ನವದೆಹಲಿ: ಇ - ಕಾಮರ್ಸ್ ದೈತ್ಯ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಕಂಪನಿಗಳು ಈ ತಿಂಗಳ ಕೊನೆಯಲ್ಲಿ ಆರಂಭವಾಗುವ ಹಬ್ಬದ ಮಾರಾಟದ ತಯಾರಿಯಲ್ಲಿ ತೊಡಗಿದ್ದು, ಪೂರೈಕೆ ಸರಪಳಿ, ಕೊನೆಯ ಮೈಲಿಯ ಗ್ರಾಹಕರ ಅಗತ್ಯಗಳನ್ನು ಪೂರೈಸಲು 1.4 ಲಕ್ಷಕ್ಕೂ ಹೆಚ್ಚು ತಾತ್ಕಾಲಿಕ ಉದ್ಯೋಗಗಳನ್ನು ನೇಮಿಸಿಕೊಳ್ಳಲಿದೆ.
ಭರ್ತಿ (ಫುಲ್ಫಿಲ್ಮೆಂಟ್) ಕೇಂದ್ರ, ವಿಂಗಡಣೆ (ಸಪರೇಷನ್) ಕೇಂದ್ರ, ವಿತರಣಾ (ಡಿಲಿವರಿ) ಕೇಂದ್ರ, ಪಾಲುದಾರರ ಸಂಪರ್ಕ ಮತ್ತು ಗ್ರಾಹಕ ಸೇವಾ ಕೇಂದ್ರಗಳಲ್ಲಿ 90,000ಕ್ಕೂ ಹೆಚ್ಚು ಸೀಸನಲ್ ಉದ್ಯೋಗಾವಕಾಶಗಳನ್ನು ನೇಮಿಸಿಕೊಳ್ಳಲಾಗುವುದು ಎಂದು ಅಮೆಜಾನ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ವಾಲ್ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್ ತನ್ನ ಪೂರೈಕೆ ಚೈನ್, ಲಾಜಿಸ್ಟಿಕ್ಸ್ (ಸರಕು) ವಿತರಣೆ ಮತ್ತು ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ 50,000 ನೇರ ಉದ್ಯೋಗಗಳನ್ನು ನೇಮಿಸಿಕೊಳ್ಳಲಿದೆ. ಮಾರಾಟದ ನೆಟ್‌ವರ್ಕ್ ಮೂಲಕ ಪರೋಕ್ಷ ಉದ್ಯೋಗಗಳನ್ನು ಕಳೆದ ವರ್ಷಕ್ಕಿಂತ ಶೇ 30ರಷ್ಟು ಹೆಚ್ಚಿಸುವ ನಿರೀಕ್ಷೆಯಿದೆ. ಇದು ಬಿಗ್ ಬಿಲಿಯನ್ ಡೇಸ್ ಮಾರಾಟದ ಅವಧಿಯಲ್ಲಿ 6.5 ಲಕ್ಷಕ್ಕೆ ತಲುಪಿದೆ ಎಂದು ಫ್ಲಿಫ್ಕಾರ್ಟ್ ತಿಳಿಸಿದೆ.