ETV Bharat / business

ಅಮೆಜಾನ್​​ನ ಶೇ.80ರಷ್ಟು ಉತ್ಪನ್ನ ಹೊರ ದೇಶದಿಂದ ಆಮದು, ಈ ದೇಶಗಳಿಗೆ ಸೇರ್ತಿದೆ ಭಾರತೀಯರ ದುಡ್ಡು

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನ ವ್ಯವಹಾರ ಮಾದರಿಗಳಿಂದ ತಯಾರಕರು ಅಥವಾ ವ್ಯಾಪಾರಿಗಳಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಅವರು ತಮ್ಮ ಉತ್ಪನ್ನಗಳನ್ನು ಹೆಚ್ಚಾಗಿ ಚೀನಾ ಮತ್ತು ಕೊರಿಯಾದಿಂದ ಆಮದು ಮಾಡಿಕೊಂಡು ಇಲ್ಲಿ ಮಾರಾಟ ಮಾಡುತ್ತಾರೆ. ಇದರಲ್ಲಿ ಶೇ 80ರಷ್ಟು ಉತ್ಪನ್ನಗಳು ಹೊರಗಿನಿಂದ ಬರುತ್ತಿವೆ ಹಾಗೂ ಡೆಲಿವರ್​ ಬಾಯ್​ನಂತಹ ಉದ್ಯೋಗಗಳನ್ನು ಸೃಷ್ಟಿಸುತ್ತಿವೆ ಎಂದು ಭಾರತದ ಅತಿಸಣ್ಣ ಮತ್ತು ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಅನಿಲ್ ಭರದ್ವಾಜ್ ಆರೋಪಿಸಿದ್ದಾರೆ.

e-commerce
ಇ ಕಾಮರ್ಸ್​
author img

By

Published : Jan 15, 2020, 6:07 PM IST

ನವದೆಹಲಿ: ಅಮೆಜಾನ್‌ನಂತಹ ಇ-ಕಾಮರ್ಸ್ ದೈತ್ಯರು ತಮ್ಮ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಮಾರಾಟವಾಗುವ ಶೇ 80ರಷ್ಟು ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಇದರಿಂದ ಸ್ಥಳೀಯ ಉದ್ಯಮಗಳಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ ಹಾಗೂ ವಿತರಣಾ ಹುಡುಗರಂತಹ (ಡೆಲಿವರ್ ಬಾಯ್​) ಉದ್ಯೋಗಗಳನ್ನು ಮಾತ್ರ ಸೃಷ್ಟಿ ಮಾಡುತ್ತಿವೆ ಎಂಬ ಆಪಾದನೆ ಕೇಳಿಬಂದಿದೆ.

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನ ವ್ಯವಹಾರ ಮಾದರಿಗಳಿಂದ ತಯಾರಕರು ಅಥವಾ ವ್ಯಾಪಾರಿಗಳಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಅವರು ತಮ್ಮ ಉತ್ಪನ್ನಗಳನ್ನು ಹೆಚ್ಚಾಗಿ ಚೀನಾ ಮತ್ತು ಕೊರಿಯಾದಿಂದ ಆಮದು ಮಾಡಿಕೊಂಡು ಇಲ್ಲಿ ಮಾರಾಟ ಮಾಡುತ್ತಾರೆ. ಇದರಲ್ಲಿ ಶೇ 80ರಷ್ಟು ಉತ್ಪನ್ನಗಳು ಹೊರಗಿನಿಂದ ಬರುತ್ತಿವೆ ಎಂದು ಭಾರತದ ಅತಿಸಣ್ಣ ಮತ್ತು ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳ ಒಕ್ಕೂಟ (FISME) ಪ್ರಧಾನ ಕಾರ್ಯದರ್ಶಿ ಅನಿಲ್ ಭರದ್ವಾಜ್ ಆರೋಪಿಸಿದ್ದಾರೆ.

ಜಾಗತಿಕ ಇ-ಕಾಮರ್ಸ್ ಕಂಪನಿಗಳು ಸಾಮಾನ್ಯವಾಗಿ ತಮ್ಮದೇ ಆದ ಆದ್ಯತಾ ಪೂರೈಕೆದಾರರ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಇದರ ಪರಿಣಾಮವಾಗಿ ಹೆಚ್ಚಿನ ಸಂಖ್ಯೆಯ ಸ್ಥಳೀಯ ತಯಾರಕರು ಮತ್ತು ವ್ಯಾಪಾರಿಗಳೇ ತುಂಬಿಕೊಂಡಿರುತ್ತಾರೆ. ಅತಿಯಾದ ರಿಯಾಯಿತಿ ಮತ್ತು ಆದ್ಯತೆಯ ಕಂಪನಿಗಳಿಂದ ಉತ್ಪನ್ನಗಳನ್ನು ಖರೀದಿಸುವುದು ಸ್ಪರ್ಧಾತ್ಮಕವಲ್ಲ ಎಂದರು.

ಅವರು ಸ್ಥಳೀಯ ಸರಬರಾಜುದಾರರಿಂದ ಉತ್ಪನ್ನಗಳನ್ನು ಖರೀದಿಸಿದರೂ ಸಹ ವಿಧಿಸಲಾಗುವ ಕಮಿಷನ್​ ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇಂತಹ ನ್ಯಾಯಯುತವಲ್ಲದ ವ್ಯಾಪರ ವಿಧಾನವನ್ನು ವಾಣಿಜ್ಯ ಸಚಿವಾಲಯಕ್ಕೆ ಅನೇಕ ಸಂದರ್ಭಗಳಲ್ಲಿ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.