ಚು ಲೈಕ್‌ ಬಂದಿವೆ.)

ದೇಶದಲ್ಲಿ ಅತಿ ಹೆಚ್ಚು ಹಾನಿಗೊಳಗಾದ ನಗರಗಳಲ್ಲಿ ಮುಂಬೈ ಮೊದಲ ಸಾಲಿನಲ್ಲಿದೆ. ಇತ್ತೀಚಿನ ದಿನಗಳಲ್ಲಿ ಕೊರೊನಾ ವೈರಸ್ ಅಂಕಿಅಂಶಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಮಹಾರಾಷ್ಟ್ರವು ನಿತ್ಯ 5,000ಕ್ಕೂ ಹೆಚ್ಚು ಪ್ರಕರಣಗಳನ್ನು ವರದಿ ಮಾಡುತ್ತಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಇತ್ತೀಚಿನ ಏರಿಳಿತವನ್ನು ತಡೆಯದಿದ್ದರೆ, ಮತ್ತೊಂದು ಸುತ್ತಿನ ಲಾಕ್ ಡೌನ್ ವಿಧಿಸಬೇಕಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.